ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೮೮ ಕನಕ ಸಾಹಿತ್ಯ ದರ್ಶನ-೧ ೯ರ್೮ ಕನಕದಾಸರ ಕಾಲದ ರಾಜಕೀಯ-ಸಾಮಾಜಿಕ ಧಾರ್ಮಿಕ ಹಿನ್ನೆಲೆ ಕೊ. ವ್ಯಾ, ರಮೇಶ ಕೀರ್ತನೆಗಳನ್ನು ಕಳವು ಮಾಡುವ ಪ್ರವೃತ್ತಿಗೆ ದೂರವಾಗಿ, ಅತೀತರಾಗಿ ಉಳಿದರೆ ಇನ್ನು ಕದ್ದವರು ಯಾರು? ಇದು ಚಿಂತನೀಯವೆ. ನನಗೆ ತೋರುವ ಉತ್ತರವೆಂದರೆ, ಈ ಬಗೆಯಲ್ಲಿ ಕೀರ್ತನೆಗಳ ಅದಲು ಬದಲು ಕೆಲಸ ಮಾಡಿದವರು ಸಂಪ್ರತಿಕಾರರೇ ಇರಬೇಕೆಂಬುದು. ಅಂದರೆ ಹಸ್ತಪ್ರತಿಗಳನ್ನು ಸಿದ್ಧಪಡಿಸುವ, ಅಕ್ಷರ ವಿದ್ಯೆ ಬಲ್ಲ ಕೆಲವೇ ಕೆಲವು ಸ್ಥಾಪಿತ ಹಿತಾಸಕ್ತಿಗಳವರು, ತಾವು ತುಂಬ ಜಾಣರೆಂದು ಬುದ್ಧಿಯೋಡಿಸಿದ್ದರಿಂದ ಸಂಭವಿಸಿದ ಕೆಲಸವಿದು. ಹಾಗೆ ತಿದ್ದುವಾಗಲೂ ಒಂದು ಮಾನಸಿಕ ಪ್ರಕ್ರಿಯೆ ಸಂಭವಿಸಿದೆ : ಪುರಂದರದಾಸರ ಹಾಡುಗಳನ್ನು ತಿದ್ದುವ ಧಾರ್ಷ್ಟ, ಮುಟ್ಟುವ ಧೈಯ್ಯ ಎಲ್ಲಿಂದ ಬರಬೇಕು? ಆದರೆ ಕನಕದಾಸರ ಹಾಡುಗಳ ಅಂಕಿತವನ್ನು ತಿದ್ದಿ ಬದಲಾಯಿಸುವುದಕ್ಕೆ ಅವರಿಗೆ ಕೆಲವು ಅನುಕೂಲಗಳಿದ್ದುವು : ಕನಕದಾಸರು ಹುಟ್ಟಿ ಬೆಳೆದು ಬಾಳಿ ಬಂದ ವರ್ಗಸಮುದಾಯಕ್ಕೆ ಅಕ್ಷರದ ಬಾಗಿಲೂ, ಮೇಲುಜಾತಿಯವರ ಮನೆ-ಮಂದಿರ-ಮಠಗಳ ಬಾಗಿಲೂ ಮುಚ್ಚಿದ್ದುವು ಅವರ ವಿಚಾರದಲ್ಲೊಂದು ಅಸಡ್ಡೆ, ಅವರು ತಮ್ಮವರನ್ನೆಲ್ಲ ಮೀರಿ ಮೀರಿಸಿ ಹೈಮಾಚಲೋನ್ನತವಾಗಿ ಬೆಳೆದರೆಂಬ ಅಸಹನೆ ಒಂದು ಹಿಡಿಮಂದಿಯಲ್ಲಿ ಹೆಡೆಯಾಡುತ್ತಿತ್ತು. ಈ ನಗ್ನ ಸತ್ಯವನ್ನೊಪ್ಪಿಕೊಳ್ಳಲು ಯಾವ ಹಿಂಜರಿಕೆಯೂ ಇರಬೇಕಾಗಿಲ್ಲ, ವಾಸ್ತವವಾಗಿ ಇಡೀ ದಾಸಸಾಹಿತ್ಯವೆಂದು ಯಾವ ಕೀರ್ತನಾದಿ ಸಾಹಿತ್ಯರಾಶಿಯನ್ನು ನಿರ್ದೇಶಿಸುತ್ತೇವೆಯೋ ಅದು, ಪುರಂದರ-ಕನಕರ ಹಾಡು/ ಕೃತಿಗಳನ್ನು ಹೊರತು ಪಡಿಸಿದರೆ ಉಳಿಯುವುದಾದರೂ ಏನು ? ಬರೀ ಎಲುಬಿನ ಗೂಡು, ಅದರಲ್ಲೂ ಗಟ್ಟಿ ಕಾಳುಗಳಿರುವುದು ಹೆಚ್ಚಾಗಿ ಕನಕದಾಸರಲ್ಲಿಯೇ. ಹೀಗಾಗಿ ಅವರ ಒಂದೊಂದೇ ಹಾಡನ್ನು ಲಪಟಾಯಿಸಿ, ಅವರ ಹೊಳಪನ್ನು ತಗ್ಗಿಸುವ, ಅತ್ತ ಅವರ ಕೃತಿರಾಶಿಯಿಂದ ಕದ್ದ ಕಳವಿನ ಮಾಲನ್ನು ಸೇರಿಸಿ ಇನ್ನೊಂದು ಕಡೆ ಬೆಳಕು ಹಾಯಿಸುವ ವ್ಯವಸ್ಥಿತ ಸನ್ನಾಹದಲ್ಲಿ, ಹುನ್ನಾರದಲ್ಲಿ ಒಬ್ಬಿಬ್ಬರಾದರೂ ನಿರತರಾಗಿರದ ಹೊರತು ಈಗ ನಾವು ಕಾಣುವ ವ್ಯತ್ಯಾಸಗಳು ಘಟಿಸುತ್ತಿರಲಿಲ್ಲ. ಶೈಲಿಯ ದೃಷ್ಟಿಯಿಂದಲೂ, ಕಾವ್ಯನಿರ್ವಹಣೆಯ ಆಧಾರದಿಂದಲೂ, ಪ್ರಸ್ತಾಪಿತ ವಸ್ತು-ವಿಷಯದ ಬಲದಿಂದಲೂ ಇದುವರೆಗೆ ಈ ಸಂಪ್ರಬಂಧದಲ್ಲಿ ಉದಾಹರಿಸಿ ಚರ್ಚಿಸಿದ ಹಾಡುಗಳಷ್ಟೂ ಕನಕದಾಸರವೇ ಎಂಬುದು ನನ್ನ ಖಚಿತ ಅಭಿಪ್ರಾಯವಾಗಿದೆ. ನನ್ನ ಗ್ರಹಿಕೆ ತಪ್ಪೆಂದು ವಿದ್ವಾಂಸರು ಸಾಧಾರವಾಗಿ ತೋರಿಸಿ ಸ್ಥಾಪಿಸಿದಲ್ಲಿ ಅವರ ಅಭಿಪ್ರಾಯಕ್ಕೆ ಗೌರವಾದರ ತೋರಿಸಲು ತಯಾರಿದ್ದೇನೆ. ಪ್ರಖ್ಯಾತ ಸಂಚಾರಿ ಹಾಡುಕವಿ, ದಾಸ ಸಾಹಿತಿ ಕಾಗಿನೆಲೆಯ ಕನಕದಾಸರು ಬಾಳಿ ಬದುಕಿದ ದಶಕಗಳು ಭಾರತದ ಹಾಗೂ ಕರ್ನಾಟಕದ ಇತಿಹಾಸದ ಒಂದು ವಿಷಮಾವಸ್ಥೆಯ ಸಂಧಿಕಾಲಕ್ಕೆ ಸೇರಿದವು. ಆ ವೇಳೆಗೆ ಕರ್ನಾಟಕವು ತನ್ನ ಪ್ರಾದೇಶಿಕ ಏಕತೆಯನ್ನು ಕಳೆದುಕೊಂಡಿತ್ತಾದರೂ, ವಿಜಯನಗರವು ಕ್ಷಾತ್ರಶಕ್ತಿಯ ದೃಷ್ಟಿಯಿಂದ ಮೇಲುತೋರ್ಕೆಗಾದರೂ ಭಾರತದ ಬಲಿಷ್ಠತಮ ಸಾಮ್ರಾಜ್ಯವಾಗಿ ಮೆರೆದ ದಿನಗಳವು. ಇಂದಿನವರೆಗೂ ಇತಹಾಸಕಾರರೆಲ್ಲರೂ ಆ ಸಾಮ್ರಾಜ್ಯದ ಪ್ರಭು ಮಂತ್ರೋತ್ಸಾಹ ಶಕ್ತಿಗಳನ್ನು ಸರ್ವತೋಮುಖ ಔನ್ನತ್ಯವನ್ನು ಏಕಪಕ್ಷೀಯವಾಗಿ ಒಂದೇ ಸಮನೆ ಹಾಡಿ ಹೊಗಳುತ್ತ ಬಂದಿರುವರು. ಆದರೆ ಈ ಎಲ್ಲ ಪ್ರಶಂಸೆಗಳೂ ಆ ಸಾಮ್ರಾಜ್ಯದ ಇತಿಹಾಸಕ್ಕೆ ಸಂಬಂಧಿಸಿದ ಶಾಸನಗಳ, ವಿದೇಶೀ ಯಾತ್ರಿಕರ ಬರಹಗಳ, ಇತರ ಐತಿಹಾಸಿಕ ದಾಖಲೆಗಳ, ಸ್ಮಾರಕಗಳ ಮೇಲುನೋಟದ ಅಧ್ಯಯನದಿಂದ ಹೊರಬಿದ್ದಿರುವ ಶಬ್ದಾರ್ಥನಿರೂಪಣೆಗಳಷ್ಟೆ, ಈ ಐತಿಹಾಸಿಕ ಪುರಾವೆಗಳ ಆಳವಾದ ವಾಸ್ತವಿಕ ಅಧ್ಯಯನದಿಂದ ಮನವರಿಕೆಯಾಗುವ ಗೂಢಾರ್ಥಗಳಿಂದ ರೂಪ ತಾಳುವ ವಿಜಯನಗರ ಸಾಮ್ರಾಜ್ಯದ ಐತಿಹಾಸಿಕ ಚಿತ್ರಣವೇ ಬೇರೆ ರೀತಿಯದು. ನಿಜ ಸಂಗತಿ ಎಂದರೆ, ಅಂದಿನ ಅರಸುಗಳೂ, ಅಧಿಕಾರಿವರ್ಗದವರೂ, ಸಿರಿವಂತರೂ, ಜನಸಾಮಾನ್ಯರೂ ಕೂಡ ಒಂದು ರೀತಿಯ ಮಹತೋನ್ಮಾದಕ್ಕೆ ಬಲಿಯಾಗಿ, ಅವರುಗಳ ದೈನಂದಿನ ನಡೆವಳಿಕೆಗಳಲ್ಲಿ ಕಪಟಾಚರಣೆಯ, ಡಾಂಭಿಕ ಪ್ರದರ್ಶನದ ಸೋಗು ಹಿಂದೆಂದಿಗಿಂತಲೂ ಹೆಚ್ಚಾಗಿ ಬೆರೆತು ಹೋಗಿತ್ತು. ಕ್ರಿ. ಶ. ೧೩೩೬ರಲ್ಲಿ ಸ್ಥಾಪನೆಗೊಂಡ ವಿಜಯನಗರವು, ಕೆಲವೇ ದಶಕಗಳ ನೈತಿಕ ಸಾಧನೆಗಳ ನಂತರ, ಅದರಲ್ಲೂ ಮುಖ್ಯವಾಗಿ ಕನಕದಾಸರ ಕಾಲಕ್ಕೆ ತನ್ನ ಅಂತಃಸತ್ಯವನ್ನು