ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೫೨ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಆರನೆಯ ಸಂಧಿ ೧೫೩ ಮುನ್ನ ಮಾಡಿದ ಕರ್ಮಫಲವಿದು ಬೆನ್ನ ಬಿಡದಿರಲುರಗಪತಿ ಕೇ ಇನ್ನು ನೋಯಲದೇಕೆ ತಾನೇ ಪಾಪಿಯಾದೆನಲ ಪನ್ನಗಾರಿಧ್ವಜನ ಕೃಪೆ ತನ ಗಿನ್ನು ತಪ್ಪಿದ ಬಳಿಕ ಲೋಕದೊ ಇನ್ನು ಸೈರಿಸಲಾರ ವಶವೆಂದೆನುತ ಮರುಗಿದನು ಪೊಡವಿಪನನೋಲೈಸು ವಾಫೆಯ ಪಿಡಿದು ಬಾಹುಕನೆಂಬ ನಾಮದಿ ನಡೆಸು ರಥವನು ಹೀನವೃತ್ತಿಯದಲ್ಲ ನಿನಗಿನ್ನು ಬಿಡದೆ ಮುನ್ನಿನ ರೂಪು ಬೇಕಾ ದಡೆ ನೆನೆವುದಾ ಪಕ್ಷಿಗಳ ಹ ಚಡವನೀವುವು ಧರಿಸಲಡಗುವುದೀ ಕುರೂಪಿತನ |೧೬| ೨೦] ಏಕೆ ನೃಪತಿ ವೃಥಾ ಮನೋವ್ಯಥೆ ಕಾಕಬಳಸಲು ಬೇಡ ನೀನವಿ ವೇಕಿಯೇ ಸಾಕಿನ್ನು ನಿನಗುಪಕಾರವಂಜದಿರು ಲೋಕ ನಿನ್ನನು ಕಾಣದಂತಿರ ಬೇಕೆನುತಲೇರಿಸಿದೆ ಗರಳವ ನೇಕ ಉಪಕಾರಂಗಳಹವದರಿಂದ ನಿನಗೆಂದ ನಿನ್ನ ಹವಣೆ ಪೂರ್ವದಲಿ ಭಿ ಕ್ಷಾನ್ನವನು ಬೇಡಿದನು ಪಶುಪತಿ ಪನ್ನಗಾರಿಧ್ವಜನು ಕಾಯ್ದನು ಪಶುಗಳಡವಿಯಲಿ ಉನ್ನತೈಶ್ವರ್ಯಪ್ರದನು ಶತ ಮನ್ನು ಬನದಲಿ ನವೆಯನೇ ಸಾ ಕಿನ್ನು ಮನನೋಯದಿರು ಚಿತ್ತೆಸೆಂದನುರಗಪತಿ ೧೭| ಗರಳವಿದು ಸರ್ವಾಂಗದಲಿ ಸಂ ಚರಿಸುತಿಹ ಪರಿಯಂತ ರಿಪುಗಳ ಶರ ಜಲಾಗ್ನಿ ಭುಜಂಗ ರೋಗಾದಿಗಳ ಭಯವಿಲ್ಲ ನಿರತವಿದು ವಜ್ರಾಂಗಿ ಬೇಡಿ ಸ್ವರಸ ಚಿಂತಿಸಬೇಡ ಕಾಯ್ದ ಹೊರಗೆ ತಾನಿದು ಬೇರೆ ಭಯ ಬೇಡಿನ್ನು ನಿನಗೆಂದ ಪರಮಸತ್ಯವ್ರತದೊಳಾ ಪು ಷ್ಕರನ ಗೆಲಿದುನ್ನತದ ರಾಜ್ಯದ ಸಿರಿ ಮಿಗಲು ಸಾಮ್ರಾಜ್ಯವಾಳುವೆ ನಿನ್ನ ಸತಿಸಹಿತ ವರವನಿತ್ತೆನು ನಿನಗೆ ಎಂದುಪ ಚರಿಸಿ ಕಾರ್ಕೊಟಕನು ನಳನೃಪ | ಗರುಹುತಾಕ್ಷಣ ಮಾಯವಾದನು ರಾಯ ಕೇಳೆಂದ ೧೮) ೨೨| ಜನಪ ಕೇಳೆ ಧರೆಗೆ ಋತುಪ ರ್ಣನು ಮಹಾರಾಜೇಂದ್ರ ಗುಣನಿಧಿ ಇನಕುಲಾಂಬುಧಿಚಂದ್ರನಾತನ ಪುರವಯೋಧ್ಯೆಯದು ನಿನಗೆ ಬಹುದಕ್ಷ ಹೃದಯವು ಆ ತನಲಿ ನೀನವಗಶ್ವಹೃದಯವ ನನುಗೊಳಿಸು ಸಾಕಿನ್ನು ಚಿಂತಿಸಬೇಡ ಹೋಗೆಂದ ಬಲಿದ ಚಿಂತೆಯ ಮನದ ದುಗುಡದ ನಳನೃಪತಿ ಕಾನನದಿ ಬರುತಿರೆ ಮಲೆತು ತೋಲಗದ ದುಷ್ಟಮೃಗಗಳ ಕಂಡು ನಸುನಗುತ ಹಲವು ಗಿರಿಗುಹೆ ಗಹ್ವರಂಗಳ ಕಳೆದು ಮುಂದಣ ಜನಪದಂಗಳ ಬಳಿವಿಡಿದು ನಡೆತಂದನಲಸದೆ ಹಲವು ಯೋಜನವ