ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಮರ ಸುಳ್ಯದಲ್ಲಿ ಕ್ಷೋಭೆಯ ಕಿಡಿ ಯೆಲ್ಲ ವರ್ತಕರ ಮಳಿಗೆ ಸೇರಿದರೂ ಕಂದಾಯದ ಹಣ ಹುಟ್ಟುತ್ತಿರಲ್ಲಿಲ್ಲ. ಮುಂದೆ ಉಣ್ನುವುದಕ್ಕೆ,ಚಿತ್ತನೆಗೆ,ಆ ವರ್ತಕರಿಂದಲೆ ಧಾನ್ಯವನ್ನು ಮರಳಿ ಕೊಳ್ಳುವ ಪ್ರಮೇಯ ಬೇರೆ. ಪಾರತಂತ್ರ್ಯದ ನಖಗಳು ಹೊಟ್ಟೆಯನ್ನೆ ಬಗೆದು ಕರುಳನ್ನೆ ಕೀಳ ತೊಡಗಿದ್ದುವು. ....ಪುಟ್ಟಬಸವ ನಂಜಯ್ಯನ ಮುಖ ನೋಡಿದ; ಚೆಟ್ಟಕುಡಿಯ ಕರ್ತುಕುಡಿಯರನ್ನೂ ನೋಡಿದ. ಅವರ ಮನಸ್ಸಿನಲ್ಲಿ ಏನಿತ್ತಿಂಬುದನ್ನು ಗ್ರಹಿಸಲೆತ್ನಿಸುತ್ತಾ ಆತ ಕೇಳಿದ: " ಏನು,ಏನು ಹೇಳ್ತೀರಾ?" ನಂಜಯ್ಯ ಮೀಸೆಯ ಮೇಲೆ ಕೈಯಾಡಿಸಿದ. "ಹೇಳೋದೇನಿದೆ? ಕೊಡಗು,ಕನ್ನಡ ಜಿಲ್ಲೆ,ಎರಡೇ ಸಾಕೆ? ನಾಳೆ ಮೈಸೂರಿನಿಂದಲೂ ಆ ಕೋತಿಗಳನ್ನ ಓಡಿಸೋಣವಂತೆ. ಕಾಶಿಯ ವರೆಗೂ ಹೋಗೋಣವಂತೆ.ಕಾಶಿಯ ವರೆಗೂ ಹೋಗೋಣವಂತೆ." "ಮಹರಾಜರಿಂದೇನಾದರೂ ಸುದ್ದಿ ಬಂದಿತ್ತೇನು?" ಎಂದು ಕೇಳಿದ ರಾಮೇಗೌಡ. ಪುಟ್ಟಬಸನ ಉತ್ತರವಿತ್ತ: "ಬಂದಿತ್ತು. ಈಗ ಪುನಃ ನಾವೇ ದೂತರನ್ನ ಕಳಿಸ್ಬೇಕು. ನಮ್ಮ ಕಾರ್ಯಕ್ರಮ ಅವರಿಗೆ ತಿಳಿಸ್ಬೇಕು." "ಹೂಂ, ಮುಖ್ಯವಾದ ಕೆಲಸವೇ. ರಾಜರು ಕಾಶಿಯಿಂದ ವಾಪಸು ಬರ್ತಿದಾರೇಂತ ಹೇಳಿದರೆ ಜನರಲ್ಲಿ ಉತ್ಸಾಹ ಹೆಚ್ತದೆ." ಪುನಃ ಯೋಚನೆಯಲ್ಲೆ ಮಗ್ನನಾದ ಪುಟ್ಟಬಸವ ಹೇಳಿದ: "ಹೆಜ್ಜೆ ಮುಂದಿಟ್ಮೀಲೆ ಹಿಮ್ಮೆಟ್ಟೋ ಪ್ರಶ್ನೆಯೇ ಇಲ್ಲ.. ಇದು ಹುಡುಗಾಟವಂತೂ ಅಲ್ಲವೇ ಅಲ್ಲ. ಈ ಹೋರಾಟ ಎಷ್ಟು ಗಭೀರವಾದದ್ದೂಂತ ನಿಮಗೆಲ್ಲಾ ತಿಳಿದಿದೆಯೊ?" "ತಿಳಿದಿದೆ. ನಿಮ್ಮನ್ನೆಲ್ಲಾ ಕರೆಯೋದಕ್ಕೆ ಬಂದ ನನ್ನ ಜವಾಬ್ದಾರಿಯೂ ನನಗೆ ಗೊತ್ತಿದೆ. ಯಾಕೆ? ನನ್ನ ಮಾತಿನಲ್ಲಿ ನಂಬಿಕೆ ಹುಟ್ಟೋದಿಲ್ವೋ?" ಆ ಮಾತಿನಲ್ಲಿ ನೊಂದ ಧ್ವನಿಯನ್ನು ಗುರುತಿಸುತ್ತ ಪುಟ್ಟಬಸವ ಉತ್ತರವಿತ್ತ: