ಈ ಪುಟವನ್ನು ಪರಿಶೀಲಿಸಲಾಗಿದೆ

ಹಮಾಲ ಇಮಾಮ್‌‌ಸಾಬಿ
67

ಕೊಂಬೆಗಳು ಬಲಿತಂತೆ ಬೇಕೆ ಬೇರೆ ದಿಕ್ಭುಗಳಿಗೆ ಅವುಗಳನ್ನು ಕಡಿದೊಯ್ದಿದ್ಹರು. ಈಗ ಉಳಿದಿದ್ದುದು ಕಾಂಡ ಮತ್ತು ಕೊನೆಯ ರೆಂಬೆ ಮಾತ್ರ. ಎಲ್ಲ ಗಂಡು ಸಂತಾನವೆಂದೇ ಅಸೂಯೆ ಪಟ್ಟವರೆಷ್ಟು ಜನ! ಹಾಗೆ ಅವರು ಅಡಿದ್ದೇ ಕೆಡಕು ಮಾಡಿತೋ ಏನೋ. ಇಮಾಮ್‍ಸಾಬಿ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದ್ದೇ ಬಂತು. ಕಿರಿಯ ಒಬ್ಬನ ಹೊರತಾಗಿ ಯಾರೂ ಅವನಿಗೆ ದಕ್ಕಲಿಲ್ಲ.

ಕೂ ಎಂಜಿನಿನ ಜುಕುಜುಕುಜೂ ಆಟವೇ ಎಳೆಯರಿಗೆ. ಹಿರಿಯವನಿಗಿಷ್ಟು ಸಾಲೆ ಓದಿಸಿ ರೈಲ್ವೆಯಲ್ಲಿ ನೌಕರಿ ದೊರಕಿಸಿಕೊಡಬೇಕೆಂದು ಇಮಾಮ್‌‍ಸಾಬಿ ಆಸೆ ಕಟ್ಟಿಕೊಂಡಿದ್ದ. ಆದರೆ, ಹಿರಿಯವನಿಗಷ್ಟೇ ಅಲ್ಲ, ಅವನ ಮಕ್ಕಳು ಯಾರಿಗೂ ಸಾಲೆ ಪ್ರಿಯವಾಗಲಿಲ್ಲ.

“ಅಪ್ಪನಿಗೂ ಹೆಬ್ಬೆಟ್ಟಿನ ಗುರುತು; ಮಕ್ಕಳಿಗೂ ಹೆಬ್ಬಿಟ್ಟಿನ ಗುರುತು. ಅಲ್ಲಾನಿಗೆ ಇದೇ ಇಷ್ಟವೆಂದಾದರೆ ಹಾಗೆಯೇ ಅಗಲಿ” ಎಂದುಕೊಂಡ ಇಮಾಮ್‍ಸಾಬಿ|

ಕುಡಿಮೀಸೆ ಚಿಗುರುವ ವೇಳೆಗೆ ದೊಡ್ಡವನು ಜಟಕಾವಾಲನಾದ. ಸೊಸೆ ತವರಿಗೆ ಹೋಗಿ, ಇಮಾಮ್‍ಸಾಬಿಯ ಮೊಮ್ಮಗನೊಡನೆ ಮರಳಿದಳು.

ಆದರೆ ಆ ಬಗೆಯ ಸಮೃದ್ಧ ಬದುಕಿನ ಸೌಭಾಗ್ಯ ಬಹಳ ದಿನ ಇಮಾಮ್‌‍ಸಾಬಿಗೆ ದೊರೆಯಲಿಲ್ಲ. ಮಗ ಜಗಳವಾಡಿ, ತಾನು ಸಂಪಾದಿಸಿ ಕೂಡಿಟ್ಟಿದ್ದ ಹಣದೊಡನೆ, ಮತ್ತೊಮ್ಮೆ ಗರ್ಭಿಣಿಯಾಗಿದ್ದ ಹೆಂಡತಿ ಹಾಗೂ ಮಗುವಿನೊಡನೆ ಮನೆ ಬಿಟ್ಟು ಮುಂಬಯಿಗೆ ಹೊರಟುಹೋದ.

ಅನಂತರ ಇಬ್ಬರು ಜಗಳವಾಡದೆಯೇ ಮನೆಬಿಟ್ಟು ಹೋದರು, ಉತ್ತರ ಹಿಂದೂಸ್ಥಾನಕ್ಕೆಂದು.

ಊರಿಗೊಮ್ಮೆ ಸರ್ಕಸ್‌ ಬಂದು ಬೀಡು ಬಿಟ್ಟಿತು. ಇಪ್ಪತ್ತು ದಿನ ಅಲ್ಲಿದ್ದು ಡೇರೆ ಕಿತ್ತಾಗ ಇಮಾಮ್‌ಸಾಬಿಯ ನಾಲ್ಕನೆಯ ಹುಡುಗ ನಾಪತ್ತೆಯಾದ. ಸರ್ಕಸಿನವರು ಅಪಹರಿಸಿರಬೇಕೆಂಬ ಶಂಕೆ ತಂದೆಗೆ. ಆ ಶಂಕೆ ಬೇಗನೆ ನಿರಸನವಾಯಿತು.

ಕೊನೆಯ ಮಗನನ್ನು ತಂದೆ ತಾಯಿ ಬಹಳ ಜೋಪಾನವಾಗಿ ಬೆಳೆಸಿದರು. ಆರೈಕೆ ಅತಿಯಾಗಿತ್ತೆಂದೇ ಆತ ಬಡಕಲು ಶರೀರದವನಾದ. ಒಮ್ಮೆ ಆತ ವಿಷಮಶೀತಜ್ವರಕ್ಕೆ ತುತ್ತಾದಾಗಲಂತೂ ಇಮಾಮ್‍ಸಾಬಿ ಅರೆಹುಚ್ಛನಾದ. ಅವನ ಹೆಂಡತಿ, ಮುಸಲ್ವಾನ-ಹಿಂದೂ ದೇವರಿಬ್ಬರಿಗೂ ಹರಕೆಹೊತ್ತಳು... ಹುಡುಗ ಕುತ್ತಿನಿಂದ ಪಾರಾದ... ಹಳ್ಳಿಯ ಹುಡುಗಿಯೊಬ್ಬಳು ಅವನ ಮಡದಿ