ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕ ಸಾಹಿತ್ಯ ದರ್ಶನ-೧ ಕನಕದಾಸರ ದೃಷ್ಟಿಯಲ್ಲಿ ಯುದ್ಧ ೮೭೯ ಅರಿಗಳ ಕೆಯ್ಯ ಕೂರಸಿಧಾರೆ ಮೊನೆಗಾಯ ಶರೀರದೊಳಗೆ ಸಂಧಿಸಲು ಪರಿಹರಿಸುವ ಬಾಣ ಭಯವೃತ್ತಿಯ ಭಾ ಪುರಿಯಲ್ಲಿ ಕಟ್ಟಿದಳವಳು || ಕೊಟ್ಟಳು ಕೋದಂಡ ಬಾಣವ ಕಪ್ಪಿನ ಬೊಟ್ಟನಿಕ್ಕಿದಳು ಭಾಳದಲಿ ನೆಟ್ಟನೆ ರಣವ ಜಯಿಸು ಎಂದು ಸೇನೆಯ ನಿಟ್ಟಳು ಸಿರಿಮುಡಿಯಲ್ಲಿ | ಅವಳಿಷ್ಟು ಮಾಡಿ ಕುಸ್ತರಿಸಿ ಕಡುಮೆಚ್ಚಿ ಧವಳ ಸರೋಜಾಯತಾಕ್ಷಿ. ಪವಳದಧರಾಮೃತದುಣಿಸು ತಂಬುಲದುಬ್ಬು ಗವಳವನಿತ್ತಳಾಳನಿಗೆ || ಚಿತ್ರಲೇಖೆ ಅನಿರುದ್ಧನ ಭಾಪುರಿಯಲ್ಲಿ ಕೂರಸಿಧಾರೆ ಮೊನೆಗಾಯದ ನಂಜುನಿವಾರಕ `ತಾಯಿತ' ಕಟ್ಟುವುದು, ಹಣೆಗೆ ಕಪ್ಪಿನ ಬೊಟ್ಟನಿಕ್ಕುವುದು, ತಲೆಯ ಮೇಲೆ ಸೇಸೆ ಇಕ್ಕುವುದನ್ನು ಮಾಡಿದರೆ, ಉಷೆ ಹಿಂದೆ ಬೀಳದೆ ಮುತ್ತಿಟ್ಟು ತಾಂಬೂಲದ ಉಣಿಸನ್ನು ನೀಡುತ್ತಾಳೆ. ವಿಜಯನಗರ ಕಾಲದ ಸ್ತ್ರೀಯರ ವಿಶಿಷ್ಟ ವೀರ ಗುಣವನ್ನು ಇದು ಸೂಚಿಸುತ್ತದೆ. ಅನಿರುದ್ಧನ ಉಪಟಳಕ್ಕೆ ತತ್ತರಿಸಿದ ಸೇನೆಗೆ ಅಭಯವನ್ನು ನೀಡಿ ಎದುರಾದ ಬಾಣಾಸುರನಿಗೆ ಅನಿರುದ್ಧ ಆಡುವ ಮಾತುಗಳು ಯುದ್ಧರಂಗದಲ್ಲಿಯೂ ಮಾನವೀಯ ನಡೆನುಡಿ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿವೆ : ವಿನಯದಿ ಮಾತಾಡು ಖಳರಾಯ ನಿನ್ನಯ ತನಯಳಿಗೋಸುಗ ಬಂದ ಮನೆಯಳಿಯನ ಕೂಡೆ ಮಚ್ಚರವೇಕೆಂದು ನನೆಗೋಲನಾತ್ಕಜ ನುಡಿದ || ಬಳುಕಿಂಗೆ ಹಿರಿಯರ ಹಸ್ತ ಮುಂಚದ ಮೇಲೆ ಬಳಿಕೆನ್ನ ಕೆಯ್ಯ ನೋಡೆಂದ | ಯುದ್ಧದಲ್ಲಿ ಗೆದ್ದು ಅಳಿಯತನವನ್ನು ಸಂಸ್ಥಾಪಿಸು ಎಂದು ಬಾಣಾಸುರ ಸವಾಲು ಹಾಕಿದಾಗ ಅನಿರುದ್ದ ಹಿರಿಯರು ಮೊದಲು ಕೈ ಮಾಡಿದರೆ ಆನಂತರ ನನ್ನ ಕೈಚಳಕ ತೋರಿಸುತ್ತೇನೆ ಎಂಬ ಮಾತಿನಲ್ಲಿ ಕಿರಿಯರು ಹಿರಿಯರಿಗೆ ತೋರಿಸುವ ಗೌರವ ಭಾವನೆ ಎದ್ದು ಕಾಣುತ್ತದೆ. ಯುದ್ಧರಂಗದಲ್ಲೂ ಎದ್ದು ಕಾಣುವ ಇಂಥ ಮಾನವೀಯ ನಡೆನುಡಿಗಳು ಮನಸ್ಸನ್ನು ಸೂರೆಗೊಳ್ಳುತ್ತವೆ. ಈ ಕಡೆ ಓಪ ಆ ಕಡೆ ಅಪ್ಪ ಯುದ್ದಕ್ಕೆ ನಿಂತಿರುವುದನ್ನು ಕಂಡು ಉಷೆ “ಇರಿದುಕೊಂಡರೆ ಹೊಟ್ಟೆ ತಿವಿದುಕೊಂಡರೆ ಕಣ್ಣು” ಎಂದು ಮರುಗುವಷ್ಟರಲ್ಲಿ ಅನಿರುದ್ಧ ಬಿಟ್ಟ ಬಾಣ ಬಾಣಾಸುರನ ತೋಳಲ್ಲಿ ಎಜ್ಜ ಕೊರೆಯಿತು. ಆಗ ಬಾಣಾಸುರ ಅನಿರುದ್ಧನ ಶೌಲ್ಯವನ್ನು ಕಂಡು ಮೆಚ್ಚುವುದು ಅವನ ಮಾನವೀಯ ಗುಣವನ್ನು ಸೂಚಿಸುತ್ತದೆ : ಮುತ್ತುಗ ನಿಡುಗೊನೆ ನಿಕರ ಹೂವಾದಂತೆ ನೆತ್ತರ ಬಣ್ಣ ತೋರಿಸಲು ಚಿತ್ತಜನಾತ್ಮಸಂಭವನ ಕೀರ್ತಿಸಿದಬ ಲೋತ್ತಮ ಕಡು ಮೆಚ್ಚಿ ನಗುತೆ || ಈ ಮಾನವೀಯ ಗುಣ ಮುಂದೆ ಇನ್ನೂ ಮಡುಗಟ್ಟುತ್ತದೆ. ಬಾಣಾಸುರನ ಮಂತ್ರಾಸದಿಂದ ಅನಿರುದ್ದ “ಮಥನಕ್ಕೆ ಮಂಡಿಯ ಹೂಡಿದಂದದಿ ಮೂರ್ಛಿತ” ನಾಗಲು ಕೂಡಲೇ ಅವನನ್ನು ಸೆರೆ ಹಿಡಿದಾಗ ಬಾಣಾಸುರನ ಮಾನವೀಯ ವರ್ಣನೆಯನ್ನು ನೋಡಿ ಕೊಂದಡೆ ಮಗಳಿಂಗೆ ವೈಧವ್ಯವಹುದೆಂದು ಕಂದರ್ಪನಾತ್ಮಸಂಭವನ ಸುಂದರಮಯ ದಿವ್ಯದೇಹವ ಕೂರ್ಗೊಲಿಂದೆ ನೊಂದಿರೆ ಮೆಡವಿದನು. ಅಳಿಯ ನೀನೆಂತಾದೆ ಮಗಳನಾರಿತ್ತರು ಶಿಳೀಮುಖದಿಂದ ಗೆಲ್ಲೆನಲು ಉಪ್ಪಗೆಯೊಳಿರ್ದು ನೋಡಿದ ಕುವರಿ ತ ಮ್ಮಪ್ಪನ ಕೈಯೊಳಗಾಗಿ ದಪ್ಪಗನಣುಗಳು ಸಿಕ್ಕಿದನಾಯೆಂದು ತೊಪ್ಪನೆ ಬಿದ್ದಳುರ್ವಿಯಲಿ |