ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ೨ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಏಳನೆಯ ಸಂಧಿ ೧೬೩ ಮುಗಿಲು ಮುಸುಕಿದ ಚಂದ್ರಬಿಂಬವೊ ಪಗಲೋಳೆಸೆವ ಸುದೀಪಕಾಂತಿಯೊ ಹೊಗೆಯೋಳೆಸಗಿದ ಚಿತ್ರಪ್ರತಿಮೆಯೊ ಹೇಳಲೇನವಳ ಉಗಿದು ಬಿಸುಟ ವಿಭೂಷಣದ ಮೈ ಲಿಗೆಯ ಸೀರೆಯ ಮಲಿನತನು ಕಳೆ ದೆಗೆದು ಕೈಗಲ್ಲದಲಿ ನಿಂದಿರೆ ಕಂಡನಾ ಸತಿಯ ಘೋರತರಶೋಕವನು ಸೈರಿಸ ಲಾರದಾ ಸತಿಪತಿಗಳಿಬ್ಬರು ಸೋರುತಿಹ ಕಂಬನಿಗಳಲಿ ಕರೆದೆಮ್ಮ ಕಳುಹಿದರು ಧಾರಿಣಿಯಲರಸುತಲಿ ಬಂದೆವು ವಾರಿಜಾನನೆ ನಿಮ್ಮ ಕಂಡೆವು ಸೇರಿತೆಮ್ಮಯ ಪುಣ್ಯವೆಂದು ಸುದೇವ ಕೈಮುಗಿದ 6 |೨೪| ೨೮) ಇದು ಪತಿವ್ರತಧರ್ಮವಹುದೀ ಸುದತಿ ತೊರೆದಿಹಳೆಲ್ಲವನು ನೃಪ ವಧುವ ಕಾಣಿಸಿಕೊಂಬೆನೆಂದು ಸುದೇವ ನಡೆತಂದು ಹದವಿದೇನ್ ತಾಯೆ ನಿಮ್ಮಯ ವದನಕಮಲವು ಬಾಡಿ ಕಡುಮಾ ಸಿದುಡಿಗೆಯಲಿಹುದೇನು ಕಾರಣವೆನುತಲಿಂತೆಂದ ವನಿತೆ ಕೇಳುತ ಶೋಕಜಲದಲಿ ನನೆದು ಬುಧಕುಲತಿಲಕನನು ಬಾ ರೆನುತ ಮನ್ನಿಸಿ ತನ್ನವರನಡಿಗಡಿಗೆ ಬೆಸಗೊಳಲು ವನಿತೆ ನೋಡಿದಳಾ ಸುದೇವನ ಜನನಿಗರುಹಲು ಬಂದಳಾ ವಿ ಪ್ರನನು ನೀವಾರೆನಲು ನುಡಿದನು ಬಂದ ಸಂಗತಿಯ ೨೫] ೨ | ಇಂದುವದನೆ ವಿದರ್ಭಪಟ್ಟಣ ದಿಂದ ಬಂದೆನು ತಾನು ಭೂಸುರ ವಂದ್ಯನೆನ್ನಭಿಧಾನ ಕೇಳು ಸುದೇವನೆಂಬುವುದು ಇಂದು ನಿಮ್ಮನು ನೋಡ ಕಳುಹಿದ ತಂದೆ ಭೀಮನೃಪಾಲನಾತನ ನಂದನಿಗೆ ತಾ ಸಖನು ಚಿನ್ನ ಬಿನ್ನಪವ ಕೇಳು ತಾಯೆ ವಿದರ್ಭಪತಿ ಭೂ ಪಾಲನಾತ್ಕಜೆ ಪತಿಯೊಡನೆ ತ ನಾಲಯವನುಳಿದು ವನಕೈದಿದಳೆನಲು ನೃಪ ಕೇಳಿ ತಾಳಲಾರದೆ ನೋಡಿ ಕರೆತರ ಹೇಳಿ ಕಳುಹಲು ಬಂದೆನಿಲ್ಲಿಗೆ ಬಾಲೆ ದಮಯಂತಿಯಳ ಕಂಡೆನೆನುತ್ತ ಕೈಮುಗಿದ |೨೬| |೩೦ ಕ್ಷಿತಿಪ ಭೀಮ ನೃಪಾಲನಾತನ ಸತಿಸುತರು ಬಾಂಧವ ಸಹೋದರ ರತಿಶಯರು ನಿಮ್ಮಯ ಕುಮಾರರು ಕುಶಲರಿಂದಿನಲಿ ಕ್ಷಿತಿಯನಗುತ ನಳನೃಪತಿ ನಿಜ ಸತಿಸಹಿತ ವನಕೈದಿದುದ ಕೇ ಳುತಲಿ ನಿಮ್ಮವರೆಲ್ಲ ಶೋಕಾಬ್ಲಿಯಲಿ ಮುಳುಗಿಹರು ಕೇಳಿ ಶಿವಶಿವಯೆನುತ ಶೋಕವ ತಾಳಿ ತೆಗೆದಪ್ಪಿದಳು ಮಗಳೆ ವಿ ಟಾಳಿಸಿತೆ ಸಿರಿ ರಾಜ್ಯಸಂಪದವೀ ಮಹಾವ್ಯಥೆಯ ಭಾಳದಲಿ ವಿಧಿ ಬರೆದನೇ ಜನ ಪಾಲ ನಳನೃಪನೆತ್ತ ಸರಿದನೊ ಕಾಲಗತಿಯಿಂತಾಯಿತೇ ಹಾಯೆನುತ ಮರುಗಿದಳು ೨೭| |೩೧|