ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೦೪ ಕನಕ ಸಾಹಿತ್ಯ ದರ್ಶನ-೧ ಕನಕನ ಸಾಮಾಜಿಕ ವಿಡಂಬನೆ ೮೦೫. ಈಶ ನಿನ್ನ ಚರಣ ಭಜನೆ | ಆಸೆಯಿಂದ ಮಾಡುವೇನು | ದೋಷರಾಶಿ ನಾಶ ಮಾಡೋ ಶ್ರೀಶಕೇಶವ || ಎಂಬುದಾಗಿ ದೇವರ ದಾಸನಾಗಿ ಮೊದಲ ಕೀರ್ತನೆ ಹಾಡಿದ ಕನಕ, ಮುಂದೆ ಪುಂಖಾನುಪುಂಖವಾಗಿ ಆಶುಕವಿಯಾಗಿ ಅಲ್ಲಲ್ಲಿ ಹೊಳೆದ ಭಾವದಂತೆ ಕೀರ್ತನೆಗಳನ್ನು ಹಾಡಿದ್ದಾನೆ. ಅವನ ವಿಡಂಬನೆಯ ಮಾತುಗಳಲ್ಲಿ ಹಲವನ್ನು ಕೀರ್ತನೆಗಳಿಂದಲೂ, ಕೆಲವನ್ನು ಅವನ ಹರಿಭಕ್ತಿಸಾರದಿಂದಲೂ, ಸಂಗ್ರಹಿಸಬಹುದಾಗಿದೆ. ರಾಮಧಾನ್ಯ ಚರಿತ್ರೆಯೂ ಸಂಪೂರ್ಣ ವಿಡಂಬನೆಗಾಗಿಯೇ ಹುಟ್ಟಿಕೊಂಡಿದೆ. ಅವನ ಮುಂಡಿಗೆಗಳು ವಿದ್ವಾಂಸರ ಬುದ್ಧಿಗೆ ಸಾಣೆ ಹಿಡಿಯುವುದಕ್ಕಾಗಿಯೇ ಸಿದ್ಧಗೊಂಡವುಗಳು. (ಅಹಂಕಾರ) ಹೋದರೆ ಹೋದೇನು' ಎಂದು ಹೇಳಿ, ದಾಸಕೂಟದ ಧೈಯವಾದ ನಿಷ್ಕಾಮ ಸೇವೆಯ ಅಗತ್ಯವನ್ನು ಸೂಚಿಸಿ, ಉಳಿದವರು ಸಕ್ರಿಯವಾಗಿ ದುಡಿಯುವಂತೆ ಮಾಡಿದವನು. ವ್ಯಾಸರಾಯರನ್ನು ಗುರುವಾಗಿ ಸ್ವೀಕರಿಸಲು ಹೋದ ಮೊದಲ ಸಂದರ್ಶನದಲ್ಲಿಯೇ “ಕುರುಬನಿಗೆಂಥ ಕೋಣ ಮಂತ್ರವೊ?” ಎಂದು ಗುರು ಪರಿಹಾಸ ಮಾಡಿದಾಗ, “ಶಂಖದಿಂದ ಬರುವುದೇ ತೀರ್ಥ” ಎಂಬ ವಿಶ್ವಾಸದಿಂದ ಕೋಣಮಂತ್ರ ಜಪಿಸಿ ಯಮನ ಕೋಣವನ್ನು ಪ್ರತ್ಯಕ್ಷ ಮಾಡಿಕೊಂಡು ತನ್ನ ಯೋಗ್ಯತೆ ಪರಿಚಯ ಮಾಡಿಸಿಕೊಟ್ಟವನು. ಯಾರೂ ಇಲ್ಲದಲ್ಲಿ ತಿನ್ನಲು ಗುರು ಕೊಟ್ಟಿದ್ದ ಹಣ್ಣನ್ನು ತಿನ್ನದೇ, 'ದೇವರು ಎಲ್ಲೆಲ್ಲೂ ಇರುವನು' ಎಂದು ಎಲ್ಲರ ಕಣ್ಣು ತೆರೆಯಿಸಿದವನು, ಉಡುಪಿಯಲ್ಲಿ ಉಚ್ಚವರ್ಣದವರ ಆಕ್ಷೇಪದಿಂದ ದೇವರ ದರ್ಶನ ಸಿಗದಿರಲು ಹಿಂಬದಿಯಲ್ಲಿ ದೇವರನ್ನು ಭಜಿಸಿ, ತನ್ನ ಕಡೆಗೆ ತಿರುಗಿಸಿಕೊಂಡು, ದೇವರು ಭಕ್ತರಾಧೀನ ಎಂಬುದಕ್ಕೆ ಚಾರಿತ್ರಿಕ ದಾಖಲೆ ಉಂಟುಮಾಡಿದನು. ಇಂಥ ಕನಕನಿಗೆ ವಿಜಯನಗರದ ರಾಜಾಶ್ರಯ ಅಲ್ಲದೆ, ಶ್ರೀಪಾದರಾಜ, ವ್ಯಾಸರಾಯ, ವಾದಿರಾಜರಂಥ ವೀರಾಧಿಪತಿಗಳ ಅನುಗ್ರಹದ ಬೆಂಬಲವಿತ್ತು. “ಹರಿದಾಸ ಸಾಹಿತ್ಯವು ಕೀರ್ತನೆ, ಸುಳಾದಿ, ಉಗಾಭೋಗಗಳಿಗೆ ಮಾತ್ರ ಸೀಮಿತವಾಗಿರದೆ ಅದರ ಕೈ ಕಾವ್ಯ ಪ್ರಪಂಚಕ್ಕೂ ಚಾಚುವಂತೆ ಮಾಡಿದ ಶ್ರೇಯಸ್ಸು ಕನಕದಾಸರಿಗೆ” - “ಕನಕದಾಸ ಯಾವ ಮತತತ್ವವನ್ನೂ ತಿರಸ್ಕರಿಸದೆ, ಯಾವ ದೇವರನ್ನೂ ಬಹಿಷ್ಕರಿಸದೆ, ವಿಷ್ಣು ಶಿವರಲ್ಲಿ ಭೇದವನ್ನೇಣಿಸದೆ, ಆತ್ಮಸಾಕ್ಷಾತ್ಕಾರ ಮಾಡಿಕೊಂಡು, ಕಾವ್ಯ ಕ್ಷೇತ್ರ, ಆಧ್ಯಾತ್ಮಿಕ ಕ್ಷೇತ್ರಗಳೆರಡರಲ್ಲೂ ಸಮಾನ ಖ್ಯಾತಿಗಳಿಸಿದ ಮಹಾನುಭಾವ”, “ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಭಕ್ತಿಯ ಹೊಳೆಹರಿಸಿ, ಜನಮನೋಮಂದಿರದಲ್ಲಿ ಚಿರಸ್ಥಾಯಿಯಾದಂತೆ, ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯಚರಿತ್ರೆ, ಹರಿಭಕ್ತಿಸಾರ ಎಂಬ ಕೃತಿಗಳನ್ನು ರಚಿಸಿ, ಕವಿಯಾಗಿ, ಕನ್ನಡ ಸಾಹಿತ್ಯ ಸಾಮ್ರಾಜ್ಯದಲ್ಲಿ ಚಿರಂತನರಾಗಿದ್ದಾರೆ."೩ ಕೀರ್ತನೆಗಳಲ್ಲಿ ಕನಕನಿಗೆ ಬಹುಮಂದಿ ಮರಿಗಳು ಕುಹತನದಿಂದ ಏನೇನೋ ನಿಂದೆಯ ಮಾತುಗಳನ್ನು ಹೇಳುತ್ತಿದ್ದಿರಬೇಕು. 'ಕೀಳಾದವನು ಹೇಳುವುದೇನು?” ಎಂದು ಅವರು ಅಲಕ್ಷಿಸುತ್ತಿರುವಾಗ, ತಾನು ದಾಸಾನುದಾಸ ಎನ್ನುವಲ್ಲಿ ಕನಕನಿಗೇನೂ ನಾಚಿಕೆಯಿಲ್ಲ : ಮುಟ್ಟದಿರು ನಡೆಯೆಂದು ಜನರೆಲ್ಲರೂ ಎನ್ನ ಅಟ್ಟಿ ಬಡಿಯುತ್ತಲಿಹರೋ ಕೃಷ್ಣಾ ನಾವು ಕುರುಬರು ನಮ್ಮ ದೇವರೋ ಬೀರಪ್ಪ ಕಾವ ನಮ್ಮಜ್ಜ ನರಕುರಿಯ || ಕುಲವಿಲ್ಲದ ದಾಸ ಕುರುಬದಾಸ ನಾನಯ್ಯ | ಕಾಳಿದಾಸನ ಮನೆಯ ಕೀಳುದಾಸ | ಆಳುದಾಸನು ನಾನು ಮೂಳದಾಸ | ಆತ್ಮ ಯಾವ ಕುಲ, ಜೀವ ಯಾವ ಕುಲ ತಂದ್ರಿಯಗಳ ಕುಲ ಪೇಳಿರಯ್ಯಾ | ಆತ್ಮಾಂತರಾತ್ಮ ನೆಲೆಯಾದಿ ಕೇಶವ | ಪ್ರೀತನಾದ ಮೇಲೆ ಯಾತರ ಕುಲವಯ್ಯ ? || ೧. ಹರಿದಾಸ ಹೃದಯ-ಡಾ. ವರದರಾಜರಾವ್. ೨. ದೇ. ಜ. ಗೌ, - ನಳಚರಿತ್ರೆಯ ಪೀಠಿಕೆ. ೩. ಕಾವ್ಯಾನುಶೀಲನ - ರಾ. ಗೌ, ಪುಟ ೩೭. ಮಾನವೀಯ ಮೌಲ್ಯವನ್ನು ಗಮನಿಸದೆ, ಹುಟ್ಟಿದ ಜಾತಿಯಿಂದ ಬೆಲೆ ಕಟ್ಟುವಿಕೆಯ ಬಗ್ಗೆ ಅವನ ಸವಾಲು ಹೀಗಿದೆ ;