ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಕಲ್ಯಣಸ್ವಮಿ

ದಿದ್ದೆ. ಸಂತಪ್ತ ಜನತೆಯ ಕೈಯಲ್ಲಿ ಸಾವು ಯಾವರಿತಿಯಲ್ಲು ಆಕರ್ಶಕವಾಗಿರಲ್ಲಿಲ...]
        ಮುಂದುವರಿಯುತಿದ್ದ ಆ ಜನರನ್ನು ದಟ್ಟಡವಿ ಸ್ವಾಗತಿಸುತ್ತ, ಅವರಿಗೊಸ್ಕರ ತನೇ ಇಬ್ಬಗವಾಗಿ ಕಿರುದಾರಿಯನ್ನು ಕಡಿದುಕೊಡುತಿದ್ದಂತೆ ಭಾಸವಾಗುತಿತ್ತು, ಅರಣ್ಯದ ನಡುವಿನ ಅವರ ನಡಿಗೆಯಿಂದ. ಅಷ್ಜೋಂದು ಜನರ ಬಿಸಿಯುಸಿರು-ಮಾತುಗಳೇ, ಶೋಕಸಾಗರದ ಅಲೆಗಳಾಗಿ ಹಸುರು ದಂಡೆಗಳಿಗೆ ಅಪ್ಪಳಿಸುತಿದ್ದವು.
        ಬಿಸಿಲಲ್ಲಿ ಮರಗಳ ತಣುಪಿನಲ್ಲಿ ಮಧ್ಯಹ್ನದ ವಿಶ್ರಾಂತಿ. ಬಯಲು ದೊರೆತ ಕಡೆ ರಾತ್ರಿ ವಸತಿ. ತಾತ್ಕಾಲಿಕ ಗೂಡಾರ. ಕಾಡಮ್ರುಗಗಳು ಬಾರದಂತೆ ಬೆಂಕಿಯ ಕಾವಲು. ಆಡುಗೆ-ಊಟ.
        ದಾಸ್ಯದ ಅವರಣವನ್ನು ದಾಟ ದೂರ ಬಂದಿದ್ದ ವೀರರಾಜ ಮೆಲ್ಲಮೆಲ್ಲನೆ ಚೇತರಿಸಿಕೊಂಡ. ಪ್ರತಿಯೊಂದು ಸ್ಪಷ್ಟವಾಗಿ ಆತನಿಗೆ ಕಾಣತೊಡಗಿತು. ತನ್ನ ರಾಜ್ಯಕ್ಕು ಪ್ರಜೆಗಳಿಗು ತನಗು ಒದಗಿದ ದುರ್ಗತಿ; ತಾನು ಕೈಕೊಳ್ಳಬೇಕಾದ ಮುಂದಿನ ಕ್ರಮ; ನಾಳಿನ ಬಸಿರಲ್ಲಿದ ಸಾಧ್ಯತೆಗಳು....
        ಕೊಡಗಿನ ಎಲ್ಲೆಯನ್ನು ದಾಟ, ದಕ್ಕಣದ ಪೀಟಭೊಮಿಯನ್ನು ಹಾದು, ದೂರದ ಕಾಶಿಗೆ....
        ಅರಸನಿಗೆ ಆಷ್ಮಿಯನಾದ ನಂಜಯ್ಯ ಹೇಳಿದ: 
        "ನೀವು ಸೈ ಎಂದಿದ್ದರೆ ಸಾಕಿತ್ತು. ಕೊಡಗಿನ ಜನರೆಲ್ಲ ವಲಸೆ ಹೊರಡ್ತಿದ್ರು, ನಿಮ್ಮ ಹಿಂದೆಯೇ."
        ಅದು ನಿಜವೆಂದು ವೀರರಾಜನಿಗೆ ಗೊತಿತ್ತು. ಎಲ್ಲರೂ ಹೊರಡುವುದಿಲ್ಲ, ನಾಳೆಯನ್ನು ಇದಿರು ನೋಡುತ್ತ ಅವರೆಲ್ಲ ಅಲ್ಲಿ ಉಳಿಯುವುದೇ ಮುಖ್ಯವಗಿತ್ತು ಆತನಿಗೆ.
        "ಪುಟ್ಟಬಸವ, ನಂಜಯ್ಯ, ನೀವಿನ್ನು ಬಹಳ ದೂರ ನಮ್ಮ ಜತೆ ಬರಬಾರದು."
        "ಇನ್ನೇನು ಮಾಡ್ಬೇಕು?" ಎಂದ ಪುಟ್ಟಬಸವ, ನೊಂದುಕೊಂಡು.