ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೮ ಕನಕ ಸಾಹಿತ್ಯ ದರ್ಶನ-೨ ೨೯ ದುರಿತವಡಗಲು ನಿನ್ನ ನಾಮ ಸ್ಮರಣೆಯೊಂದೇ ಸಾಕು ರಕ್ಷಿಸು ನಮ್ಮನನವರತ ಳಾದರಿಸಿ ಕೇಳ್ಪರು ಮುದದಲಿ ಆದಿ ಮೂರುತಿ ವರಪುರಾಧಿಪನೊಲಿವನನವರತ ೧೦೦। ೧೦೪। ಎಂಜಲೆಂಜಲು ಎಂಬರಾ ನುಡಿ ಎಂಜಲಲ್ಲವೆ ವಾರಿ ಜಲಚರ ದೆಂಜಲಲ್ಲವೆ ಹಾಲು ಕರುವಿನ ಎಂಜಲೆನಿಸಿರದೆ ಎಂಜಲೆಲ್ಲಿಯದಲ್ಲಿಯುಂ ಪರ ರೆಂಜಲಲ್ಲದೆ ಬೇರೆ ಭಾವಿಸ ಲೆಂಜಲಂಟೇ ದೇವ ರಕ್ಷಿಸು ನಮ್ಮನನವರತ ಕುಲಗಿರಿಗಳನ್ವಯದ ಧಾರಿಣಿ ಜಲಧಿ ಪಾವಕ ಮರುತ ಜಲ ನಭ ಜಲಜಸಖ ಶೀತಾಂಶು ತಾರೆಗಳುಳ್ಳ ಪರಿಯಂತ ಚಲನೆಯಿಲ್ಲದ ನಿನ್ನ ಚರಿತೆಯು ಒಲಿದು ಧರೆಯೊಳಗೊಪ್ಪುವಂದದಿ ಚೆಲುವ ಚೆನ್ನಿಗರಾಯ ರಕ್ಷಿಸು ನಮ್ಮನನವರತ ೧೦೧। ೧೦೫।। ಕೇಳುವುದು ಹರಿಕಥೆಯ ಕೇಳಲು ಹೇಳುವುದು ಹರಿಭಕ್ತಿ ಮನದಲಿ | ತಾಳುವುದು ಹಿರಿದಾಗಿ ನಿನ್ನಯ ಚರಣಸೇವೆಯಲಿ ಊಳಿಗವ ಮಾಡುವುದು ವಿಷಯವ ಹೂಳುವುದು ನಿಜ ಮುಕ್ತಿಕಾಂತೆಯ ನಾಳುವುದು ಕೃಪೆ ಮಾಡಿ ರಕ್ಷಿಸು ನಮ್ಮನನವರತ ನೂರು ಕನ್ಯಾದಾನವನು ಭಾ ಗೀರಥೀಸ್ನಾನವನು ಮಿಗೆ ಕೈ ಯಾರೆ ಗೋವಳ ಪ್ರೇಮದಿಂದಲಿ ಭೂಸುರರಿಗೊಲಿದು ಊರುಗಳ ನೂರಗ್ರಾಹಾರವ ಧಾರೆಯೆರೆದಿತ್ತಂತೆ ಫಲ ಕೈ ಸೇರುವುದು ಹರಿಭಕ್ತಿಸಾರದ ಕಥೆಯ ಕೇಳವಗೆ [೧೦೨। ೧೦೬| ಈ ತೆರಳಚ್ಚುತನ ನಾಮವ ನೂತನದಿ ವಸುಧಾತಳದಿ ವಿ ಖ್ಯಾತಿ ಬಯಸದೆ ಬಣ್ಣಿಸಿದೆ ಭಾಮಿನಿಯ ವೃತ್ತದಲಿ ನೀತಿಕೋವಿದರಾಲಿಸುವರತಿ ಪ್ರೀತಿಯಲಿ ಕೇಳರಿಗೆ ಅಸುರಾ ರಾತಿ ಚೆನ್ನಿಗರಾಯ ಸುಖಗಳವನನವರತ ಮೇರು ಮಂದರನಿಭ ಸುವರ್ಣವ ವಾರಿ ಮಧ್ಯದೊಳಿರುವ ಅವನಿಯ ನಾರಿಯರ ಗಾಯತ್ರಿ ಪಶುಗಳನಿತ್ತ ಫಲವಹುದು ಧಾರಿಣಿಯೊಳೀ ಭಕ್ತಿಸಾರವ ನಾರು ಓದುವರವರಿಗನುದಿನ ಚಾರು ವರಗಳನಿತ್ತು ರಕ್ಷಿಪನಾದಿಕೇಶವನು ೧೩। ೧೦೭ ಬಾದರಾಯಣ ಪೇಳ್ತ ಭಾರತ ಕಾದಿಕರ್ತನುದಾರ ಶ್ರೀಪುರ ದಾದಿಕೇಶವಮೂರ್ತಿಗಂಕಿತವಾದ ಚರಿತೆಯನು ಮೇದಿನಿಯೊಳಿದನಾರು ಹೃದಯದೊ ಲೋಕದೊಳಗತ್ಯಧಿಕನೆನಿಸುವ ಕಾಗಿನೆಲೆ ಸಿರಿಯಾದಿಕೇಶವ ತಾ ಕೃಪೆಯೊಳಗೆ ನುಡಿಸಿದನು ಈ ಭಕ್ತಿಸಾರವನು ಜೋಕೆಯಲಿ ಬರೆದೋದಿ ಕೇಳರ