ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೧೦ ಕನಕ ಸಾಹಿತ್ಯ ದರ್ಶನ-೧ ಕನಕನ ಸಾಮಾಜಿಕ ವಿಡಂಬನೆ ೮೧೧ ಕಡುರೂಪ ಚೆಲ್ಲಿಕೆಯೆ ? ಬಣ್ಣಗುಂದಿದ ಮೇಲೆ ಬಹುಮಾನವೆ ? ಪುಣ್ಯ ತೀರಿದ ಮೇಲೆ ಪರಲೋಕ ಸಾಧನವೆ ? ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ ? ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆ ? ಚಳಿಯುರಿಗೆ ಚಂದನದ ಲೇಪ ಹಿತವೆ ? ಮೊಲೆಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ ? ಬೆಲೆ ಬಿದ್ದ ಸರಕಿನೊಳು ಲಾಭವುಂಟೆ ? ಪಥ್ಯ ಸೇರಿದ ಮೇಲೆ ನಿತ್ಯ ಸುಖವೆನಬಹುದೆ ? ಸತ್ವ ತಗ್ಗಿದ ಮೇಲೆ ಸಾಮರ್ಥ್ಯವೆ ? ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ ಭಕ್ತಿಯೇ ಸರ್ವಸ್ವಕೆ ಕಾರಣವಲ್ಲವೆ?” ಲೋಕಾನುಭವಿಯಾದ ಕನಕನಿಗೆ ವಿಷಯದ ಸಮರ್ಥನೆಗೆ ನಿದರ್ಶನಗಳಿಗಾಗಿ ಹುಡುಕಬೇಕಾಗಿಲ್ಲ : “ಏನುಯಿಲ್ಲದ ಎರಡು ದಿನದ ಸಂಸಾರ”ದಲ್ಲಿ “ದಾನಧರ್ಮವ ಮಾಡಿರಯ್ಯಾ” ಎಂಬಲ್ಲಿ ಶಕ್ತರು ಅಶಕ್ತರನ್ನು ಕಾಣಬೇಕಾದ ದೃಷ್ಟಿಕೋನವನ್ನು ತೋರಿರುತ್ತಾನೆ. - “ಅಪುತ್ರಸ್ಯ ಗತಿರ್ನಾಸ್ತಿ”ಯೆಂದು ಶಾಸ್ತ್ರ ಹೇಳುವುದೆಂದು, ದುಷ್ಟಮಕ್ಕಳನ್ನು ಪಡೆದಲ್ಲಿ ಫಲವೇನು? “ಮಗನಿಂದ ಗತಿಯುಂಟೆ ಜಗದೊಳು | ನಿಗಮಾರ್ಥಸಾರ ವಿಚಾರದಿಂದಲ್ಲದೆ ?” “ಕಲಿಯುಗದ ಮಹಿಮೆಯನು ಕಂಡಷ್ಟು ಹೇಳುವೆನು” ಎಂದು ಹೇಳಿ, ಸಮಾಜದಲ್ಲಿ ಭ್ರಷ್ಟಾಚಾರಗಳ ಕಡೆಗೆಲ್ಲ ಬೆಳಕು ಬೀರಿದ್ದಾನೆ. ಕಷ್ಟದಿಂದ ನಿರಾಸೆ ಗೊಂಡವರಿಗೆ ಆತ್ಮವಿಶ್ವಾಸದ ನಿದರ್ಶನಗಳಿಂದ ನೆಮ್ಮದಿ ಒದಗಿಸಿದ್ದಾನೆ : “ತಲ್ಲಣಿಸದಿರು ಕಂಡ್ಯ ತಾಳು ಮನವೆ | ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ.” ಎಲ್ಲವೂ ದೈವನಿಯಮದಂತೆ ನಡೆಯುವುದು ಚಿಂತಿಸಬೇಕಾಗಿಲ್ಲ : “ಬೇಕೆಂದರೆ ಬಾರದು, ಒಲ್ಲೆನೆಂದರೆ ಹೋಗದು, ಏಕಂಜುವೆ ಎಲೊ, ಶ್ರೀಹರಿ ಕರುಣಿಸದಲೆ ಒಂದಾಗದು.” “ಪ್ರಾಚೀನ ಕರ್ಮವಿದು ಬಿಡಲರಿಯದು, ಯೋಚನೆಯ ಮಾಡಿ ಬಳಲುವುದೇಕೆ ಮನುಜಾ ?” ವಿರೋಧಾಭಾಸದ ಹಲವಾರು ಮಾತುಗಳಿಂದ ಜನತೆಯನ್ನು ವಿಚಾರಕ್ಕೆ ಹಚ್ಚಿದ್ದಾನೆ : ಸಹಜವಿದು ಈ ನುಡಿಯು ಸಟೆಯ ಮಾತಲ್ಲ | ಮಹಿಯೊಳಗೆ ಪೇಳುವೆನು ವಿಹಿತ ವಾಕ್ಯಗಳ ಶ್ರುತಿಶಾಸ್ತ್ರ ಪುರಾಣಗಳನೋದುವವನೆ ಶೂದ್ರ | ಅತಿಥಿಯಾದರಿಸುವನು ಅತಿಲುಬ್ದನು | ಪ್ರತಿನಿತ್ಯ ಸಂಧ್ಯಾನ ಮಾಡುವವನೇ ಪಾಪಿ | ಪತಿಯಾಜ್ಞೆಯಿಂದಿಹಳೆ ಪರಮಪಾತಕಿಯು || ಕನಕನ ಕೀರ್ತನೆಗಳಲ್ಲಿ ಸಾಕಷ್ಟು ವ್ಯಂಗ್ಯವಿದ್ದು ಉಕ್ತಿ ಚಾತುರ್ಯವಿದೆ: “ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ | ಸುಜ್ಞಾನಿಗಳ ಕೂಡೆ ಜಗಳವೇ ಲೇಸು ” “ಹಳ್ಳಹರಿದು ಹೋಗುವಾಗ ಗುಳ್ಳೆ ಬಂದು ಒಡೆಯಿತಲ್ಲ” “ಉಳಿಪೊರೆಯಂತೆ ಕಾಣೋ ಸಂಸಾರದ ಆಟ.” “ಕನಕನ ಕೀರ್ತನೆಗಳಲ್ಲಿ ಭಕ್ತಿ, ಕಾವ್ಯಶಕ್ತಿಗಳೆರಡೂ ಉನ್ನತಿಗೇರಿವೆ.”೧ ಹರಿಭಕ್ತಿಸಾರದಲ್ಲಿ | - “ಕನಕನ ಕೃತಿಗಳಲ್ಲಿ ಹರಿಭಕ್ತಿಸಾರ ಮೋಕ್ಷದ ದಾರಿಗೆ ದೀಪದಂತಿರುವ ಕೃತಿ.” ಪ್ರಾಣಿ ಪಕ್ಷಿಗಳನ್ನಾದರೂ ಮುಟ್ಟಬಹುದು, ಮನೆಯೊಳಗೆ ಇರಗೊಡಿಸಬಹುದು, ಬುದ್ದಿಜೀವಿಗಳಾದ ಮಾನವರು ಮಾತ್ರ ಮಾಡಿನಡಿಗೂ ಬರಬಾರದು. “ಬುದ್ದಿವಂತ ಮೂಢರ ಕಟ್ಟಳೆಯಿದು.” ಕಟುಮಾತು ಎಂಬ ಶಸ್ತದ ಅಲಗಿನಿಂದ ಶಸ್ತ್ರಕ್ರಿಯೆ ನಡೆಸಿ, ಜನಮನದ ಮಲಿನವನ್ನು ಕಳೆದು, ಅಲ್ಲಿ ಪರಮಾತ್ಮನ ಅಂಶವನ್ನು ಕಾಣಿಸಿದ್ದಾನೆ. “ಕನಕನು ಆಚಾರವಿಚಾರಗಳ ಅಂತರವನ್ನೂ, ಬಹಿರಾಡಂಬರ ಬೂಟಾಟಿಕೆಯನ್ನೂ ಕಟುವಾಗಿ ಟೀಕಿಸಿರುವನು.”೨ ತೋಲಗುವರು ತಾ ಕಡೆಕಡೆಗೆ ತಾ ಹೊಲೆ || ಹೊಲೆಯೆನುತ ಕಳಕಳಿಸಿ ಮೂತ್ರದ | ಬಿಲದೊಳಗೆ ಬಂದಿಹುದ ಕಾಣದೆ ಬಂದೆ ಮನನೊಂದು || ಜಲದೊಳಗೆ ಮುಳುಗಿದರೆ ತೋಲಗದು || ಹೊಲೆಗೆಲಸವೀ ದೇಹದೊಳು ನೀ || ನೆಲಸಿರಲು ಹೊಲೆಯುಂಟೆ ರಕ್ಷಿಸು ನಮ್ಮನನವರತ || “ಕೃಷ್ಣಾಜಿನ, ಪಟ್ಟೆ, ದರ್ಭೆ ಇತ್ಯಾದಿಗಳ ಸಂಪರ್ಕದಿಂದ ಸದಾ ಮಡಿತನ ನೆಲಸಿರುವುದಾದರೆ, ಪರಮಾತ್ಮನೇ ನೆಲಸಿರುವ ಮಾನವನನ್ನು ಹುಟ್ಟಿನಿಂದ ಹೊಲೆಯನೆನಬಹುದೆ? ದುರಾಚಾರದಿಂದ ಅಂಟುವ ಹೊಲೆತನವನ್ನು ನಿತ್ಯಸ್ನಾನದಿಂದ ತೊಳೆಯಬಹುದೆ ?” ಮಾರ್ಮಿಕವಾದ ಇಂಥ ಮಾತುಗಳಿಂದ ಸಮಾಜದಲ್ಲಿ ಒಳಿತಿಗಾಗಿ ಕ್ರಾಂತಿ ಆಗದೆ ಇದ್ದೀತೆ ? 1. ಸಾಹಿತ್ಯ ಚರಿತ್ರೆ - ತ. ಸು. ಶ್ಯಾಮರಾಯರು, ಮೇ, ರಾಜೇಶ್ವರಯ್ಯ ೨. ಹರಿದಾಸ ಹೃದಯ - ಡಾ. ಜಿ. ವರದರಾಜರಾವ್