ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೭೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಅಭಿವ್ಯಕ್ತಿ ೭೭೩ ಸಮಾಜದ ಸುತ್ತಮುತ್ತಲಿನ ಬದುಕಿನತ್ತ ಚಿಂತಿಸುವ ಕವಿ. ಇದು ಕನಕದಾಸನಿಗೆ ಸಾಧ್ಯವಾಯಿತು. ಇದೇ ಅವನ ವಿಶಿಷ್ಟತೆ, ಕವಿ-ಭಕ್ತರಿಬ್ಬರ ಬಗೆಯನ್ನು ಅವನ ಕೀರ್ತನೆಗಳಲ್ಲಿ ಕಾಣುತ್ತೇವೆ. ಅಂದರೆ ಕನಕದಾಸನ ಮನಸ್ಸು ಮೂಲತಃ ವಿರಕ್ತಿಪರವಾದದ್ದಾದರೂ ಅವನೊಳಗಿನ ಕಥೆಗಾರನೊಬ್ಬ ಸದಾ ಜಾಗೃತ ಸ್ಥಿತಿಯಲ್ಲಿ ಇದ್ದದ್ದರಿಂದಲೇ ಅವನ ಅಭಿವ್ಯಕ್ತಿಗೆ ಅವನ ಅನುಭವವೇ ದ್ರವ್ಯವಾಗುತ್ತದೆ. ಮತ್ತು ಮುಖ್ಯ ಅಂದರೆ ಅದು ಅವನಿಗೆ ಸಹಜವಾಗುತ್ತದೆ. ಇತರೆ ದಾಸರ ರಚನೆಗಳಿಗಿಲ್ಲದ ಒಂದು ಬಗೆಯ ಅನನ್ಯತೆಯನ್ನು ಕನಕದಾಸನ ರಚನೆಗಳಿಗೆ ತಂದುಕೊಡುವುದು ಇದೇ. ಕನಕದಾಸ ಸಾಮಾಜಿಕ ಬದುಕನ್ನು ಒಬ್ಬ ಕವಿಯಾಗಿ ಗ್ರಹಿಸಿಕೊಂಡ ಕ್ರಮದಲ್ಲಿ ಅವನ ಕೀರ್ತನೆಗಳು ಯಶಸ್ವಿಯಾಗುತ್ತವೆ ಎಂಬುದು ಮುಖ್ಯ ಸಂಗತಿ.೧ ಸಮಾಜದಲ್ಲಿ ತುಂಬಿ ತುಳುಕುತ್ತಿರುವ ಕಂದಾಚಾರ ಮೌಢಗಳ ವಿಚಾರ ಬಂದಾಗ, ಬಡವ-ಬಲ್ಲಿದರೆಂಬ ಅಸಮಾನತೆಯನ್ನು ಕಂಡಾಗ, ಜಾತಿ ಎಂಬುದು ಬೆನ್ನು ಹಿಡಿದು ಕಾಡುವಾಗ ಅವನು “ದಾಸನಾಗುವುದಿಲ್ಲ. ಈ ದಿಟ್ಟತನಕ್ಕೆ ಪ್ರೇರಣೆಯಾಗುವುದು ಅವನ ಅನುಭವ. ಆ ಅನುಭವವನ್ನು ಗ್ರಹಿಸಿಕೊಂಡ ಅವನ ಕವಿ ಹೃದಯ. ಅವನು ಸಂತನೇ ಆಗಿ ಉಳಿದು ಬಿಟ್ಟಿದ್ದರೆ ಈ ರಚನೆಗಳಿಗೆ ಒಂದು ಬಗೆಯ ಉತ್ಕಟತೆ, ಅರ್ಥಪೂರ್ಣತೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇಂಥ ಸಂದರ್ಭಗಳಲ್ಲಿ ಕನಕದಾಸ ಮೊದಲು ಕವಿಯಾಗುತ್ತಾನೆ. ಅನಂತರ ದಾಸನಾಗುತ್ತಾನೆ ಅನ್ನುವುದು ಮುಖ್ಯ. ಈ ಮಾತನ್ನೂ ಕೀರ್ತನೆಯೊಂದರಿಂದಲೇ ಚರ್ಚಿಸಬಹುದು. ಕುಲಕುಲ ಕುಲವೆನ್ನುತಿಹರು ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ || ಕೆಸರೊಳು ತಾವರೆ ಪುಟ್ಟಲು ಅದ ತಂದು ಬಿಸಜನಾಭನಿಗರ್ಪಿಸಲಿಲ್ಲವೆ | ಹಸುವಿನ ಮಾಂಸದೊಳುತ್ತತ್ತಿ ಕ್ಷೀರವು ವಸುಧೆಯೊಳಗೆ ಭೂಸುರರುಣ್ಣಲಿಲ್ಲವೆ || ಮೃಗಗಳ ಮೈಯಲ್ಲಿ ಪುಟ್ಟಿದ ಕಸ್ತೂರಿ ತೆಗೆದು ಪೂಸುವರು ಭೂಸುರರೆಲ್ಲರು | ಬಗೆಯಿಂದ ನಾರಾಯಣನ್ಯಾವ ಕುಲದವ ಅಗಜವಲ್ಲಭನ್ಯಾತರ ಕುಲದವನು || ಆತ್ಮ ಯಾವ ಕುಲ ಜೀವ ಯಾವ ಕುಲ ತತ್ತೆಂದ್ರಿಯಗಳ ಕುಲ ಪೇಳಿರಯ್ಯ | ಆತ್ಮಾಂತರಾತ್ಮ ನೆಲೆಯಾದಿ ಕೇಶವ ಆತನೊಲಿದ ಮೇಲೆ ಯಾತರ ಕುಲವಯ್ಯ || ಕನಕದಾಸನು ಕೆಳಜಾತಿಯಲ್ಲಿ (ಕುರುಬರು) ಹುಟ್ಟಿಬಂದ ಕಾರಣಕ್ಕೆ ಅವನ ಜಾತಿಯೇ ಹೆಜ್ಜೆ ಹೆಜ್ಜೆಗೂ ಕಾಲೊಡಕಾಗಿದೆ, ಈ ಜಾತಿಯ ಸಮಸ್ಯೆಯನ್ನು ಆಮೂಲಾಗ್ರವಾಗಿಯೇ ಪರಿಗಣಿಸುತ್ತಾನೆ. ಈ ಸಮಸ್ಯೆ ಕವಿಯ ಮನಸ್ಸಿನಲ್ಲಿ ವ್ಯಕ್ತಗೊಳ್ಳುವ ಕ್ರಮವೇ ಅದು. ಸತ್ಯಸುಖವುಳ್ಳ ಜನರಿಗೆ ಕುಲ ಯಾವುದು ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಮೊದಲು ತಾವರೆ ಕೆಸರುಗಳ ಸಂಕೇತದ ಮೂಲಕ ಇದರ ನೆಲೆಯನ್ನು ಹುಡುಕಿ, ಆಮೇಲೆ ಪೂಜ್ಯರೆಂದು ಕರೆಸಿಕೊಳ್ಳುವವರ ಕುಲದ ಮೂಲವನ್ನು ಕೆದಕುತ್ತಾ ಅದರ ವ್ಯಾಪಕತೆಯನ್ನು ತೆರೆದು ತೋರಿಸುತ್ತಲೇ ಆಡುವವರ ಇಬ್ಬಂದಿತನವನ್ನು ಬಹು ಸೂಕ್ಷ್ಮವಾಗಿ ಆದರೆ ಸಶಕ್ತವಾಗಿ ದಾಖಲಿಸುತ್ತಾನೆ. ಹೀಗೆ ಒಂದು ಬಗೆಯ ವಿಷಾದದ ದನಿಯಿಂದಲೇ+ಗೆ ಹೊರಡುವ ವಿಚಾರ ಕೊನೆಗೆ ಮನುಷ್ಯ ಕುಲದ ಉದ್ದಾರದ ಕಡೆಗೆ ಚಾಚುವ ರೀತಿ D), & ೧. “ಕನಕದಾಸರು ಹರಿದಾಸರಲ್ಲಿ ಕವಿ ಎಂಬ ಹೇಳಿಕೆ ಪ್ರಶ್ನಾರ್ಹವಾಗುತ್ತದೆ” ಎಂಬ ಎಚ್. ಎಸ್. ವೆಂಕಟೇಶಮೂರ್ತಿ ಅವರ ಕೀರ್ತನ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ : ಒಂದು ತೌಲನಿಕ ಅಭ್ಯಾಸ” ಎಂಬ ಲೇಖನವನ್ನು ವಿವರಗಳಿಗೆ ನೋಡಬಹುದು. 'ಕನಕಕಿರಣ', ಸಂ : ಕಾ. ತ. ಚಿಕ್ಕಣ್ಣ. ೨. ಕೆ. ಜಿ. ನಾಗರಾಜಪ್ಪ ತಮ್ಮ ಮರುಚಿಂತನೆ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ : “ಇಲ್ಲಿ ವೈರಾಗ್ಯ ಇಲ್ಲವೆ ಆಧ್ಯಾತ್ಮಿಕವಾದ ವ್ಯಾಖ್ಯಾನ ಕಂಡು ಬರುವುದೇ ಹೊರತು ಸಾಧಕನಾಗಿ ಹುಟ್ಟು ಕುರುಬ ಜಾತಿಯವನಾಗಿ, ಸಮಾಜದಲ್ಲಿ ಅನುಭವಿಸಿದ ಸಿಹಿಕಹಿಯ ವೈಯಕ್ತಿಕವಾದ ಅನುಭವ ವ್ಯಕ್ತವಾಗುವುದಿಲ್ಲ. ಇವನಿಗೆ ಜಾತಿಯ ವಿಷಯದ ಸ್ಪಷ್ಟವಾದ ನಿಲುವಿಲ್ಲ......” -ಈ ಹೇಳಿಕೆಯನ್ನು ಮೇಲಿನ ಸಂಗತಿಗಳ ಮತ್ತು ಮುಂದೆ ಚರ್ಚಿತವಾಗುವ ಸಂಗತಿಗಳ ಹಿನ್ನೆಲೆಯಲ್ಲಿ ಪರಿಶೀಲಿಸಬೇಕು.

  • ೧. 'ವಿಷಾದ ಮಾಡುವುದೂ ಒಳ್ಳೆಯದನ್ನು ಬಯಸುವ ಹೊರಳು ಸ್ಥಿತಿಯಲ್ಲಿ ಎಂಬುದನ್ನು ಗಮನಿಸಬೇಕು. ಕನಕದಾಸನ ಇಂಥ ದನಿಗಳನ್ನು ಅಲ್ಲಲ್ಲೇ ಕಾಣಬಹುದು. ೧. ಯಾತರವನೆಂದುಸಿರಲಿ ಜಗ

ನಾಥ ಮಾಡಿದನೊಂದ ನರರೂಪಯ್ಯ