ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೮೭೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ದೃಷ್ಟಿಯಲ್ಲಿ ಯುದ್ಧ ೮೭೩ ಕೃಷ್ಣ ಬಾಣಾಸುರನ ಮೇಲೆ ಯುದ್ಧಕ್ಕೆ ಹೊರಟಾಗ ಚತುರ್ಬಲದ ಜೊತೆಗೆ ಇನ್ನಿತರ ಪರಿವಾರದವರ ಮಾಹಿತಿಯನ್ನು ಕನಕದಾಸರು ಕೊಟ್ಟಿದ್ದಾರೆ. ಅದು ವಿಜಯನಗರದ ಅರಸರು ಯುದ್ಧಕ್ಕೆ ಹೊರಟಾಗ ಎಷ್ಟೆಲ್ಲ ಸಿದ್ಧತೆಗಳೊಡನೆ ಹೋಗುತ್ತಿದ್ದರು ಎಂಬುದನ್ನು ಸೂಚಿಸುತ್ತದೆ. ಮಾಡಿರುವ ಮೋಡಿ ಮೆಲುಕು ಹಾಕುವಂಥದು. ಮಲ್ಲಯುದ್ಧವಲ್ಲದೆ “ಪಶುಪಕ್ಷಿಗಳ ಯುದ್ಧ"ವನ್ನು ಕನಕದಾಸರು ಮೋಹನ ತರಂಗಿಣಿಯಲ್ಲಿ ಚಿತ್ರಿಸಿದ್ದಾರೆ. ಶಿವಭಕ್ತನಾದ ಬಾಣಾಸುರನ ಬೆನ್ನಿಗೆ ಹರನಿದ್ದಾನೆ. ಆದ್ದರಿಂದ ಕೃಷ್ಣ ಬಾಣಾಸುರರ ಯುದ್ಧವಾದರೂ ಪರೋಕ್ಷವಾಗಿ ಹರಿಹರರ ಯುದ್ದವೂ ಆಗುತ್ತದೆ. ಶಿವನ ಪಕ್ಷದ ಷಣ್ಮುಖನ ವಾಹನವಾದ ನವಿಲು ಕೃಷ್ಣನ ಪಕ್ಷದ ಪ್ರದ್ಯುಮ್ನನ ಧ್ವಜದ ಮೀನಿಗೆ ಎಗರಿದಾಗ ಕೃಷ್ಣ ಗರುಡನತ್ತ ದೃಷ್ಟಿ ಹರಿಸುತ್ತಾನೆ. ಸರಿ ಗರುಡ ನವಿಲ ಮೇಲೆ ಎರಗುತ್ತಾನೆ : ತಡೆದರೆ ತಡೆದೊದ್ದರೊದ್ದೆ ಎಕ್ಕೆಯೊಳಿಟ್ಟು ಹೊಡೆದರೆ ಹೊಡೆದು ಡೊಕ್ಕರಿಸಿ ಕೆಡೆದರೆ ಕೆಡೆದುಗುರ್ಗಳೊಳೊತ್ತಿ ಭೀಕರ ವಡಿದು ಹೊಯ್ದಾಡಿದವೆರಡು || ಕೊನೆಗೆ ಗರುಡ ನವಿಲನ್ನು ನೆಲಕ್ಕಿಕ್ಕಿ ತಿಕ್ಕಿದಾಗ, ನಂದೀಶ ಯುದ್ಧಕ್ಕೆ ಬರುತ್ತಾನೆ. ಕೊನೆಗೆ ನಂದೀಶ ಸುಸ್ತಾದುದನ್ನು ಕಂಡು ಶಿವನೇ ಯುದ್ಧ ಸಾಕುಮಾಡೆಂದು ಸೂಚಿಸಿದಾಗ, ಕೋಪಗೊಂಡ ಗಣೇಶ ಗರುಡನ ಮೇಲೆ ತಿರುಗಿಬೀಳುತ್ತಾನೆ. ಗಣೇಶನ ವಾಹನವಾದ ಇಲಿ ಗರುಡನನ್ನು ಕಂಡು, ಅದು ತನ್ನನ್ನು ತಿಂದು ಬಿಡುತ್ತದೆಂದು ಗಣೇಶನನ್ನು ಹೊತ್ತುಕೊಂಡು ಓಡಿತಂತೆ ! ಯುದ್ದವರ್ಣನೆಯಲ್ಲೂ ಹಾಸ್ಯವನ್ನು ಚಿಮ್ಮಿಸುವ ಯತ್ನ ಇಲ್ಲಿದೆ. ಹೊಂಗಳಸದ ಸತ್ತಿಗೆ ಡಾಳಿಪ ಚಮ ರಂಗಳ ಸಂಚಿ ಸಗ್ಗಳೆಯ ಮಂಗಳ ಕುಂಚ ಕಾಳಾಂಜಿ ಬಿಸಣಿಗೆಯ ಪೆಂಗಳೇಟೆದರಿಕ್ಕೆಲದಿ || ಅಗಣಿತ ವರ್ಣಕೇತನದಲ್ಲಿ ಬರೆದಿರ್ದ ಖಗರಾಜ ಶಂಖಚಕ್ರಗಳು ಸೊಗಯಿಪ ಗಜಸಿಂಹ ಪಣಿಮೀನ ಪಠಗಳ ಗಗನವ ತುಡುಕಲೆತ್ತಿದರು || ಮಂಡಿಸಿದರು ಮಂತ್ರಿಗಳು ಸೇನಭಾಗರು ಪಂಡಿತ ಪಂಚಾಂಗಿಗಳು ದಂಡಿಗೆ ಪಲ್ಲಕ್ಕಿ ಬೊಕ್ಕಸ ಭಂಡಾರ ಖಂಡಿತವಾಗಿ ತುಂಬಿದರು || ರಾಜರು ರಕ್ಕಸಮಾಂತರು ಲಾಳಿ ಬಿ ಲೌಜರು ಪೆಟಲಂಬಿನವರು ತೇಜೋಮಯ ಬಾಣಗಾರರೇಟೆತು ಖಗ ರಾಜನಜಂಕೆ ಪಂಪ ರನ್ನರು ತಮ್ಮ ಆಶ್ರಿತ ರಾಜನೊಡನೆ ಕಥಾನಾಯಕನನ್ನು ಸಮೀಕರಿಸಿ ಕಾವ್ಯ ಬರೆದಂತೆ ಕನಕದಾಸರೂ ಮೋಹನ ತರಂಗಿಣಿಯಲ್ಲಿ ವಿಜಯನಗರ ಸಾಮ್ರಾಜ್ಯದ ಅರಸನಾದ ಕೃಷ್ಣದೇವರಾಯನೊಡನೆ ಕಥಾ ನಾಯಕನಾದ ಕೃಷ್ಣನನ್ನು ಸಮೀಕರಿಸಿ ಕಾವ್ಯ ರಚಿಸಿರುವುದರಿಂದ ಪ್ರತಿಯೊಂದು ವರ್ಣನೆಯಲ್ಲೂ ವಿಜಯನಗರ ಸಾಮ್ರಾಜ್ಯದ ರೀತಿನೀತಿಗಳು ವೈಭವವೀರಗಳು ಸಹಜವಾಗಿಯೇ ಸ್ಥಾನಪಡೆದಿವೆ. ಬಾಣಾಸುರನ ಮೇಲೆ ಕೃಷ್ಣ ದಂಡೆತ್ತಿ ಹೊರಟ ಹಾಗೂ ಬೀಡುಬಿಟ್ಟ ವರ್ಣನೆಯಲ್ಲಿ ವಿಜಯನಗರದ ಅರಸನ ದಂಡಯಾತ್ರೆ ಹಾಗೂ ಶಿಬಿರಸ್ಥಾಪನೆಯ ಜೀವಂತ ವಿವರ ಅಡಗಿರುವುದನ್ನು ಕಾಣಬಹುದು. ಏಕೆಂದರೆ ಕೃಷ್ಣನ ಪಾತ್ರವನ್ನು ಹಲವಾರು ಕಡೆ 'ಕೃಷ್ಣರಾಯ' ಕೃಷ್ಣದೇವರಾಯ' ಎಂದು ಹೆಸರಿಸುವುದನ್ನು ನಾವಿಲ್ಲಿ ಮರೆಯಬಾರದು. ಕೊಟ್ಟಿಗೆ ಕಾಮಾಟ ಕವಲುಕ ಬೆಳ್ಳೆಲೆಗರು ಜಟ್ಟಿಗ ಗೀತಪಾಠರು ಸೆಟ್ಟಿಗ ಬಲಿ ಚನ್ನವರದರು ಘಟ್ಟಿತ ಕಟ್ಟಿಗೆಕಾರರೇಟೆದರು | %