ಗೊತ್ತಿತ್ತು. ಅಲ್ಲಿದ್ದವರೆಲ್ಲೆಲ್ಲಾ ಕಲ್ಯಾಣಮ್ಮನನ್ನು ಕಂಡರೆ ಆಕೆಗೆ ಅಭಿಮಾನ. ಕಲ್ಯಾಣಮ್ಮ ಕಷ್ಟದ ಜೀವನವನ್ನು ಮಾಡಿ ಬಾಳು ಸಾಗಿಸುತ್ತಿದ್ದಳು. ಆದರೂ ತಾನಾಯಿತು, ತನ್ನ ಕೆಲಸವಾಯಿತು ಎನ್ನುವಂತಹ ಸ್ವಭಾವ. ಎಷ್ಟೋ ಸಾರಿ ಮಹಾದೇವಿಯ ಬಳಿಯಲ್ಲಿ ಚರ್ಚಿಸುತ್ತಿದ್ದಳು. ಅವಳು ಹೇಳುವ ಮಾತುಗಳನ್ನು ಆಸಕ್ತಿಯಿಂದ ಕೇಳುತ್ತಿದ್ದಳು. ತನ್ನ ಲೋಕಾನುಭವವನ್ನು ಆಗಾಗ ಹೇಳುತ್ತಿದ್ದುದೂ ಉಂಟು.
ಕಲ್ಯಾಣಮ್ಮನನ್ನು ನೋಡಿ ಮಹಾದೇವಿಗೆ ಧೈರ್ಯ ಬಂದಿತು. ಕರೆದವಳು ಬಂಗಾರಮ್ಮನಾದರೂ ಆಕೆ ಮಾತನಾಡಿಸಿದುದು ಕಲ್ಯಾಣಮ್ಮನನ್ನು.
ಏನು ಕಲ್ಯಾಣಮ್ಮನವರೇ... ನೀರಿಗೆ ಬಂದಿದ್ದೀರಾ? ನೀರು ಸಾಕಾಯಿತೆ? ಎನ್ನುತ್ತಾ ಬಾವಿಯ ಕಟ್ಟೆಯನ್ನು ಸಮೀಪಿಸಿದಳು.
ಬಂಗಾರಮ್ಮನಿಗೆ ಅಷ್ಟೇ ಸಾಕಾಯಿತು. ಕಲ್ಯಾಣಮ್ಮನ ಉತ್ತರ ಇನ್ನೂ ಬಾಯಲ್ಲಿದ್ದಂತೆಯೇ ಹೇಳಿದಳು:
ಏನಮ್ಮಾ ಮಹಾದೇವಿ! ನಮ್ನನ್ನೆಲ್ಲಾ ಈಚೆಗೆ ಮರೆತೇಬಿಟ್ಟಿದ್ದೀ. ಕಂಡರೂ ಹಾಗೇ ಹೋಗುತ್ತೀಯಲ್ಲ. ಏನಮ್ಮ ಅಂತಹ ಕೆಲಸ? ಎಲ್ಲಿಗೆ ಹೊರಟಿದ್ದೀ? ಮುಖ್ಯ ವಿಷಯದ ಕಡೆಗೆ ಪ್ರಶ್ನೆಯನ್ನು ಎಳೆಯಲು ಯತ್ನಿಸುತ್ತಾ ಕೇಳಿದಳು.
ಎಲ್ಲೂ ಇಲ್ಲ. ಗುರುಗಳ ದರ್ಶನಕ್ಕಾಗಿ ಮಠಕ್ಕೆ ಹೋಗುತ್ತಿದ್ದೆ. ಅವಳ ಪ್ರಶ್ನೆಗೆ ಉತ್ತರಿಸದೆ ಉಪಾಯವಿಲ್ಲವಾಯಿತು.
ಏನಮ್ಮಾ, ಇನ್ನೂ ಮಠ ಮಠ ಅಂತ ಕಾಲ ಹಾಕುತ್ತಿದ್ದೀಯಲ್ಲ! ಇನ್ನೂ ನೀನು ಕಲಿಯುವುದು ಮುಗಿಯಲಿಲ್ಲವೇ?
ಚೆಲುವಮ್ಮ ತಾನು ಸೇರಿದಳು. ಮಹಾದೇವಿಯ ಕೊರಳಿಗೆ ಪ್ರಶ್ನೆಮಾಲಿಕೆಯನ್ನು ಜೋಡಿಸುವುದರಲ್ಲಿ. ಆದರೆ ಮಹಾದೇವಿ ಅದಕ್ಕೆ ಉತ್ತರಿಸದೆ ನಿರ್ಲಕ್ಷ್ಯತೆಯ ಮೌನವನ್ನೆಸೆದು ಕಲ್ಯಾಣಮ್ಮನ ಕಡೆ ತಿರುಗಿ: ಬರುತ್ತೀರಾ ಕಲ್ಯಾಣಮ್ಮನವರೇ? ನೀರು ಸೇದಿದ್ದು ಆಯಿತೇ? ಎಂದಳು.
ಮಹಾದೇವಿ ಮಠಕ್ಕೆ ನಡೆಯುವ ದಾರಿಯಲ್ಲಿಯೇ ಕಲ್ಯಾಣಮ್ಮ ಸ್ವಲ್ಪ ದೂರ ಹೋಗಿ ಪಕ್ಕಕ್ಕೆ ತಿರುಗಬೇಕಾಗುತ್ತಿತ್ತು ತನ್ನ ಮನೆಯನ್ನು ಸೇರಲು. ಆದುದರಿಂದ ಒಟ್ಟಿಗೆ ಹೋಗಬಹುದೆಂದು ಮಹಾದೇವಿ ಕರೆದಳು.
ಮಹಾದೇವಿಯ ಈ ಉದಾಸೀನದ ತಿರಸ್ಕಾರ ಚೆಲುವಮ್ಮನನ್ನು ಚುಚ್ಚಿದಂತಾಯಿತು. ಅವಳ ದೇಹವಾಗಲೀ ಮನಸ್ಸಾಗಲೀ ಅಷ್ಟೇನೂ