ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೫೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಪೌರಾಣಿಕ ಪ್ರಜ್ಞೆ ಎಳೆವೆರಲ್ಗಳ ಚಿಟುಕೊತ್ತಿ ಕೈದೊಡಿಸುವ ಬಳೆಗಾರರಿರ್ದರಿಕ್ಕೆಲದಿ || ಇಂತಹ ಕಡೆಗಳಲ್ಲಿ ಜನಸಾಮಾನ್ಯರಲ್ಲಿ ವ್ಯಕ್ತವಾಗುತ್ತಿದ್ದ ರಸಿಕತೆಯ ಬದುಕನ್ನು ಕನಕರು ಸೆರೆ ಹಿಡಿದಿರುವುದು ಕಂಡುಬರುತ್ತದೆ. 'ಮಲ್ಲಿಗೆಯರಳಂತೆ ಬಿಟ್ಟೋಗರ, ಮೊಸರೊಳ್ಳೆಯ ಬಹುಳುಪ್ಪುಗಾಯಿ, ಗಲ್ಲಿಸಿ ಗಟ್ಟಿಯ ಕಟ್ಟಿದ ಹಿರಿಯರು ಪುಲ್ಲಿಗೆಗಳು ತರತರಿಸೆ' ಊಟ ಮಾಡಿದರಂತೆ. ಭೋಜನದ ವಿಷಯದಲ್ಲಿಯೂ ಜನರ ರಸಿಕತೆ ಶ್ರೀಮಂತವಾಗಿತ್ತು ಎಂಬುದನ್ನು ಇದು ತೋರಿಸುತ್ತದೆ. ಇದೂ ಅಲ್ಲದೆ ಆಗಿನ ಕಾಲದಲ್ಲಿ ವಾರಾಂಗನೆಯರ ಸಂಸ್ಕೃತಿಯ ಮಟ್ಟ ಇಂದಿಗಿಂತ ಉತ್ತಮವಾಗಿತ್ತೆನ್ನುವಂತೆ ಕಾಣುತ್ತದೆ. ನೃತ್ಯ ಗಾಯನ ಮತ್ತು ವಾದನ ಕಲೆಗಳಲ್ಲಿ ಅವರು ಪರಿಣತಿಯನ್ನು ಪಡೆದು ರಸಿಕರನ್ನು ರಂಜಿಸುತ್ತಿದ್ದರೆಂದು ಕನಕರು ಹೇಳುತ್ತಾರೆ. ಬದುಕಿನ ಬಗೆಗೆ ವಿಶೇಷ ಒಲವನ್ನು-ಪ್ರೀತಿಯನ್ನು ಬೆಳಸಿಕೊಂಡ ಕವಿ ಒಂದು ಕಾಲಕ್ಕೆ ಅದರ ಎಲ್ಲ ರಸ ರುಚಿಗಳನ್ನು ಉಂಡು ಬಿಟ್ಟವನಾದ್ದರಿಂದ ಅವನು ಉಸಿರು ಬಿಟ್ಟರೂ ಸಾಕು ಬದುಕಿನ ಒಗ್ಗರಣೆಯ ವಾಸನೆ ಗಮ್ಮೆಂದು ಹೊಡೆದು ಓದುಗನ ಎದೆಯಲ್ಲಿ ರಸ ದ್ರವಿಸುವಂತೆ ಮಾಡುತ್ತದೆ.” (ಎಸ್. ಎನ್. ಕೋತಿನ, ಉಪೋದ್ಘಾತ, ಮೋಹನ ತರಂಗಿಣಿ, ಪು ೧೮) “ಮೋಹನ ತರಂಗಿಣಿ ಯಲ್ಲಿ ಕಾಣಿಸಿಕೊಳ್ಳುವ ಪಾತ್ರಗಳೆಲ್ಲವೂ ಪೌರಾಣಿಕವಾಗಿದ್ದರೂ ಅವೆಲ್ಲ ನೆಲದ ಮಕ್ಕಳಾಗಿಯೇ ಕಾಣಿಸಿಕೊಂಡು ಓದುಗರೊಡನೆ ಆತ್ಮೀಯತೆಯ ಸಂಬಂಧವನ್ನು ಬೆಳಸಿಕೊಳ್ಳುತ್ತವೆ. ಪೌರಾಣಿಕ ಕಥೆಗೆ ಸಹಜವಾದ ಅಲೌಕಿಕ ಸನ್ನಿವೇಶ, ಅದ್ಭುತ ಪವಾಡ, ಅವಾಸ್ತವ ಸನ್ನಿವೇಶಗಳು ಕಾಣಿಸಿಕೊಂಡರೂ ಪಾತ್ರಗಳ ಸ್ವಭಾವ ಪ್ರವೃತ್ತಿಗಳು ಹಾಗೂ ಅವುಗಳ ಬದುಕು ಭಾವನೆಗಳು ಅತ್ಯಂತ ಸಹಜವಾಗಿ ಮಾನವೀಯವಾಗಿ ಮೂಡಿ ಬಂದಿದೆ.” (ಅದೇ ಪು. ೧೫) ಸಾಂಗತ್ಯದಂತಹ ಅಪ್ಪಟ ದೇಸೀಯ ಹಾಡುಗಬ್ಬದಲ್ಲಿ ಕಾವ್ಯ ಕಟ್ಟಲು ತೊಡಗಿದ ಕವಿಯ ಮನೋಧರ್ಮ ಜನಪರವಾದುದೆಂದು ಬೇರೆ ಹೇಳಬೇಕಾಗಿಲ್ಲ. ನಳದಮಯಂತಿ ಕಾವ್ಯರಚನೆಗೆ ಭಾಮಿನಿ ಷಟ್ಟದಿಯನ್ನು ಆರಿಸಿಕೊಂಡ ಹಿನ್ನೆಲೆಯಲ್ಲೂ ಇದನ್ನೇ ಕಾಣಬಹುದಾಗಿದೆ. ಯಥಾಪ್ರಕಾರ ಇಲ್ಲಿಯೂ ಪುರಾಣದ ಕಥೆಯೇ ಇದ್ದರೂ ಸಹ ಅದು ಭಾರತೀಯ ಸಂಸ್ಕೃತಿಯ ತಳಹದಿಯ ಮೇಲೆ ನಿಂತಿದೆ. ಪರಿಶುದ್ದ ಪ್ರೇಮ ಮತ್ತು ಪಾತಿವ್ರತ್ಯ ಧರ್ಮಗಳು ಅನನ್ಯ ರೀತಿಯಲ್ಲಿ ಪ್ರತಿಬಿಂಬಿತವಾಗಿವೆ. ಮುಖ್ಯವಾಗಿ ಮಾನವತ್ವ ದೇವತ್ವವನ್ನು ಮೀರಿ ನಿಲ್ಲುವ ಘಟನೆ ಕೃತಿಯ ಮಹತ್ವದ ಅಂಶವಾಗುತ್ತದೆ. ಈಗಾಗಲೆ ನಳನಿಗೆ ಒಲಿದಿದ್ದ ದಮಯಂತಿಯನ್ನು ತಮಗೆ ಒಲಿಯುವಂತೆ ಮಾಡೆಂದು ನಳನನ್ನು ಕೇಳುವಾಗ ದೇವತೆಗಳು ತಮ್ಮ ದೇವತ್ವದ ಉನ್ನತಿಕೆಯನ್ನು ಕಳೆದುಕೊಂಡು ಅಲ್ಪರಾಗುತ್ತಾರೆ. ನಳ ತನ್ನ ಉದಾರ ಗುಣದಿಂದ ಮಾನವರ ಘನತೆಯನ್ನು ಉನ್ನತಿಗೆ ಕೊಂಡೊಯ್ಯುತ್ತಾನೆ. ದಮಯಂತಿಯಾದರೋ ದೇವತೆಗಳೇ ಒಲಿದುಬಂದರೂ ಸಹ ಅವರಿಗೆ ಆಸೆ ಪಡದೆ ತಾನು ಮೊದಲು ಪ್ರೀತಿಸಿದ ನಳನನ್ನೇ ಮದುವೆಯಾಗಲು ನಿರ್ಧರಿಸುತ್ತಾಳೆ. ಇಲ್ಲಿ ದಮಯಂತಿಗೆ ನಳನ ಬಗ್ಗೆ ಇದ್ದ ಪ್ರೇಮ ಯಾವ ಕಾರಣಕ್ಕೂ ಯಾವ ಸಂದರ್ಭದಲ್ಲಿಯೂ ಕಲುಷಿತಗೊಳ್ಳದೆ ಚ್ಯುತವಾಗದೆ ಉಳಿಯುತ್ತದೆ, ಈ ಪ್ರೇಮ ಮತ್ತು ಪಾತಿವ್ರತ್ಯದ ಪ್ರಕಾಶಕ್ಕೆ ವಿಧಿ ಒಂದು ಸಮರ್ಥ ಮಾಧ್ಯಮವಾಗಿ ಬರುತ್ತದೆ. ಕಷ್ಟ ಬಂದಾಗಲೂ ಸಹ ಸತ್ಯವಂತರು ಪಥಭ್ರಾಂತರಾಗುವುದಿಲ್ಲ ಎಂಬುದನ್ನು ಇದು ನಿರೂಪಿಸುತ್ತದೆ. ಅಧ್ಯಾತ್ಮದ ಪ್ರಬಲ ಧ್ವನಿಗಳನ್ನೊಳಗೊಂಡಿರುವ ಹರಿಭಕ್ತಿಸಾರದ ಹೆಸರೇ ಸೂಚಿಸುವಂತೆ ಹರಿಯ ಲೀಲಾಶಕ್ತಿಗಳನ್ನು ಸ್ತುತಿಸುವ ಕೀರ್ತನೆಗಳಾಗಿದ್ದರೂ ಸಹ ರೂಪಾಂಶದಲ್ಲಿ ಶತಕಗಳಾಗಿವೆ. ಹರಿ ಸರ್ವೋತ್ತಮತ್ವವನ್ನು ಪೌರಾಣಿಕ ಚಿತ್ರಗಳ ಮೂಲಕ ಕಡೆದಿದ್ದಾರೆ. ಹರಿಹರ ಬ್ರಹ್ಮಾದಿಗಳು ಒಂದೇ ಎಂಬ ಭಾಗವತ ಪ್ರಜ್ಞೆ ಇಲ್ಲಿಯೂ ವ್ಯಕ್ತವಾಗಿದೆ. ಸಾಮಾನ್ಯವಾಗಿ ಶತಕಗಳು ನೀತಿ ಮತ್ತು ತತ್ತ್ವಗಳ ಪ್ರತಿಪಾದನೆಯಿಂದ ಕೂಡಿದ ವೈಯಕ್ತಿಕ ಭಾವನೆಗಳಾಗಿವೆ, ಹರಿಭಕ್ತಿ ವಿವಿಧ ಮಜಲುಗಳಲ್ಲಿ ರೂಪತಾಳಿವೆ. ಸತ್ಯ ಧರ್ಮ ಮುಂತಾದ ಜೀವನಮೌಲ್ಯಗಳು ಅದರ ಹಿನ್ನೆಲೆಯಲ್ಲಿವೆ. ಜೀವ ಮತ್ತು ದೇಹಗಳು ಅನಿಶ್ಚಿತವಾದುವು : ಆದರೆ ಭಗವಂತನ ಇರುವಿಕೆಯಿಂದಾಗಿ ಅವು ಸುಂದರವಾಗಿವೆ ಎನ್ನುತ್ತಾರೆ. ಬಾಹ್ಯಶುದ್ಧಿಗಿಂತ ಅಂತರಂಗದ ಶುದ್ದಿಗೆ ಮಹತ್ವಕೊಡುವ ಕನಕದಾಸರು, ಎಂಜಲೆಂಜಲು ಎಂಬರಾ ನುಡಿ ಎಂಜಲಲ್ಲವೆ ವಾರಿ ಜಲಚರ ಎಂಜಲಲ್ಲವೆ ಹಾಲುಕರುವಿನ ಎಂಜಲೆನ್ನಿಸದೆ ಎಂಜಲೆಲ್ಲಿಯದು || ಎಂದು ಪ್ರಶ್ನಿಸುತ್ತಾರೆ. ಹೀಗೆ ಮೇಲುನೋಟಕ್ಕೆ ಹರಿಸ್ತುತಿಗಳಂತಿರುವ