ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಲ್ಲಿತ್ತು ಅದು? ಎಲ್ಲಿ?

ಇವರು ಗೂಢಚಾರರ ಕಣ್ಣು ತಪ್ಪಿಸಿ ಊರೂರು. ಕತಲು ಕವಿದ ಕೊಡಗಿನಲ್ಲಿ ಇವರ ಸಾಹಸದಿಂದಲೆ ನಡೆಯಿತು, ಬೆಳಕು ಹುಟ್ಟಿಸಲೆಂದು ಕಲ್ಲುಗಳ ಚಕಮಕಿ.

ಬೋಪು ಬಳಸಿದ ಪ್ರಚಾರ ಸಾಧನವೂ ಪ್ರಬಲವಾಗಿತ್ತು. ಕೆಲವರೊಡನೆ - 'ಯಾಕೆ ಬೇಕು ಯುದ್ಧ? ಎಷ್ಟೊಂತ ಯುದ್ಧ ಮಾಡಬೇಕು ನಾವು?ಸಾವಿರಾರು ಜನರನ್ನು ಸಾಯಿಸಿ ಒಬ್ಬ ರಾಜ ಗದ್ದುಗೆ ಏರಿದರೇನು ಏರದಿದ್ದರೇನು?' ಉಳಿದವರೊಡನೆ - .ಶಾಂತಿ ನೆಮ್ಮದಿ ಅಲ್ಲವೇನಪ್ಪ ನಮಗೆ ಬೇಕದ್ದು? ಮಡಿಕೇರಿಯ ಕೋಟೆಯಲ್ಲಿ ಯಾರಿದ್ದರೆ ನಮಗೇನು? ನಾವು ಯಾವ ತೊಂದರೆಯೂ ಇಲ್ಲದೆ ಉತ್ತು ಬೆಳೆಸಿ ಉಂಡು ಸುಖವಾಗಿದ್ದರಾಯ್ತು...'

ಅಂತಹ ಪ್ರಚಾರವನ್ನೂ ಇದಿರಿಸುತ್ತ, ನಮ್ಮ ಪ್ರಾಣಗಳ ರಕ್ಷಣೆಯನ್ನೂ ಮಾಡಿಕೊಳ್ಳುತ್ತ ಕಾಲ ಕಳೆದರು ವೀರರು ಹಲವರು.

ಅರಸನಿಗೆ ಉತ್ತರವಾಗಿ ಅವರೇನನ್ನು ಬರೆದು ತಿಳಿಸುವುದು ಸಾಧ್ಯವಿತ್ತು? ಆದರೂ, ಸತ್ಯಕ್ಕೇ ಜಯ ಸಿದ್ಧ- ಎಂಬ ದೃಢವಾದ ನಂಬುಗೆ ಅವರಿಂದ ಒಕ್ಕಣೆ ಬರೆಸಿತು: "ನಮ್ಮ ಕೆಲಸ ನಾವು ಮಾಡುತಿದ್ದೇನೆ. ಇನ್ನು ಸ್ವಲ್ಪವೇ ಸ್ಸಮಯದೊಳಗೆ ನಮ್ಮ ಪ್ರಯತ್ನ ಒಂದು ಮಟ್ಟಕ್ಕೂ ಒಂದು ಮಟ್ಟಕ್ಕೆ ಬರುತ್ತವೆ. ಆಗ ಹೊರಟು ಬರಲು ತಾವು ಸಿದ್ಧರಾಗಿರಬೇಕು."

ಆವರ ಕೆಲಸ ಅವರು ಮಾಡಿದರು. ಪ್ರಯತ್ನ ಒಂದು ಮಟ್ಟಕ್ಕೂ ಬಂತು. ಕೊಡಗಿನಾಚೆಗೆ ಬಿಳಿಯರನ್ನು ಹೊಡೆದೋಡಿಸುವುದು ಕಷ್ಟ ಸಾಧ್ಯವಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಯಿತು.

ಕೊಡಗರ ಧಮನಿಯಲ್ಲಿ ಹರಿಯುವುದು ವೀರರಕ್ತವೇ ಅಲ್ಲವೇನು? ಅವರ ಪೀಚೆಕತ್ತಿ ಬರಿಯ ಅಲಂಕಾರಕ್ಕೆಂದು ಹೇಳಿದವ್ರು ಯಾರು? ಆವರ ಬಿಚ್ಚುಗತ್ತಿಯ ಅಲಗು ಎಂದು ಮೊಂಡಾಯಿತು? ಅವರು ಗುಲಾಮ ಗಿರಿಯನ್ನೆ ಅಪ್ಪಿಕೊಳ್ಳ ಬಯಸುವ ಕ್ಷುದ್ರ ಜೀವಿಗಳೆ? ಜನಾಂಗದ ಪ್ರಾತಿನಿಧ್ಯವನ್ನು ನಾಲ್ಕು ಜನ ದ್ರೋಹಿಗಳಿಗೇ ಯಾರು ಗುತ್ತಿಗೆ ಕೊಟ್ಟಿದ್ದಾರೆ? ಹೆತ್ತ ತ್ತಾಯಿಯನ್ನೆ ಬೀದಿಗಿಳಿಸಿ ಮೂರು ಕಾಸಿಗೆ ಮಾರುವ ಈ ನರಹುಳುಗಳು...