ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೦೨ ಕನಕ ಸಾಹಿತ್ಯ ದರ್ಶನ-೧ ಕನಕನ ಸಾಮಾಜಿಕ ವಿಡಂಬನೆ ೮೦೩ ಧರ್ಮದ ಹೆಸರಲ್ಲಿ ಬಲ್ಲಿದರು ಬಡವರ ಮನುಷ್ಯತ್ವವನ್ನು ಕಡೆಗಣಿಸಿ, ಸರ್ವಜೀವಿಗಳನ್ನು ಹಿಂಸಿಸಿ, ತಾವು ಸುಖಪಡುವುದನ್ನು ಕಂಡು ರೋಸಿ ಹೋದ ಬುದ್ದ ಕ್ರಿ. ಪೂ. ಕೆಲವು ಶತಮಾನಗಳ ಮೊದಲು ಅವತರಿಸಿ “ದಯೆಯೇ ಧರ್ಮದ ಮೂಲ, ಅಹಿಂಸಾ ಪರಮೋ ಧರ್ಮಃ” ಎಂದು ಜಾತ್ಯತೀತವಾದ ಮಾನವ ಧರ್ಮವನ್ನು ಸಾರಿದ. ಅಶೋಕನು ಅದನ್ನು ಶಾಸನ ಮೂಲಕ ವಿಶ್ವಧರ್ಮವಾಗಿ ಬೆಳೆಸಿದ. ವೈದಿಕರ ಪೂರ್ವಾಗ್ರಹ ಪೀಡೆಗೊಳಗಾದ ಆ ಮತ ಶತಮಾನಗಳು ಉರುಳಿದಂತೆ ಕಳೆಗುಂದಿದಾಗ ಕ್ರಿ. ಶ. ೧೨ನೆ ಶತಮಾನದಲ್ಲಿ ಬಸವಣ್ಣ ಅವತರಿಸಿ ಬುದ್ದನಂತೆಯೇ “ದಯೆಯಿಲ್ಲದ ಧರ್ಮ ಯಾವುದಯ್ಯಾ, ದಯೆಯೇ ಬೇಕು ಸಕಲಜೀವಿಗಳೆಲ್ಲರಲ್ಲಿ, ಇಲ್ಲದೆ ತಾನು ಹಾರುವನೆಂದರೆ ಕೂಡಲ ಸಂಗಮದೇವ ನಗುವನಯ್ಯಾ” ಎಂದು ಸಾರಿದ. ವೈದಿಕನಾದ ತಾನು ಜಾತೀಯತೆಯ ದ್ಯೋತಕವಾದ ಜನಿವಾರವನ್ನು ಕಡಿದು ಹಾಕಿ, ನಿಜವಾದ ವೈದಿಕ ಧರ್ಮದ ಸಾರವನ್ನು ಭಟ್ಟಿಯಿಳಿಸಿ ಸಿದ್ಧಗೊಳಿಸಿದ ವಚನಸಾರವನ್ನು ಅನುಭವ ಮಂಟಪದ ಭಕ್ತಿಯ ಕಟ್ಟೆ ಕಟ್ಟಿ ಹಿಂದುಳಿದವರಿಗೆ ಉಣಿಸಿ, ಮಾನವ ಸಮಾಜವನ್ನು ಉದ್ಧರಿಸಿ ಜಗಜ್ಯೋತಿಯಾದ. ಬಸವೇಶ್ವರ ತೋರಿದ ಬೆಳಕಿನಿಂದ ಮಡಿವಂತಿಕೆಯ ಮಬ್ಬು ಕಳೆದು ಕಣ್ಣೆರೆದ ವೈದಿಕ ಪೀಠಾಧಿಪತಿಗಳು, ತಮ್ಮ ಅಸ್ತಿತ್ವದ ಉಳಿವಿಗಾಗಿ ಹೊಸ ದಾರಿ ತುಳಿಯದೆ ನಿರ್ವಾಹ ಇಲ್ಲ ಎಂದು ಬಗೆದು, ವೈದಿಕ ಆಧಾರಗ್ರಂಥಗಳನ್ನು ಮೂಲದಲ್ಲಿ ಓದಿ ದೈತವನ್ನು ಅರ್ಥೈಸುವ ಸಂಸ್ಕೃತಪಂಡಿತರ ಕೂಟವನ್ನು “ವ್ಯಾಸಕೂಟ'ವೆಂದೂ, ಅದರ ಸಿದ್ಧಾಂತಗಳನ್ನು ಜನಸಾಮಾನ್ಯರಲ್ಲಿ ಕೀರ್ತನೆ, ಸಂಗೀತ, ಸಾಹಿತ್ಯಗಳ ಮೂಲಕ ಕನ್ನಡದಲ್ಲಿ ಪ್ರಸಾರ ಮಾಡಬಲ್ಲ ಕೂಟವನ್ನು 'ದಾಸಕೂಟ'ವೆಂದೂ ಕರೆದು ಕಾರ್ಯಪ್ರವೃತ್ತರಾದರು. ಮಧ್ವಾಚಾರ್ಯರಿಂದ ಬೀಜಾವಾಪನೆಗೊಂಡ ದಾಸವಾಯ, ನರಹರಿತೀರ್ಥನ ನಂತರ ಪುಷ್ಕಳವಾಗಿ ಬೆಳೆದು ಸಂಸ್ಕೃತಿಯ ಫಲ ಕೊಡಲಾರಂಭಿಸಿತು. ಪುರಂದರ ಕನಕರು ದಾಸಕೂಟದ ಆಶ್ವಿನಿ ದೇವತೆಗಳಂತೆ ಮೆರೆದು ಜಾತಿಭೇದವಿಲ್ಲದ ಜನ್ಮದ ನೆಲೆಬೆಲೆಗಳನ್ನು ಎತ್ತಿ ತೋರಿದರು. ಸರ್ವಜ್ಞ ಎಂಬ ಕವಿ ಸಮಾಜದ ಏರು ಪೇರುಗಳನ್ನು ವಚನವೆಂಬ ಶಸ್ತ್ರಚಿಕಿತ್ಸೆಯಿಂದ ಸರಿಪಡಿಸಿದನು. ಅನಂತರ ಐರೋಪ್ಯ ಮಿಷನರಿಗಳ ಸೇವೆ ಮತ್ತು ಇಂಗ್ಲೀಷ್ ವಿದ್ಯಾಭ್ಯಾಸ ಇಲ್ಲಿಯ ಅಜ್ಞಾನ ಮೂಢನಂಬಿಕೆಗಳಿಗೆ ಕೊಡಲಿ ಏಟುಕೊಟ್ಟಿತು. ಗಾಂಧಿಯ ಉದ್ದಾರದ ಹೆದ್ದಾರಿಯಲ್ಲಿ ನಡೆಯುತ್ತ ಸರ್ವೋದಯದ ಕನಸು ಕಾಣುತ್ತ ಭಾರತವಿಂದು ಜಾತ್ಯತೀತ ಪ್ರಜಾರಾಜ್ಯವಾಗಿರುವುದು ಬಹುಮಂದಿ ಸಮಾಜ ಸುಧಾರಕರ ಶ್ರಮದ ಫಲದಿಂದಾಗಿ ಆಗಿದೆ. ಈ ರೀತಿ, ಚರಿತ್ರೆಯ ಅವಲೋಕನದಿಂದ, ಪಾಶ್ಚಾತ್ಯ ನಾಗರಿಕತೆಯ ಗಾಳಿ ಭಾರತಕ್ಕೆ ಸರಿಯಾಗಿ ಇನ್ನೂ ಬೀಸದಿರುವ ೧೬ನೇ ಶತಮಾನದಲ್ಲಿ ದ್ರಾವಿಡ ಸಂಪ್ರದಾಯದ ಕುರುಬ ಜಾತಿಯ (ನಿಷ್ಠಾವಂತರೆನಿಸಿಕೊಳ್ಳುವ ವೈದಿಕರ ದೃಷ್ಟಿಯಲ್ಲಿ ಒಬ್ಬ ಶೂದ್ರ !) ಕನಕ ಸಮಾಜೋದ್ದಾರಕ್ಕಾಗಿ ಕೀರ್ತನೆ ಹಾಡುತ್ತಾ ಊರೂರು ಸುತ್ತಾಡುತ್ತಿರುವಾಗ ಮೇಲು ವರ್ಣದವರಿಂದ ಎಂತಹ ಪ್ರತಿಕ್ರಿಯೆ ಕಂಡು ಬಂದಿರಬಹುದು ಎಂದು ಊಹಿಸಲು ಕಷ್ಟವಾಗದು. ಜಾತೀಯತೆಯ ಮೇಲು ಕೀಳು ಭಾವನೆಯೇ ಸಮಾಜ ಸುಧಾರಕರ ತಲೆ ಚಿಟ್ಟು ಹಿಡಿಸುವಂತಹ ವಿಷಯ. ಕನಕನಿಗೂ ಅದರ ಬಾಧೆ ತಟ್ಟದೆ ಇಲ್ಲ. ಬಹುಕಾಲದಿಂದ ಬಟ್ಟೆಯಲ್ಲಿ ಉಳಿದು ಬಂದಿರುವ ಜಿಗಟು ಕೊಳೆಯನ್ನು ಹೋಗಲಾಡಿಸುವಲ್ಲಿ ಆ ಬಟ್ಟೆಯನ್ನು ಒಂದಷ್ಟು ಘರ್ಷಣೆಗೆ ಒಳಗು ಮಾಡಬೇಕಾಗುವುದು ಅನಿವಾರ್ಯವಾಗಿರುವಂತೆ, ಚಿನ್ನದ ಕಚ್ಚಲ ಕಳೆಯಲು ಅದನ್ನು ಕರಗಿಸಿ ಬಡಿಯಬೇಕಾದ ಅಗತ್ಯದಂತೆ, ಕಿಲುಬು ಹೋಗಲು ಪಾತ್ರೆಯನ್ನು ಚೆನ್ನಾಗಿ ಕೆರೆಯಬೇಕಾದಂತೆ, ಮೇಲುವರ್ಣದವರೆಂದು ತನ್ನ ಮಾತನ್ನು ಉಪೇಕ್ಷಿಸುವ ಜನವನ್ನು ತಿದ್ದಲು ಕನಕ ಬರೇ ವಾಚ್ಯವಾಗಿ ಅವರಿಗೆ ಹೇಳದೆ, ಸೂಚ್ಯವಾಗಿ, ಕಟಕಿಯಾಗಿ, ವಕ್ರೋಕ್ತಿಯಾಗಿ, ವ್ಯಂಗ್ಯವಾಗಿ, ವಿಡಂಬನಾತ್ಮಕವಾಗಿ ಹೇಳಬೇಕಾಯಿತು. ಹಾಗೆ ಒಬ್ಬ ವ್ಯಕ್ತಿ ಹೇಳಬೇಕಾದರೆ ಅವನಲ್ಲಿ ಅಂಥ ಕಿಚ್ಚು ಆತ್ಮವಿಶ್ವಾಸ, ಅಂತಃಸತ್ವ ಇರಬೇಕಾಗುತ್ತದೆ. ಹೌದು ! ಕನಕನೂ ಅಂಥ ಶಕ್ತಿ ಉಳ್ಳ ಒಬ್ಬ ಪವಾಡಪುರುಷ ತನ್ನ ತಂದೆಯಂತೆ ತಾನೂ ವಿಜಯನಗರದ ಅಧೀನದ ಒಬ್ಬ ಮಾಂಡಲಿಕ. ತಿರುಪತಿ ತಿಮ್ಮಪ್ಪನ ಅನುಗ್ರಹದಿಂದ ಜನಿಸಿ, ತಿಮ್ಮಪ್ಪನೆಂದು ನಾಮಕರಣ ಹೊಂದಿದ್ದರೂ, ತಂದೆ-ತಾಯಿಗಳ ಪ್ರೀತಿಯ 'ಚಿನ್ನ' “ಕನಕ” ಎಂಬ ಹೆಸರು ಸಾರ್ಥಕವಾಗುವಂತೆ ದೈವಾನುಗ್ರಹದಿಂದ ಭೂಮಿಯಲ್ಲಿ ಕೆಲವು ಕಡೆ ಅವನಿಗೆ ನಿಕ್ಷೇಪ ದೊರೆಯಲು, ಅದರಿಂದ ಕಾಗಿನೆಲೆಯ ಆದಿಕೇಶವ ದೇವಾಲಯ ಕಟ್ಟಿಸಿ, ಉಳಿದುದನ್ನು ದಾನಧರ್ಮ ಮಾಡಿ, 'ಕನಕನಾಯಕ' 'ಕನಕಪ್ಪ' ಎನ್ನಿಸಿದವನು. ಗರಡಿ ಸಾಧಕನಾದ ಯುದ್ಧವೀರ, ನಿಷ್ಠುರ ನ್ಯಾಯವಾದಿ, ಯಮಧರ್ಮನ ಅವತಾರ, ದೈವಪ್ರೇರಣೆಯಿಂದ ಭೋಗ ಬಿಟ್ಟು, ತ್ಯಾಗಿಯಾಗಿ ದಾಸೋಹಂಭಾವದಿಂದ, ದಾಸಕೂಟದ ಸದಸ್ಯನಾಗಿ 'ಮೋಕ್ಷಕ್ಕೆ ನಾನು