ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಎರಡನೆಯ ಸಂಧಿ ತಳಿತ ಮೇಘದಿ ಹೊಳೆವ ಮಿಂಚಿನ ಬಳಗವೆನೆ ಹಂಸೆಗಳು ನಭದಿಂ ದಿಳೆಗಿಳಿದು ಸತಿಯರ ಸಭಾಮಂಡಲದಿ ಕುಳ್ಳಿರಲು ನಳಿನಲೋಚನೆ ಕಂಡು ಪಕಿಯ ಲಲನೆಯರ ಮೊಗ ನೋಡಿ ಹಂಸದ | ಚೆಲುವ ಬಣ್ಣಿಸಿ ಹಿಡಿಯಬೇಕೆಂದೆನುತ ಗಮಿಸಿದಳು ನಳಿನಮುಖಿ ನಳಚಕ್ರವರ್ತಿಯ ಬಳಿಯ ವಾಹನವಾಗಿ ತಾನಿಹೆ ನೋಲಿದು ಸಲಹುವನೆನ್ನ ಪರಮ ಪ್ರೀತಿವಚನದಲಿ ಇಳೆಗೆ ನಳಕೂಬರ ಜಯಂತರ ಚೆಲುವ ಮದನನ ರೂಪರೇಖೆಯ ಹಳಿವುದಾ ನಳನೃಪನ ನಿಜಸೌಂದರ್ಯದಾಟೋಪ |೩೨| |೩೬ ಮೆಲ್ಲಮೆಲ್ಲನೆ ಅಡಿಯಿಡುತ ಜರ ಪಲ್ಲವವ ಚಾಚಿದಳು ನೂಪುರ ಘಲ್ಲುಘಲಿರೆನೆ ಅತ್ತಲಿತ್ತಲು ಸಾರುತಾ ಹಂಸೆ ನಿಲ್ಲದಂಗೈಸುತ್ತ ಬರಲ ಇಲ್ಲಿ ಎಡರಿತು ಕುಸುಮಮಯ ನವ ಮಲ್ಲಿಗೆಯ ಬನದಲ್ಲಿ ಹೊಕ್ಕುದು ಹೊದರ ಹೊಸಮೆಳೆಯ ೩೩| ನಿನ್ನ ರೂಪಿಗೆ ಸಲುವುದೇ ನಳ ನುನ್ನತದ ಸೌಂದರ್ಯ ಜಗದೊಳ ಗಿನ್ನು ನಾ ಸರಿಗಾಣೆ ನಿಮಗೀರ್ವರಿಗೆ ಸಮನಹುದು ಎನ್ನಲಾ ನುಡಿಗೇಳಿ ಹಂಸೆಗೆ ತನ್ನ ಶಿರವನು ಬಾಗಿ ಗುಣಸಂ ಪನ್ನೆ ನುಡಿದಳು ನಾಚಿ ನಸುನಗೆಯಿಂದ ವಿನಯದಲಿ |೩೭| ಕೆಳದಿಯರ ಕೆಲಕೊತ್ತಿ ತಾನೇ ಮೆಳೆಯ ಹೊಕ್ಕಳು ಬಾಗೆ ಸೆಳೆ ನಡು ಬಳುಕೆ ಕುಚಭಾರದಲಿ ಮೇಲುದು ಜಾರೆ ಮುಡಿ ಕೆದರೆ ಜಲಜಮುಖಿ ಬೆಮರಿಡಲು ಕೊರಳಿನ ಲಲಿತದೇಕಾವಳಿಗಳಲ್ಲಾ ಡಲು ಸೆರಗನಳವಡಿಸಿ ನಿಂದಳು ಬಳಲಿ ಬಿಸುಸುಯ್ದು ಪರಮ ಗುಣನಿಧಿ ಪಕ್ಷಿ ಕೇಳ್ ಬಾ ಹಿರನು ಪಾತಕಿ ಮದನನೆಲೆ ನಿ ಷ್ಣುರದೊಳೆಸೆಯಲು ಪುಷ್ಪಬಾಣದಿ ನೊಂದುದೆನ್ನೊಡಲು ಕರುಣರಸ ಧಾರೆಯಲಿ ತಾಪವ ಪರಿಹರಿಸಬೇಕೆಂದು ನೀನಾ ಧರಣಿಪತಿ ನಳನೃಪಗೆ ಬಿಸೆಂದಳಿಂದುಮುಖಿ |೩೪|| [೩೮] ಎಲೆ ಸರೋರುಹಗಂಧಿ ನೀನೆನ ಗೋಲಿದು ಮನದಲಿ ಹಿಡಿವೆನೆಂಬೀ ಚಲವಿದೇತಕೆ ಮಾಣು ನಾವಂಬರದ ಪಕ್ಷಿಗಳು ನಿಲುಕುವವರಾವಲ್ಲ ಬರಿದೇ ಬಳಲದಿರು ತಾ ಬಂದ ಪರಿಯನು ತಿಳುಹುವೆನು ನಿನಗೆಲ್ಲವನು ಕೇಳೆಂದುದಾ ಪಕ್ಷಿ ಪರರ ದುಃಖವ ಪರಿಹರಿಸಿ ಮಿಗೆ ಪರರಿಗುಪಕಾರಾರ್ಥವೆಸಗಲು ಪರಮ ಪುಣ್ಯವಿದೆಂದು ಪೇಳ್ವರು ಪಿರಿಯರಾದವರು ಪರಮ ಬಾಂಧವ ನೀನೆನಗೆ ಸ ತರಿಸು ವಿರಹದಿ ನೊಂದವಳ ಕರೆ ಕರೆಗೆ ಗುರಿಮಾಡದಿರು ಸಲಹೆಂದಳು ಸರೋಜಮುಖಿ |೩೫|| ೩೯