ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೯೬ ಕನಕ ಸಾಹಿತ್ಯ ದರ್ಶನ-೧ ಕೊಡೇಕಲ್ಲ ಬಸವಣ್ಣನ ಸಂಪ್ರದಾಯ ಮತ್ತು ಕನಕದಾಸ ಡಾ. ಬಸವಲಿಂಗ ಸೊಪ್ಪಿಮಠ ಈ ಲೇಖನದಲ್ಲಿ ನಾನು ವಿಜಯನಗರ ಸಾಮ್ರಾಜ್ಯದ ಹಿರಿಮೆಯನ್ನು ಕುರಿತ ಇತರ ಇತಿಹಾಸಕಾರರ ಹೊಗಳಿಕೆಯ ಮಾತುಗಳನ್ನ ಕಡೆಗಣಿಸಿ, ಆ ಸಾಮ್ರಾಜ್ಯದ ಅಳಿವಿಗೆ ಕಾರಣವಾದ ದೋಷದೌರ್ಬಲ್ಯಗಳನ್ನೆ ಎತ್ತಿತೋರಿಸಿರುವುದಕ್ಕೆ ಮುಖ್ಯವಾದೊಂದು ಕಾರಣವಿದೆ. ಕನಕದಾಸರ ಸಮಕಾಲೀನ ರಾಜಕೀಯ-ಸಾಮಾಜಿಕ-ಧಾರ್ಮಿಕ ಚಿತ್ರಣಕ್ಕೆ ಐತಿಹಾಸಿಕ ದಾಖಲೆಗಳ ಗೂಢಾರ್ಥವು ಪುಷ್ಟಿ ನೀಡುವುದನ್ನು ನಿರೂಪಿಸುವುದೇ ನನ್ನ ಉದ್ದೇಶವಿತ್ತು. ಅಲ್ಲದೆ, ಅಂದಿನ ಮೆರುಗಿನ ಬಾಹ್ಯಾಡಂಬರಗಳು ಕೇವಲ ತತ್ಕಾಲೋಚಿತವಾದುದಾಗಿದ್ದರೆ, ನಾನು ಪ್ರತಿಪಾದಿಸಿರುವ ಐತಿಹಾಸಿಕ ದೋಷಲೋಪಗಳ ಸೂತ್ರವು ಮಾಯದೆ ನಮ್ಮ ಕಾಲಕ್ಕೂ ಇಳಿದು ಬಂದಿದ್ದು, ಕಲಿಯ ಮಹಿಮೆಯ ಬಗ್ಗೆ ಕನಕದಾಸರ ಹೇಳಿಕೆಗಳನ್ನು ದೃಢೀಕರಿಸಿದೆ; ನಮ್ಮ ಇಂದಿನ ರಾಜಕೀಯ-ಸಾಮಾಜಿಕ-ಧಾರ್ಮಿಕ ದೌರ್ಬಲ್ಯಗಳು ಕನಕದಾಸರ ಕಾಲದಷ್ಟಾದರೂ ಹಳೆಯವು ಎಂಬುದನ್ನು ತೋರಿಸಿಕೊಟ್ಟಿದೆ. ಆಧಾರ ಗ್ರಂಥಗಳು : O. Robert sewell : A Forgotten Empire (London, 1900) ೨. ಕೆ.ವಿ. ರಮೇಶ್ : ಕರ್ನಾಟಕ ಶಾಸನ ಸಮೀಕ್ಷೆ (ಬೆಂಗಳೂರು, 1971) ೩. 'ಎಪಿಗ್ರಾಫಿಯಾ ಇಂಡಿಕಾ'ದ ಸಂಪುಟಗಳು “ಎಪಿಗ್ರಾಫಿಯಾ ಕರ್ನಾಟಿಕಾ'ದ ಸಂಪುಟಗಳು ೫. ಸೌತ್ ಇಂಡಿಯನ್ ಇನ್‌ಸ್ಕಿಪ್‌ಷನ್ಸ್, ಸಂಪುಟ ೭ ಮತ್ತು ೯, ಭಾಗ ೨ ಕಾಲಜ್ಞಾನದೊಡನೆ ಥಟ್ಟನೆ ನೆನಪಾಗುವ ಹೆಸರು ಕೊಡೇಕಲ್ಲ ಬಸವಣ್ಣನದು. ಕಲಬುರ್ಗಿ ಜಿಲ್ಲೆಯ ಸುರಪುರ ತಾಲೂಕಿನ ಒಂದು ಗ್ರಾಮ ಕೊಡೇಕಲ್ಲು. ಇಲ್ಲಿ ಕೊಡೇಕಲ್ಲ ಬಸವಣ್ಣನ ದೇವಸ್ಥಾನವಲ್ಲದೆ ಆತನ ಸಂಪ್ರದಾಯದವರ ಮಠ ಹಾಗೂ ದೇವಾಲಯಗಳಿವೆ. ಈ ಮಠ ಹಾಗೂ ದೇವಾಲಯಗಳಲ್ಲಿ ಕೊಡೇಕಲ್ಲ ಬಸವಣ್ಣ ಹಾಗೂ ಆತನ ಪುತ್ರಸಂತತಿ/ ಶಿಷ್ಯಸಂತತಿಯವರ ಸಾಹಿತ್ಯರಚನೆಗಳನ್ನು ಹಸ್ತಪ್ರತಿ ರೂಪದಲ್ಲಿ ಪೆಟ್ಟಿಗೆಯಲ್ಲಿಟ್ಟು ನಿತ್ಯವೂ ಪೂಜಿಸಿಕೊಂಡು ಬರಲಾಗುತ್ತಿದೆ. ಹೀಗಾಗಿ ಅನ್ಯರ ಕೈಗೆಟುಕದಂತೆ ಕೇವಲ ಪೂಜಾವಸ್ತುವಾಗಿ ಉಳಿದಿದ್ದ ಈ ಒಟ್ಟು ಸಾಹಿತ್ಯವನ್ನು ಆಧರಿಸಿ 'ಕೊಡೇಕಲ್ಲ ಬಸವಣ್ಣ : ಒಂದು ಅಧ್ಯಯನ' ಎಂಬ ಶೀರ್ಷಿಕೆಯಡಿಯಲ್ಲಿ ಡಾ. ಎಂ. ಎಂ. ಕಲಬುರ್ಗಿಯವರ ಮಾರ್ಗದರ್ಶನದಲ್ಲಿ ಕಳೆದ ವರ್ಷ ನಾನು ಸಂಶೋಧನಾಧ್ಯಯನವನ್ನು ಪೂರೈಸಿದೆ. ತತ್ಫಲವಾಗಿ ಈವರೆಗೆ ದಂತಕತೆಯಾಗಿದ್ದ ಕೊಡೇಕಲ್ಲ ಬಸವಣ್ಣ ಈಗ ಮಧ್ಯಕಾಲೀನ ಕರ್ನಾಟಕದ ಐತಿಹಾಸಿಕ ಪುರುಷನಾಗಿದ್ದಾನೆ. ಹಿಂದು-ಮುಸ್ಲಿಂ ಸಂಘರ್ಷಕಾಲದಲ್ಲಿ ಅವೆರಡೂ ಮತಗಳ ಸಮನ್ವಯವನ್ನು ಬೋಧಿಸುತ್ತಲೇ, ಕೈಮೀರಿ ನಿಂತ ಮುಸಲ್ಮಾನರ ಉಪಟಳವನ್ನು ರಾಜಕೀಯ ಹೋರಾಟದ ಮೂಲಕ ನಿಯಂತ್ರಿಸಲೆತ್ನಿಸಿದ 'ವೀರಬಸವಂತ'ನಾಗಿದ್ದಾನೆ. 'ಅಮರ ಕಲ್ಯಾಣ' ಎಂಬ ಶರಣ ಸಂಘಟನೆಯನ್ನು ಕೊಡೇಕಲ್ ಬೆಟ್ಟಪ್ರದೇಶದಲ್ಲಿ ಹುಟ್ಟು ಹಾಕುತ್ತಲೇ, “ಅಮರಗನ್ನಡ' ಎಂಬ ವಿಶಿಷ್ಟ ಲಿಪಿ (ಹನ್ನೊಂದು ರೀತಿಯ)ಯಲ್ಲಿ ತನ್ನ ಪ್ರತಿಭಾನ್ವಿತ ಮಕ್ಕಳೊಂದಿಗೆ ತಾನೂ ಕಾಲಜ್ಞಾನ ಮಾತ್ರವಲ್ಲದೆ ಅನೇಕ ಅನುಭಾವಗೀತೆಗಳನ್ನು, ಲಘುಕಾವ್ಯಗಳನ್ನು, ವಚನಗಳನ್ನು ಬರೆದಿದ್ದಾನೆ ; ಬಸವಾದಿ ಶಿವಶರಣರ ವಚನಗಳನ್ನು ಸಂಪಾದಿಸಿದ್ದಾನೆ. ನಾಥಪಂಥದ ಯೋಗತಳಹದಿಯ ಮೇಲೆ ತನ್ನ ಆರೂಢವೆಂಬ ಅದೈತ ಮತವನ್ನು ಕಟ್ಟಿ