ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೮೬ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೀರ್ತನೆಗಳ ಕಳವು ೯೮೭ ಈಗ ಮುಖ್ಯವಾದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಶೋಧನ ಕಾರ್ಯ ನಡೆಯಬೇಕಾಗಿದೆ. ಪುರಂದರದಾಸರ ಕೀರ್ತನೆಗಳನ್ನು ಕನಕದಾಸರ ಹಾಡನ್ನಾಗಿಸುವ ಅಥವಾ ಅದರ ತದ್ವಿರುದ್ದ ಪ್ರಕ್ರಿಯೆಗಳಲ್ಲಿ ಹೆಚ್ಚು ಸಾಧ್ಯತೆ, ಸಂಭಾವ್ಯತೆ ಇರುವುದು ಯಾವುದು ? ಮೂಲ ಅಥವಾ ಮೊದಲ ರಚನೆ ಯಾರದು ಅಥವಾ ಯಾವುದು ? ಒಬ್ಬರ ಅಂಕಿತವನ್ನು ತೆಗೆದು ಇನ್ನೊಬ್ಬರ ಅಂಕಿತವನ್ನಿಟ್ಟು ಈ ಅದಲು ಬದಲು ಮಾಡುವ ಕೆಲಸ ಯಾವಾಗ ಆರಂಭವಾಯಿತು ? ಯಾರಿಂದ, ಯಾಕಾಗಿ ಈ ಕರ್ತೃತ್ವ ವ್ಯತ್ಯಾಸ ತೋರಿಸುವ ಕೆಲಸ ನಡೆಯಿತು? ಈ ಬಗೆಯ ಮೂಲಭೂತವಾದ ಸಂಶಯಗಳು ಸಂಶೋಧಕರನ್ನು ಕಾಡುತ್ತವೆ. ಈ ಬಗ್ಗೆ ವಿವೇಚಿಸುವವರೆಲ್ಲ ನೆನಪಿಸುವ ಒಂದು ಸಂಗತಿಯಿದೆ ; ಪುರಂದರ-ಕನಕದಾಸ ಇಬ್ಬರೂ ಶ್ರೇಷ್ಠ ಸಂತರು, ದಾಸವ ರೇಣ್ಯರು ; ಪರಮಜ್ಞಾನಿಗಳಾದ ಪುರಂದರ ಕನಕದಾಸರಲ್ಲಿ ಕೃತಿಚೋರತನ ಕಲ್ಪಿಸುವುದು ನಮ್ಮ ಅಜ್ಞಾನವಾದೀತು. ಈ ಅಶ್ವಿನೀದೇವತೆಗಳ ವಿಚಾರವಾಗಿ ಇಂಥ ಆರೋಪ ಮಾಡುವುದಿರಲಿ, ಹಾಗೆ ಆಲೋಚಿಸುವುದು ಕೂಡ ಅಪರಾಧವಾಗಬಹುದು. ಏಕೆಂದರೆ ಅವರಿಬ್ಬರಲ್ಲೂ ಅಂಥ ಪ್ರತಿಭಾ ದಾರಿದ್ರವಿರಲಿಲ್ಲ ; ಕ್ಷಣದಲ್ಲಿ, ನಿಂತ ನಿಲುವಿನಲ್ಲಿ, ಹೊಸ ಕೀರ್ತನೆ ಕಟ್ಟಿ ಹಾಡುವ ಸ್ಫೂರ್ತಿ ಪ್ರತಿಭಾಶಕ್ತಿಗಳಿದ್ದುವು : ಇವರಲ್ಲಿ ಒಬ್ಬರು ಇನ್ನೊಬ್ಬರ ಕೀರ್ತನೆಗಳನ್ನು, ಕೇವಲ ಅಂಕಿತವನ್ನು ಬದಲಾಯಿಸಿಕೊಳ್ಳುವುದರ ಮೂಲಕ, ಅಲ್ಲೊಂದು ಇಲ್ಲೊಂದು ಮಾತೋ ಸಾಲನೆ ವ್ಯತ್ಯಾಸಗೊಳಿಸಿ, ತಮ್ಮದಾಗಿಸಿಕೊಂಡರೆಂದು ತಿಳಿಯುವುದಕ್ಕೆ ಹಿಂಜರಿಕೆಗೆ ಇದೇ ಪ್ರಧಾನವಾದ ಕಾರಣ. ಎರವಲು ಸರಕಿನ ಬಂಡವಾಳದಿಂದ ಬಾಳಬೇಕಾದ ದಿವಾಳಿತನ, ಬಡತನ ಇಬ್ಬರಲ್ಲೂ ಇರಲಿಲ್ಲ. ಸುಮಾರು ಹದಿನೇಳನೆಯ ಶತಮಾನದಲ್ಲೇ ಈ ಕೀರ್ತನೆಗಳನ್ನು ಹೀಗೆ. ಕಲಸು ಮೇಲೋಗರ ಮಾಡುವ ಕೆಲಸ ಆರಂಭವಾಗಿದೆಯೆಂದು ತೋರುತ್ತದೆ. ಇದನ್ನು ಇನ್ನಷ್ಟು ನಿರ್ದಿಷಗೊಳಿಸಲು, ಈಗ ಲಭ್ಯವಿರುವ ತಾಳೆಗರಿಯ ಪ್ರಾಚೀನ ಹಸ್ತಪ್ರತಿಗಳನ್ನು ಆಧರಿಸಿದರೆ, ಸಾಧ್ಯವಿದೆ ; ಮೊಟ್ಟಮೊದಲು ಯಾವ ಹಾಡನ್ನು ಹೀಗೆ ಬದಲಾಯಿಸಲಾಯಿತೆಂಬುದನ್ನೂ ಇಂಥ ಅಧ್ಯಯನದಿಂದ ಬಹಿರಂಗಗೊಳಿಸಬಹುದು. ಓಲೆಗರಿ, ಕಾಗದದ ಪ್ರಪ್ರಾಚೀನ ಹಸ್ತಪ್ರತಿಗಳ ಸಹಾಯದಿಂದಲೇ ಸೂರಿಗಳು ನಿರ್ಧರಿಸಿ ಹೇಳಬೇಕಾದ ಅಂಶಗಳು ಎರಡು. ಒಂದು, ಎಲ್ಲಿಯವರೆಗೆ ಕೀರ್ತನೆಗಳು ಸಂಕರಗೊಳ್ಳದೆ ಯಥಾಸ್ಥಿತಿಯಲ್ಲಿದ್ದುವು? ಎರಡು, ಯಾವಾಗ ಈ ಕೆಲಸ, ಕರ್ನಾಟಕದ ಯಾವ ಭಾಗದ ಹಸ್ತಪ್ರತಿಗಳಲ್ಲಿ ಪ್ರಾರಂಭವಾಯಿತು ಮತ್ತು ಇದಕ್ಕೆ ಬಲಿಯಾದ ಮೊದಲ ಕೀರ್ತನೆಗಳು ಯಾವುವು? ಇದು ಶುದ್ಧಾಂಗವಾಗಿ, ವಸ್ತುನಿಷ್ಠ ಪರಾಮರ್ಶೆಯಿಂದ ಪತ್ತೆಯಾಗಬೇಕಾದ ಕೆಲಸ, ಆ ದಿಕ್ಕಿನಲ್ಲಿ ಹೆಜ್ಜೆಯಿರಿಸಿದ ಆದ್ಯರು ಬೆಟಗೇರಿಯವರು; ಅದರಿಂದ, ಅವರು ಆಧರಿಸಿದ ಪ್ರತಿಗಳ ಸ್ವರೂಪ, ಕಾಲಇದನ್ನೂ ಗಣನೆಗೆ ತಂದುಕೊಳ್ಳಬೇಕು. ಈ ಸಮಸ್ಯೆಗೆ ಹಸ್ತಪ್ರತಿಗಳನ್ನು ಜಾಲಾಡಿ, ಜಾತಕ ಬಿಡಿಸಿ ನೋಡುವುದೊಂದೇ ಪರಿಹಾರವಲ್ಲ. ಇದಕ್ಕೆ ಸಾಮಾಜಿಕ, ಆರ್ಥಿಕ ಶೈಕ್ಷಣಿಕ, ಧಾರ್ಮಿಕ ಮುಖಗಳೂ ಇವೆ. ಪುರಂದರರೂ ಕನಕದಾಸರ ಸಮಕಾಲೀನರಾದ ವಿಭೂತಿಪುರುಷರು, ಪುರಂದರರು ಶೂದ್ರರೂ; ವೈಶ್ಯಕುಲ ಸಂಜಾತರಾಗಿದ್ದು ಆಮೇಲೆ ದಾಸರಾದ ಮಹಾಜ್ಞಾನಿ, ಕನಕದಾಸರೂ ದಲಿತರ ಅಂಚಿನಲ್ಲಿರುವ ಶೂದ್ರರು ; ಕುರುಬರಾಗಿದ್ದು ದಾಸರಾದರು ಅವರಿಬ್ಬರೂ ಹುಟ್ಟಿಬಂದ ಜಾತಿಕುಲದ ಹಿನ್ನೆಲೆಯಲ್ಲಿ ಪುರಂದರ ದಾಸರಿಗೆ ಅವರ ಕಾಲದ ದಾಸ ಪರಿವಾರದೊಳಗೂ ದೇವಾಲಯಗಳಲ್ಲೂ ಸುಲಭ ಪ್ರವೇಶ ದೊರೆಯಿತು, ಕನಕದಾಸರು ಪಟ್ಟ ಬವಣೆಗೆ ಇಂದಿಗೂ ಕನಕನಕಿಂಡಿ ವ್ಯಥೆಯ ಕಥೆಯನ್ನು ಹೇಳುತ್ತಿದೆ. ಸಾಮಾಜಿಕವಾಗಿ ಇವರಿಬ್ಬರೂ ಶೂದ್ರರು ; ಆರ್ಥಿಕವಾಗಿ ಕುರುಬರು ಹಿಂದುಳಿದವರು, ಶೈಕ್ಷಣಿಕವಾಗಿಯಂತೂ ಇಂದಿಗೂ ತುಂಬ ಕೆಳಗಿರುವ ಜನಾಂಗ. ಇವೆಲ್ಲದರ ಪರಿಣಾಮವಾಗಿ ದಾಸರ ಸಮುದಾಯದಲ್ಲಿ ಇವರಿಗಿದ್ದ ಸ್ಥಾನಮಾನಗಳ ಚಿತ್ರಣ ಮಸಕು ಮಸುಕಾಗಿಯಾದರೂ ಕಂಡುಬರುತ್ತದೆ. ಈ ಇಬ್ಬರು ದಾಸರಿಗೆ ಇದ್ದ ಸೃಜನ ಸಾಮರ್ಥ್ಯ, ಇವರು ರಚಿಸಿದ ಕೃತಿಗಳು, ಬರವಣಿಗೆಯ ಹಿನ್ನೆಲೆಗಳನ್ನು ನೋಡಿದಾಗ ಕನಕದಾಸರು ಹುಟ್ಟುಕವಿಯೆಂಬುದು ನಿಶ್ಚಿತವಾಗುತ್ತದೆ. ಅವರ ಕಾವ್ಯಗಳನ್ನು ಒತ್ತಟ್ಟಿಗೆ ಸರಿಸಿ, ಕೇವಲ ಕೀರ್ತನಗಳನ್ನೇ ತನಿಯಾಗಿ ತೆಗೆದು ನೋಡಿದಾಗಲೂ, ಇಲ್ಲಿಯೂ ಉಳಿದ ಕೀರ್ತನಕಾರರದಕ್ಕಿಂತ, ಕನಕದಾಸರ ಹಾಡುಗಳಲ್ಲೇ ಕಾವ್ಯಾಂಶ ಅಧಿಕವೆಂಬುದು ಸಾಹಿತ್ಯ ವಿಮರ್ಶಕರು ಒಪ್ಪುವ ಮಾತು. ಹೀಗಿರುವಾಗ ಅವರು ಪುರಂದರದಾಸರ ಕೀರ್ತನೆಗಳನ್ನು ಅಲ್ಲಿ ಇಲ್ಲಿ ತಿದ್ದಿ ತಮ್ಮದಾಗಿಸಿ ಕೊಳ್ಳುವುದೆಂಬುದು ಅಸಂಭಾವ್ಯ ; ಮೇಲುವರ್ಗದವರ ಹಾಡುಗಳನ್ನು ಒಂದು ಸಿದ್ದ ಮಾದರಿಯಾಗಿಟ್ಟುಕೊಂಡು ರಚಿಸುವಾಗ ಪ್ರಭಾವ ಗಾಢತರವಾಗಿ ಆಗಿರಬಹುದಲ್ಲವೆ ಎಂಬ ಪ್ರಶ್ನೆಯೂ ಕೇವಲ ತರ್ಕದ ಸ್ತರದಲ್ಲೇ ನಿಲ್ಲಬಹುದು. ಈ ಇಬ್ಬರು ಯೋಗಪುರುಷರೂ ಹೀಗೆ ಒಬ್ಬರಿಂದೊಬ್ಬರು