ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬ ಕನಕ ಸಾಹಿತ್ಯ ದರ್ಶನ-೨ ನಳಚರಿತ್ರೆ : ಏಳನೆಯ ಸಂಧಿ ೧೬೭ ತರಿಸಿದನು ದಂಡಿಗೆಯೊಳಗೆ ಕು ಳ್ಳಿರಿಸಿ ಸತಿಯರ ಗಡಣದಲಿ ಮಂ ದಿರವ ಹೊರವಂಟರಸನೇರಿದ ಗಜದ ಕಂಧರವ ಮೆರೆವ ನಾನಾ ವಾದ್ಯರಭಸದಿ ಕರಿ ತುರಗ ಕಾಲಾಳ ಸಂದಣಿ ಯುರವಣಿಗೆ ನಡೆತಂದು ಹೊಕ್ಕ ವಿದರ್ಭಪಟ್ಟಣವ ಕಂತುಪಿತನೊಲುಮೆಯಲಿ ಧರಣೀ ಕಾಂತ ಭೀಮನೃಪಾಲ ಬಾಂಧವ ಸಂತತಿಯನಾದರಿಸಿ ಕಳುಹಿದನವರನುಚಿತದಲಿ ಸಂತತವು ನಿಜಪತಿಯನಗಲಿದ | ಚಿಂತೆಯಲಿ ಮನಗುಂದಿದಳು ದಮ ಯಂತಿ ನೆನೆಯುತಲಿರ್ದಳಾ ವನಪುರದ ಚೆನ್ನಿಗನ ೪೦। ದೂತರೈದಿದರೊಸಗೆಯಲಿ ಜನ ಜಾತ ನಲಿಯಲು ಬಂದು ಬೇಗದಿ ಭೂತಳೇಂದ್ರಗೆ ಕೈಮುಗಿದು ದಮಯಂತಿ ಬಂದಳೆನೆ ಮಾತ ಕೇಳಿದನದನು ಬಲಸಂ ಗಾತಿತಂದವರ ಕಂಡತಿ ಪ್ರೀತಿಯಿಂ ತಕ್ಕೆಸಿ ಕರೆತಂದನು ನಿಜಾಲಯಕೆ ೪೧। ೪O ಅವನಿಪತಿ ಕೇಳಾ ಪುರದೊಳು ತವವನದನೇನೆಂಬೆನಂದಿನ ದಿವಸದೊಳಗರಮನೆಯೊಳಾ ದಮಯಂತಿಯನು ಜನನಿ ತವಕದಿಂ ಬಿಗಿಯಪ್ಪಿದಳು ಬಾಂ ಧವರು ಸಂತೋಷಿಸಿದರನಿಬರು ಯುವತಿಯರು ನಿಜತನಯರಾಲಿಂಗಿಸಿದರಂಗನೆಯ ೪೨|| ಮಗನ ನೋಡಿದಳಿಂದ್ರಸೇನನ ತೆಗೆದು ತಕ್ರೈಸಿದಳು ಕರೆದಳು ಮಗಳ ಚಂದ್ರಾಸ್ಯಳನು ತೊಡೆಯೊಳಗಿಟ್ಟು ಮಮತೆಯಲಿ ಮೊಗವನೀಕ್ಷಿಸಿ ಮೊಲೆಗಳಲಿ ತೊರೆ ದುಗುವ ಹಾಲಿನ ಜನನಿ ಮಿಗೆ ನೀ ರೊಗುವ ಕಣ್ಣೀರಿನಲ್ಲಿ ಸಂತೈಸಿದಳು ನಿಜಸುತರ ೪೩.