ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲ್ಯಾಣಸ್ವಾಮಿ

"ಛೆ ! ಛೆ ! ಅದು ಸಾದ್ಯವೇ ಇಲ್ಲ." ರಾಮಗೌಡ ಜತೆಯಲ್ಲೇ ಹೊರಡಲು ಸಿದ್ಧನಾಗಿದ್ದ .ಆದರೆ ಪಾದಗಳು ಅಸ್ಥಿರವಾದವು. ಶರೀರ ತೂರಾಡತೊಡಗಿತು.ಅದನ್ನು ಪುಟ್ಟ ಬಸವ ಗಮನಿಸಿದ . ಆ ರಾತ್ರೆ ಹೆಚ್ಚು ಕುಡಿಯದೇ ಇದ್ದ ಸೋಮಯ್ಯ ಅವರಡೆಗೆ ಬಂದ."ಹೋಗ್ತೀರೇನು?ತಾಳಿ . ನಮ್ಮ ಹುಡುಗರನ್ನು ಕಳಿಸ್ತೀನಿ. ಗೌಡರೆ,ಇಲ್ಲೇ ಇರಿ. ನೀವು ಅತಿಥಿಗಳು.ನಿಮಗೆ ಕೆಲಸ ಕೊಡೋದೇ? "ಯಾರಾದರೂ ಒಟ್ಟಿಗೆ ಹೋದರೆ ಸರಿ." "ನೀವು ಕೂತ್ಕೊಳ್ಳಿ ಗೌಡರೆ," ಎಂದ ಪುಟ್ಟಬಸವ. "ಅಂಥಾದೇನಿಲ್ಲ. ನನಗೇನು ಆಗಿಲ್ಲ ." ಎಂದು ರಾಮಗೌಡ ಹೇಳಿದನಾದರು ನಿಂತಲ್ಲೆ ಕುಸಿಕುಳಿತ. "ಎಲ್ಲಿಯೋ ಒಂದು ತೊಟ್ಟು ಹೆಚ್ಚಾಗಿರ್ಬೇಕು .ಸ್ವಾಮಿಯೋರು ಕ್ಷಮಿಸ್ಬಿಡಿ ,"ಎಂದ ಆತನೆ, ಪುಟ್ಟಬಸವನನ್ನು ನೋಡಿ ನಸುನಕ್ಕು. ಸೋಮಯ್ಯನ ಮಕ್ಕಳಲ್ಲ, ಕರ್ತುಕುಡಿಯ ಒಣಸೋಗೆಯ 'ಸೂಟಿ' ಹಚ್ಚಿ ಕಾಣಿಸಿಕೊಂಡ. "ನೀನು ಬರ್ತೀಯ ಕರ್ತು?"ಎಂದು ಕೇಳಿದ ಪುಟ್ಟಬಸವ. "ಹೂಂ. ಅಣ್ಣಾವರು ನಡೀರಿ." "ಬಳಗ್ಗೆ ಹತ್ತು ಘಂಟೆಗೆ ಎಲ್ರೂ ನಮ್ಮಲ್ಲಿಗೆ ಬಂದ್ಬಿಡಿ ಸೋಮಯ್ಯನವರೆ." "ಆಗಲಿ," ಎಂದ ಸೋಮಯ್ಯ. ......ಕರ್ತು ದೀವಟೆಗೆಯನ್ನು ಬೀಸುತ್ತ ಮುಂದಾದ. ಆತನನ್ನು ಹಿಂಬಾಲಿಸಿದ ಪುಟ್ಟಬಸವ. ಹರದಾರಿಯ ಹಾದಿ ನಡೆಯುತ್ತ, ಮೌನವನ್ನು ಮುರಿದು ಅವರು ಆಗೊಮ್ಮೆ ಈಗೊಮ್ಮೆ ಮಾತನಾಡಿದರು -ಔತಣದ ಏರ್ಪಾಟನ ಪ್ರಶಂಸೆ, ಹಾಡುಗಾರನಾದ ಚೆಟ್ಟಯನ್ನು ಕುರಿತು ಹೊಗಳಿಕೆ, ಇನ್ನು ಸ್ವಲ್ಪವೇ ಸಮಯದಲ್ಲಿ ವಿರಾಟ್ ರೂಪ ತಳೆಯಬೇಕಾದ ಅವರ ಯೋಜನೆಯ ವಿವರ....ಹೀಗೆ,ಬೇರೆ ಬೇರೆ ವಿಷಯ. ಅಣ್ಣನೆದುರು, ಉಳಿದವರೆದುರು.ಯಾವಾಗಲೂ ಸುಮ್ಮನಿರುತಿದ್ದ ಕರ್ತು ಈಗ ಸಂಕೊಚವಿಲ್ಲದೆ ಮಾತನಡಿದ.