ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೦೨ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೦೩ ಮರೆತಿದ್ದಾರೆ ; ಕವಿಯಾಗಿ ಮೆರೆದಿದ್ದಾರೆ. 'ಮೋಹನ ತರಂಗಿಣಿ'ಯಲ್ಲಿ ಕನಕದಾಸರ ಕವಿಪ್ರಜ್ಞೆ ಎಲ್ಲಿಯವರೆಗೆ ವಿಸ್ತರಿಸಿದೆಯೆಂದರೆ, ಮಹಾಕಾವ್ಯದ ಹದಿನೆಂಟು ವರ್ಣನೆಗಳ ಗಂಟಿನಲ್ಲಿ ಸಿಕ್ಕಿಹಾಕಿಕೊಳ್ಳುವಷ್ಟು ಪ್ರಬಲವಾಗಿ ಅದು ಎಚ್ಚರಗೊಂಡಿದೆ. ಹಾಗಾಗಿ ಮೋಹನ ತರಂಗಿಣಿ ಪೌರಾಣಿಕ ವಸ್ತುವನ್ನೊಳಗೊಂಡ ಶೃಂಗಾರ ಕಾವ್ಯವಾಗಿ ಪ್ರಾಚೀನ ಕಾವ್ಯ ಪರಂಪರೆಯಲ್ಲಿ ನಡೆದು ಬಂದರೂ ಇದರ ವೈಶಿಷ್ಟ್ಯ ಉಳಿದಿರುವುದು, ಅಲ್ಲಿಯೂ ಸಮಕಾಲೀನ ಸಮಾಜದ ಸಹಜತೆಯನ್ನು ಸೆರೆಹಿಡಿದಿಡುವಲ್ಲಿ, ವಿಜಯನಗರ ಕಾಲದ ವೈಭವದ ಚಿತ್ರ ಕವಿ ಕನಕದಾಸರಿಂದ ಅದ್ಭುತವಾಗಿ ಮೂಡಿಬಂದಿದೆ. ಕವಿಯ ಸಮಕಾಲೀನ ಪ್ರಜ್ಞೆಗೆ ಅದು ಸಾಕ್ಷಿಯಂತಿದೆ. ವಿಷಯವನ್ನು ಒಟ್ಟುಗೂಡಿಸುವಲ್ಲಿ, ವಿಚಾರವನ್ನು ಪ್ರತಿಪಾದಿಸುವಲ್ಲಿ ಕನಕದಾಸರು ತೋರುವ ಜಾಣ್ಯ-ಪ್ರತಿಭೆ ವಿಶಿಷ್ಟವಾದುದು. 'ಮೋಹನ ತರಂಗಿಣಿ'ಯಲ್ಲಿ ಒಬ್ಬ ನಾಯಕ-ನಾಯಕಿಯನ್ನು ನಿರ್ದಿಷ್ಟವಾಗಿ ಗುರುತಿಸಲಾಗದೆ ಹೋದರೂ, ನವರಸಭರಿತವಾಗಿ, ಅಷ್ಟಾದಶವರ್ಣನೆಗಳಿಂದ ಪ್ರೇರಿತವಾಗಿಸಿ ಮಹಾಕಾವ್ಯದ ಚೌಕಟ್ಟಿಗೆ ತರಲೆಳಸಿದ ಕವಿ ಕನಕದಾಸರ ಪ್ರಯತ್ನ ಪೂರ್ಣ ಯಶಸ್ಸನ್ನು ಹೊಂದದೇ ಹೋದರೂ, ಅದು ರಸಭರಿತ ಶೃಂಗಾರಕಾವ್ಯವಾಗಿ ಕವಿಯೇ ಹೇಳಿಕೊಂಡಿರುವಂತೆ 'ಜೇನು ತುಪ್ಪದ ತೊರೆ' ಯಾಗಿ ಹೃದಯವನ್ನು ಗೆಲ್ಲಬಲ್ಲ ಕಾವ್ಯ. “ಮೋಹನ ತರಂಗಿಣಿ'ಯಲ್ಲಿ ಕನಕದಾಸರ ಕವಿಪ್ರಜ್ಞೆ ಹೆಚ್ಚು ಎಚ್ಚರಗೊಂಡು ಕೆಲಸ ಮಾಡಿದಂತೆ ಕಂಡು ಬಂದರೆ ; 'ನಳಚರಿತ್ರೆಯಲ್ಲಿ ಅದು ಗುಪ್ತವಾಗಿ ಪುಷ್ಪದೊಳಗಿನ ಸುಗಂಧದಂತೆ ಕಂಪಾಗಿ-ತಂಪಾಗಿ ಹರಡಿದೆ. ಎರಡು ಕಾವ್ಯಕೃತಿಗಳ ವಸ್ತುವೂ ಪ್ರೇಮಪ್ರೇರಿತವಾದುದೇ ಆದರೂ, ಮೋಹನ ತರಂಗಿಣಿಯ ಪ್ರೇಮ-ಶೃಂಗಾರ 'ನಳಚರಿತ್ರೆಯಲ್ಲಿ ಸಂಯಮವನ್ನು ಸಾಧಿಸಿದೆ. ಅಲ್ಲಿ ಭೋಗ ಲಾಲಸೆಯಿಂದ ಕೂಡಿದ ಪ್ರೇಮ, ಇಲ್ಲಿ ತ್ಯಾಗಲಾಲಸೆಯಲ್ಲಿ ಪಕ್ವಗೊಂಡಂತೆ ಪರಿಪೂರ್ಣಗೊಂಡಿದೆ. ನಳದಮಯಂತಿಯರ ಪ್ರೇಮ ಅಮರ ಪ್ರೇಮವಾಗಿ ಅರಳಿರುವುದನ್ನು ಈ ಕೃತಿಯ ಉದ್ದಕ್ಕೂ ಕಾಣಬಹುದು. ಎಲ್ಲಿಯೂ ಅಪಸ್ವರ ಕೇಳಿ ಬರದೆ ನೈಜ ಪ್ರೇಮದ ಕಥೆಯಾಗಿ 'ನಳಚರಿತ್ರೆ' ಮನಸೆಳೆಯುತ್ತದೆ. ಅವರ ಪ್ರೀತಿ ಹಲವು ಸಂಕಷ್ಟಗಳ ನಡುವೆ ಸಿಕ್ಕಿದರೂ ಎಲ್ಲಿಯೂ ಸ್ವಲ್ಪವೂ ಕುಂದದೆ, ಕಲುಷಿತವಾಗಿದೆ. ಇನ್ನೂ ಇಮ್ಮಡಿಯಾಗುತ್ತಾ ಹೋಗುವುದು ಇಲ್ಲಿಯ ವೈಶಿಷ್ಟ್ಯವಾಗಿದೆ. ಒಂದೊಂದು ಪರೀಕ್ಷೆಗೆ ಒಳಗಾದಂತೆಲ್ಲಾ ಪುಟವಿಟ್ಟ ಚಿನ್ನದಂತೆ ಪರಿಶುದ್ಧವಾಗುತ್ತಾ ಹೋಗುವುದು ಇಲ್ಲಿಯ ಪ್ರೇಮದ ಅಪೂರ್ವತೆ ಎನ್ನಬಹುದು. ಆ ದೃಷ್ಟಿಯಿಂದ ನೋಡುವಾಗ “ಮೋಹನ ತರಂಗಿಣಿ' ಶೃಂಗಾರಮೂಲವಾದ ಪ್ರೇಮಕಥೆಯಾದರೆ, 'ನಳಚರಿತ್ರೆ' ಅಮರ ಪ್ರೇಮದ ಸ್ವಾರ್ಥ ರಹಿತವಾದ ಅಪೂರ್ವ ಕಥೆ. ಕನಕದಾಸರು ಈ ಎರಡೂ ಕಾವ್ಯಗಳನ್ನು ನಿರ್ವಹಿಸಿರುವ ರೀತಿ ವಿಶಿಷ್ಟವಾದುದು. ಸಂಸಾರಿಯಾಗಿ, ಯೋಧನಾಗಿ, ಸಂತನಾದ ಕವಿ ಕನಕದಾಸರ ಜೀವನಾನುಭವ ವಿಶಿಷ್ಟ ಅದರಂತೆಯೇ ಅವರ ಕಾವ್ಯ ಕೂಡ. ಆಧ್ಯಾತ್ಮದ ತುತ್ತತುದಿಯನ್ನೇರಿದಂತೆಯೇ ಶೃಂಗಾರದ ರಸಘಳಿಗೆಗಳನ್ನು ಕಾವ್ಯವಾಗಿಸುವ ಅವರ ಪ್ರತಿಭೆ ಉಜ್ವಲವಾದುದು. ತ್ಯಾಗ-ಭೋಗಗಳ ಸಮನ್ವಯ ದೃಷ್ಟಿ ಕವಿ ಕನಕದಾಸರ ಕಾವ್ಯಪ್ರತಿಭೆಯಲ್ಲಿ ವ್ಯಕ್ತವಾಗುತ್ತದೆ. ಇದು ಕನ್ನಡ ಕವಿ ಪರಂಪರೆಯಲ್ಲಿ ಅಪರೂಪವಾದುದು. ಇವೆರಡನ್ನೂ ಒಬ್ಬನೇ ಕವಿ-ಅದೂ ಭಕ್ತ ಹಾಗೂ ಸಂತ ಕವಿ ಅಷ್ಟೇ ಸಮರ್ಥವಾಗಿ ಎರಡನ್ನೂ ನಿರ್ವಹಿಸಿರುವುದು ಕನಕದಾಸರ ಅಪ್ರತಿಮ ಕವಿ ಪ್ರತಿಭೆಗೆ ಸಾಕ್ಷಿಯಾಗಿದೆ. ವ್ಯಕ್ತಿಚಿತ್ರವನ್ನಾಗಲಿ ಪ್ರಕೃತಿ ಚಿತ್ರವನ್ನಾಗಲಿ ಅಥವಾ ಸನ್ನಿವೇಶ ಚಿತ್ರವನ್ನಾಗಲಿ ಹದವರಿತು ಚಿತ್ರಿಸಬಲ್ಲ ಕಲೆಗಾರಿಕೆ ಕನಕದಾಸರಿಗೆ ಸಿದ್ಧಿಸಿದುದಾಗಿದೆ. ಅಂತಹ ಒಂದೆರಡನ್ನಿಲ್ಲಿ ಗಮನಿಸಬಹುದು. ವಿವಾಹ ಮಂಟಪಕ್ಕೆ ಬರುವ ದಮಯಂತಿಯ ರೂಪವನ್ನು ಕವಿ ಹೀಗೆ ಚಿತ್ರಿಸುತ್ತಾನೆ : ಕುಡಿತೆಗಂಗಳ ಸಿರಿಮುಡಿಯ ಬಡ ನಡುವ ಸೆಳವತಿಬೆಡಗಿನಲಿ ಹೊಂ ಗೊಡ ಮೊಲೆಯ ವೈಯ್ಯಾರಡುಡುಗೆಯ ಸಿರಿಯ ಸಡಗರದ ತೊಡರ ಝಣಝಣರವದ ಮೆಲ್ಲಡಿ ಯಿಡುವ ಗಮನದ ಭರದಿ ಕಿರುಬೆಮ ರಿಡುತ ಬಂದಳು ಸಖಿಯರೊಡನೆ ವಿವಾಹ ಮಂಟಪಕೆ || ಹೆಣ್ಣಿನ ಅದ್ಭುತ ಶೃಂಗಾರವನ್ನೂ ರಸಿಕ ಕವಿಯಾಗಿ ವರ್ಣಿಸಬಲ್ಲ ಕನಕದಾಸರು ನಳನ ವಿಕಾರ ರೂಪವನ್ನು ಚಿತ್ರಿಸುವಲ್ಲಿಯೂ ಅಷ್ಟೇ ಅದ್ಭುತವನ್ನು ಮೆರೆದಿದ್ದಾರೆ : ದೊಡ್ಡ ಹೊಟ್ಟೆಯ ಗೂನುಬೆನ್ನಿನ ಅಡ್ಡಮೋರೆಯ ಗಂಟು ಮೂಗಿನ ದೊಡ್ಡ ಕೈಕಾಲುಗಳ ವುದುರಿದ ರೋಮ ಮೀಸೆಗಳ ಜಿಡ್ಡು ದೇಹದ ಗುಜ್ಜುಗೊರಲಿನ