ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೭೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ದೃಷ್ಟಿಯಲ್ಲಿ ಯುದ್ಧ ೮೭೧ ಮನ್ಮಥ ಶಂಬರಾಸುರನ ಕಡೆಯವರ “ಪುಸ್ತಕಗಳ ತಿರಿಕಲ್ಲಾಡಿ ಬೊಬ್ಬಿರಿದಾಗ, ಅವನನ್ನು ಎದುರುತಾಕಿದವರು “ತಿರುಗದ ಹಾದಿಯ ಮೆಟ್ಟಿದಾಗ ಶಂಬರಾಸುರನೇ ಯುದ್ಧಕ್ಕೆ ಬಂದು, ನಿನ್ನ ಹೂ ಬಾಣ ಹೆಂಗಸರ ಮೊಲೆಗೆ ನಾಟಬಹುದೇ ವಿನಾ ನನ್ನ ಕಲ್ಲೆದೆಗೆ ನಾಟಲಾರವು ಎಂದು ಹೀಯಾಳಿಸಿದಾಗ ಮನ್ಮಥನ ಮಾರುತ್ತರ : ಪೇತೆ ನೀನೇನು ದೊಡ್ಡಿತು ನನ್ನ ಸಕಲ ಮು ಯಾತು ಕೊಂಬೊಡೆ ರುದ್ರಗರಿದು ಮಾತುಗಾಣಿಕೆ ಬೇಡ ಹಿಡಿಯೆಂದು ಬಾಳದೆ ತೊತೇಲೆಚ್ಚು ಬೊಬ್ಬಿರಿದ || ಇಲ್ಲಿ ಬಳಕೆಯಾಗಿರುವ 'ಪೇತೆ' ಎಂಬ ಸಂಬೋಧನೆ ಗಮನಿಸಿ, ನಿಶ್ಯಕ್ತ, ಒಣಕಲ ಎಂಬ ಅರ್ಥ ಕೊಡುವ ಈ ಶಬ್ದವನ್ನು ನೇರವಾಗಿ ಜನಪದರ ನಾಲಗೆಯ ಮೇಲಿಂದ ಎತ್ತಿ ತಂದು ಅದರ ಮೂಲಕವೇ ಎದುರಾಳಿಗೆ 'ಲಾತಿ ಕೊಡಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಶಂಬರಾಸುರ : ಕಳೆಗೊರಲನ ಕಣ್ಣ ದಳ್ಳುರಿಯಲಿ ಬೆಂದ ಕೊನೆಗೊಳ್ಳಿ ನಿನಗೇಕೆ ಪಂತ ನೆಲಕೂರ್ಗಣೆಯಿಂದ ಕಾಯ್ದುಕೊಳ್ಳೆನುತಾರ್ದು ಪೆಯನೊಳಸಲೊಡೆಯಲಿಕ್ಕಿದನು || ಮನ್ಮಥನನ್ನು ಮುಕ್ಕಣ್ಣನ ಕಿಡಿಗಣ್ಣಲ್ಲಿ ಬೆಂದ "ಕೊಆಗೊಳ್ಳಿ' ಎಂದು ಸಂಬೋಧಿಸಿರುವ ರೀತಿ ಚುರುಕು ಮುಟ್ಟಿಸುವಂಥದು. ಕರಿಕಾದ ಕೊಳ್ಳಿ, ಕುರಿತುಕೊಂಡ ಕೊಳ್ಳಿ ಎಂದರ್ಥವಾಗುವ ಕೊರೆಗೊಳ್ಳಿ ಶಬ್ದ ಪ್ರಯೋಗ ಕನಕದಾಸರ ಸ್ವಂತಿಕೆ ಹಾಗೂ ಧೀಮಂತಿಕೆಯ ಪ್ರತೀಕಸಜೀವ ಸಚಿತ್ರ ವರ್ಣನಾಶಕ್ತಿಯ ದ್ಯೋತಕ. ಇದುವರೆಗೆ ನಾಲಗೆ ಮತ್ತು ಲೋಹಗಳ ಜೋಡಿ ಶಸ್ತ್ರಗಳ ಮೂಲಕ ಮಾಡಿರುವ ಯುದ್ಧವರ್ಣನೆಯನ್ನು ನೋಡಿದೆವು. ಶಸ್ತ್ರರಹಿತ ಮಲ್ಲಯುದ್ಧವನ್ನು ಈಗ ಪರಿಶೀಲಿಸೋಣ. 'ಬತ್ತೀಸ ಖಡ್ಗಗಳ' ಯುದ್ಧದಲ್ಲಿ ದಣಿದ ಮೇಲೆ ಶಂಬರಾಸುರ ಮಾಯಾ ಯುದ್ದಕ್ಕೆ ತೊಡಗುತ್ತಾನೆ. ಕೋಣನ ರೂಪ ತಾಳಿ ಮನ್ಮಥನತ್ತ ನುಗ್ಗುತ್ತಾನೆ. ಆಗ ಮನ್ಮಥನು ಅದನ್ನು ತುಂಡರಿಸುವ ವರ್ಣನೆ ಹೀಗಿದೆ : ವಾರಿಜದಳಲೋಚನೆ ನೀ ಕೇಳು ರಣಮಹಾ ಮಾರಿಯ ಮುಂದೆ ಬೊಬ್ಬಿರಿದು ತೋರಿದು ಕೋಣನ ಪೆರ್ದತೆ ಕಡಿವಂತೆ ಹ ರಾರಿ ಖಂಡಿಸಿದ ಖಂಡೆಯದಿ || ಇಲ್ಲಿ 'ಪರ್ದತೆ ಕಡಿವಂತೆ' ಎಂಬುದಕ್ಕೆ ಸರಿಯಾದ ಪಾಠ 'ಸೆರ್ಬುಲಿ ಕೊಡುವಂತೆ” ಎಂದು. “ರಣಮಹಾಮಾರಿಯ ಮುಂದೆ ಕೊಬ್ಬಿದ ಕೋಣನನ್ನು ಪೆರ್ಬಲಿ ಕೊಡುವಂತೆ ಮನ್ಮಥ ಅದನ್ನು ಕಡಿದ' ಎಂದು ಕನಕದಾಸರು, ಮಾರಿಹಬ್ಬದಲ್ಲಿ ಕೋಣನನ್ನು ಬಲಿ ಕೊಡುವ ಜನಪದ ಆಚರಣೆಯ ದೃಶ್ಯ ರೂಪಕದಲ್ಲಿ ತುಂಬ ಸೊಗಸಾಗಿ ಸೆರೆಹಿಡಿದಿದ್ದಾರೆ. ಕೊನೆಗೆ ಶಂಬರಾಸುರ ಆನೆ ರೂಪವನ್ನು ತಾಳಿದಾಗ ಮನ್ಮಥ ನರಸಿಂಹನಾಗಿ ಅದನ್ನು ಸೀಳುತ್ತಾನೆ. ಕೊನೆಗೆ ಶಂಬರಾಸುರ “ಮಲ್ಲಯುದ್ಧ” ಕ್ಕೆ ನಿಲ್ಲುತ್ತಾನೆ : ದರ್ಪಕ ದೈತ್ಯವಲ್ಲಭನೊಳಗಿದಿರಾಂತ | ನಿಪ್ಪಸರದೆ ತೋಳ ಮೊದಲ ಚಪಳಗೊಳಿಸಿ ದಂಡೆಯ ಹೂಡಿ ನಿಂದಿರ್ದ ವೊತ್ತವನೇನ ಬಣ್ಣಿಪೆನು || “ಭುಜ ತಟ್ಟಿ, ದಂಡೆ ಹೊಡೆದು' ಮಲ್ಲಯುದ್ದಕ್ಕೆ ಅಣಿಯಾಗುವ ಮನ್ಮಥನ ನಿಲುವು ಆ ಕಾಲದ ಕುಸ್ತಿಯನ್ನು ಕಣ್ಮುಂದೆ ತರುತ್ತದೆ. ಹೊಗುವರು ಹೊರಡುವರೆಲ್ಲ ಸಿಕ್ಕಿದರಲ್ಲಿ ಬಿಗಿವರು ಬಿನ್ನಣಿಸುವರು ತೆಗೆವರು ಕೆಳಗು ಮೇಲಾಗುವರೊಡನೊಡ ನೆಗೆವರು ನಿಂದು ಕಾದುವರು || ಕುಸ್ತಿಯ ಪಟ್ಟುಗಳನ್ನು, ವಿವಿಧ ವರಸೆಗಳನ್ನು ಮೇಲಿನ ಮಲ್ಲಯುದ್ದ ವರ್ಣನೆಯಲ್ಲಿ ಕಾಣಬಹುದು. ಮೇಲಾಗಿ ಹೊಗುವರು. ಹೋರಾಡುವರು, ಬಿಗಿವರು, ಬಿನ್ನಣಿಸುವರು, ತೆಗೆವರು, ಕೆಳಗು ಮೇಲಾಗುವರು, ನೆಗೆವರು ಮೊದಲಾದ ನಿರಾಭರಣ ಕ್ರಿಯಾಪದಗಳಿಂದಲೇ 'ಕುಸ್ತಿಯ ಕ್ರಿಯೆ' ಕಣ್ಮುಂದೆ ನಿಲ್ಲುವಂತೆ ಮಾಡಿದ್ದಾರೆ. ಕನಕದಾಸರಿಗೆ 'ತಗರುಪಟ್ಟು' ವಂಶಪಾರಂಪಯ್ಯವಾಗಿ ಗೊತ್ತು. ಡಾ. ಕೋ.ತಿ. ನ ಅವರಿಗೆ ಅದರ ಪಟ್ಟಾಗಲಿ ಪೆಟ್ಟಾಗಲಿ ತಿಳಿಯದ್ದರಿಂದ ರೂಪಕದ ಸೊಗಸನ್ನೇ 'ಚಟ್' ಆಗಿಸಿದ್ದಾರೆ. ನೋಡಿ : ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿತ ಮೋಹನ ತರಂಗಿಣಿ ಗದ್ಯಾನುವಾದ ಕೃತಿ.