ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೦೮ ಕನಕ ಸಾಹಿತ್ಯ ದರ್ಶನ-೧ ಕನಕನ ಸಾಮಾಜಿಕ ವಿಡಂಬನೆ ೮೦೯ ಕ್ರಾಂತಿಯ ಗಾಳಿಯಾಗಿ ಊರೂರು ಅಲೆಯುವಾಗ ಅವನಿಗೆ ಗೋಚರಿಸಿದ ಅರ್ಥ ತಿಳಿಯದ ಆಚಾರಗಳ ಬಗ್ಗೆ ಅವನು ಈ ರೀತಿ ಪ್ರಶ್ನಿಸಿರುತ್ತಾನೆ : ನೇಮವಿಲ್ಲ ಹೋಮ ಇನ್ನೇತಕೆ ? | ರಾಮನಾಮವು ಇರದ ಮಂತ್ರವ್ಯಾಕೆ ? ನೀರ ಮುಳುಗಲು ಯಾಕೆ ? ನಾರಿಯಳ ಬಿಡಲ್ಯಾಕೆ ? ವಾರಕೊಂದುಪವಾಸ ಮಾಡಲ್ಯಾಕೆ ? ಅಂಬರವ ತೊರೆಯಲ್ಯಾಕೆ ? ತಾಂಬೂಲ ಬಿಡಲ್ಯಾಕೆ ? ದಂಬಕದ ವೃತ್ತಿಯಲಿ ಇರಲ್ಯಾತಕೆ ? ಬಂದ ಪಾಪಗಳೆಲ್ಲ ನಿಲ್ಲದೇ ಕಳೆದಾವು ಚಂದಾದಿ | ನೆಲೆಯಾದಿ ಕೇಶವನ ನೆನೆಯೆ || ಈ ಬಾಳು ನಶ್ವರ : ಗಾಳಿಗೊಡ್ಡಿದ ಸೊಡರು ಈ ಸಂಸಾರ ಸಂಸಾರ ಸಾಗರವನುತ್ತರಿಸುವೊಡೆ ಕಂಸಾರಿ ನಾಮವೊಂದೇ ಸಾಕು. ಆದುದರಿಂದ ಅರ್ಥ ತಿಳಿದು ಸಾರ್ಥಕ ಜೀವನ ನಡೆಸಬೇಕು : ಪಂಚೇಂದ್ರಿಯಗಳೆಂಬ ಮಂಚಿಕೆಯ ಹಾಕಿರಯ್ಯಾ | ಚಂಚಲವೆಂಬ ಹಕ್ಕಿಯನ್ನು ಓಡಿಸಿರಯ್ಯ | ಉದಯಾಸ್ತಮಾನವೆಂಬೊ ಎರಡು ಕೊಳಗವಮಾಡಿ | ಆಯುಷ್ಯ ರಾಶಿಯನ್ನು ಅಳೆಯಿರಯ್ಯಾ || ಎಂಬಲ್ಲಿ ಅವನ ಕಲ್ಪನೆ ಭವ್ಯವಾಗಿದೆ. ಕಪಟತನವಿದ್ದು ಮಾಡುವ ಭಕ್ತಿ ವ್ಯರ್ಥ : ವಿಪರೀತ ಕಪಟಗುಣ ಕಲುಷವಿದ್ದವರು ಜಪವ ಮಾಡಿದರೇನು | ತಪವ ಮಾಡಿದರೇನು ? ಸತ್ಯವಂತರ ಸಂಗವಿರಲು ತೀರ್ಥವೇತಕೆ ? “ಆರಿಗಳವಲ್ಲಾತ್ಮ ಯೋಗಸಿದ್ಧಿ, ಸೇರಿ ಸುಜ್ಞಾನದಲಿ ಸವಿದುಂಬಗಲ್ಲದೆ? ಜನನ ಮರಣ ವಿಚಾರದಿಂದ ಸಮಾಜವನ್ನು ಎಚ್ಚರಿಸಿ, ವ್ಯಕ್ತಿಗಳನ್ನು ಕರ್ತವ್ಯಕ್ಕೆ ಹಚ್ಚಿರುತ್ತಾನೆ : ಎಲ್ಲಿಂದ ಬಂದೆ ? ಮುಂದೆತ್ತ ಪಯಣ ? ಇಲ್ಲಿ ನಿನಗೆಷ್ಟು ದಿನ ಆಲಸ್ಯ ಮರುಳೆ ? ಸಾಯುವಾಗ ಏನು ಬರುವುದೊ ? ಸಂಗಡೇನು ಬರುವುದೋ ? ಸಾರ್ಥಕ ಜೀವನಕ್ಕಾಗಿ : ದಾನ ಧರ್ಮವ ಮಾಡಿ ಸುಖಿಯಾಗು ಮನವೆ | ಹೀನ ವೃತ್ತಿಯಲ್ಲಿ ಕೆಡಬೇಡ ಮನವೆ ? ಎಲ್ಲರೂ ಪರಮಾತ್ಮನ ಅಂಶವಾಗಿರುವಾಗ ನಾನು, ನೀನು ಎಂಬ ಭೇದವೇಕೆ? ನಾನು ನೀನು ಎನ್ನದಿರೋ ಹೀನ ಮಾನವ || ಜ್ಞಾನದಿಂದ ನಿನ್ನ ನೀನು ತಿಳಿದು ನೋಡಿ ಪ್ರಾಣಿ || ಎಂದು ಮೂದಲಿಸುತ್ತಾನೆ. ಹೆಣ್ಣು, ಹೊನ್ನು, ಮಣ್ಣು ಮೂರು ನಿನ್ನದೇನೆಲೋ | ಅನ್ನದಿಂದ ಬಂದ ಕಾಯ ನಿನ್ನದೇನೆಲೊ ? | ಕಾಲ ಕರ್ಮ ಶೀಲ ನೇಮ ನಿನ್ನದೇನೆಲೊ? ಜಾಲವಿದ್ಯೆ ಬಯಲಮಾಯೆ ನಿನ್ನದೇನೆಲೊ ? | ಲೋಲ ಆದಿಕೇಶವನ ಭಕ್ತನಾಗೆಲೊ || ಎಂದು ಜನರನ್ನು ಸನ್ಮಾರ್ಗಕ್ಕೆ ಹಚ್ಚುತ್ತಾನೆ. ಸಮಾಜಕ್ಕೆ ಅವನ ಸವಾಲು ಹೀಗಿದೆ : ಅಹುದಾದರಹುದೆನ್ನಿ | ಅಲ್ಲವಾದರಲ್ಲೆನ್ನಿ || ದೇವರಿಲ್ಲದ ಗುಡಿಯು ಹಾಳು ಬಿದ್ದಂಗಡಿಯು | ಭಾವವಿಲ್ಲದ ಭಕುತಿಯದು ಕುಹಕ ಯುಕುತಿ | ಈ ಧರೆಯ ಭೋಗವನ್ನು ಮೆಚ್ಚಿ ಹರಿಯ ಮರೆತು ಕೆಡುವವರು ಮೂಢರು: “ಧರೆಯ ಭೋಗ ಕನಸಿನಂತೆ” ಎನ್ನುತ್ತಾ ತಿರುಕನ ಕನಸಿನ ಉದಾಹರಣೆಯಿಂದ ಹಗಲು ಕನಸು ಕಾಣುವವರ ಕಣ್ಣು ತೆರೆಯಿಸಿದ್ದಾನೆ. “ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ” ಎಂದು ಎಲ್ಲರ ಡಂಭಾಚಾರದ ಗುಟ್ಟೂ ಅಷ್ಟೆ-ಸ್ವಾರ್ಥ ! ಎಂದು ಮಾರ್ಮಿಕವಾಗಿ ಹೇಳಿದ್ದಾನೆ. ಎಂಥ ಶಕ್ತಿಯಿದ್ದರೂ ದೈವದೊ ಇಲ್ಲವಾದರೆ ಪ್ರಯೋಜನವೇನು? ಜೀವನದ ಸಾರ್ಥಕತೆಗೆ ದೈವಭಕ್ತಿ, ಸದಾಚಾರ, ಸಕಾಲಿಕ ಸಾಧನೆಗಳ ಬಗೆಗೆ ಮಾರ್ಮಿಕವಾಗಿ ಹೇಳಿದ್ದಾನೆ : “ಭಕ್ತಿಯಿಲ್ಲದ ನರಗೆ ಮುಕ್ತಿಯುಂಟೆ ? ಬಾಯಿ ನಾರಿದ ಮೇಲೆ ಏಕಾಂತವೆ ; ತಾಯಿ ತೀರಿದ ಮೇಲೆ ತವರಾಸೆಯೆ ? ಕಣ್ಣು ಕೆಟ್ಟ ಮೇಲೆ