ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಳಿದೆಲ್ಲರನ್ನೂ ನೋಡಿದಳು. ಕೊನೆಯದಾಗಿ ಆಕೆಯ ನೋಟ ತನ್ನ ಗಂಡನ ಮೇಲೆಯೇ ನೆಟ್ಟಿತು.

"ಶುಕ್ರವಾರದೊಳಗೆ ನಾವೂ ಅಲ್ಲಿರ್ತೀನಿ ಗೌಡರೆ." ಎಂದ ನಂಜಯ್ಯ.

"ಹೌದು, ಕಾದಿರ್ತೀವಿ."

ರಾಮಗೌಡ ಪುಟ್ಟಬಸವನೆದುರು ನಿಂತು ಬಾಗಿ ನಮಿಸಿದ.

"ನೀವು ಹೀಗೆ ಮಾಡಬಾರದು ಗೌಡರೆ. ವಯಸ್ನಲ್ಲಿ ನೀವು ನನಗಿಂತ ಹಿರಿಯೋರು." ಎಂದ ಪುಟ್ಟಬಸವ.

"ಸ್ವಾಮಿಯೋರು ನನಗೆ ನಾಯಕರು!"

ಗೌಡನ ಭುಜಗಳನ್ನು ಹಿಡಿದು ಎತ್ತಿದ ಪುಟ್ಟಬಸವ.

"ಇನ್ನು ಬೇಗ್ನೆ ತಿರುಗಿ ನಾವೆಲ್ಲಾ ಸೇರ್ತೀವಿ ಅನ್ನೋ ನಿರೀಕ್ಷೀಲಿ, ಈ ಆಗಲಿಕೆಯ ಸಂಕಟವನ್ನ ಮರಿತೀವಿ."

"ನಾನು ಏನು ಹೇಳಬೇಕೊ, ತೋಚುತ್ತಿಲ್ಲ. ಇನ್ನು ಅಪ್ಪಣೆ ಕೊಡಿ ಸ್ವಾಮಿಯವರೆ. ಹೊರಡ್ತೀವಿ."

"ಆಗಲಿ ಗೌಡರೆ, ಆಗಲಿ ಮಾಚಯ್ಯ, ಸುರಕ್ಷಿತವಾಗಿ ಹೋಗಿ ತಲಪಿ. ನಿಮ್ಮ ಹಿಂದಿನಿಂದಲೇ ನಾವೂ ಬಂದ್ಬಿಡ್ತೀವಿ."

ಹೊರಟು ನಿಂತ ಅಶ್ವದ್ವಯಗಳೂ ಉಳಿದೆರಡು ಕುದುರೆಗಳೂ ಮತ್ತೊಮ್ಮೆ ಪರಸ್ಪರ ವಿದಾಯದ ಮಾತು ಆಡಿದುವು.

ಚೆಟ್ಟಿ ಮತ್ತು ಕರ್ತು, ಕಾಲು ಹಾದಿ ತಲಪುವ ತನಕವೂ ಕುದುರೆಗಳ ಜತೆಯಲ್ಲೆ ಹೋದರು.

ಆ ಹಗಲು ಬಂಡಾಯವೇಳುವಂತೆ ಸೂಚಿಸಿ ಕಳುಹುವ ಸಂದೇಶ ಸಿದ್ಧವಾಯಿತು. ಪುಟ್ಟಬಸವನೂ ನಂಜಯ್ಯನೂ ಅದರ ಪ್ರತಿಗಳನ್ನು ಮಾಡಿದರು. ಆ ಒಕ್ಕಣೆಗೆ ಇಬ್ಬರೂ ಸಹಿ ಹಾಕಿದರು.

ಕೊಡಗಿನ ನಾಲ್ಕು ಮೂಲೆಗಳಗೂ ಹೋಗಿಬರಲು ಇಬ್ಬರು ಕುದುರೆ ಸವಾರರಾದ ಹರಿಕಾರರನ್ನು ಸೋಮಯ್ಯ ಗೊತ್ತುಮಾಡಿದ.

ಕ್ಷೋಭೆಯ ಕೀಯನ್ನು-ಬಂಡಾಯದ ಕರೆಯನ್ನು - ಹೊತ್ತ ಒಕ್ಕಣೆ, ತಾವುನಾಡು ಬೇಂಗುನಾಡುಗಳ ಮಡಿಕೇರಿನಾಡು ನಾಲ್ಕುನಾಡು