ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೯೮ ಕನಕ ಸಾಹಿತ್ಯ ದರ್ಶನ-೧ ಕೊಡೇಕಲ್ಲ ಬಸವಣ್ಣನ ಸಂಪ್ರದಾಯ ಮತ್ತು ಕನಕದಾಸ ೯೯೯ ಬೆಳೆಸಿದ್ದಾನೆ. ಹೀಗೆ ರಾಜಕೀಯ, ಧರ್ಮ, ಸಾಹಿತ್ಯ ಜಗತ್ತಿನಲ್ಲಿ ತನ್ನದೇ ವಿಶಿಷ್ಟ ಹೆಜ್ಜೆಗಳನ್ನು ಮೂಡಿಸಿದ ಕೊಡೇಕಲ್ಲ ಬಸವಣ್ಣನ ಸಂಪ್ರದಾಯದಲ್ಲಿ ದಾಸಶ್ರೇಷ್ಟನಾದ ಕನಕ ದಾಸನ ಹೆಸರು ಕೇಳಿ ಬರುತ್ತಿರುವುದು ಕುತೂಹಲಕಾರಿಯಾಗಿದೆ. ಕನಕದಾಸನ ಊರಾದ ಕಾಗಿನೆಲೆಯಲ್ಲಿ ಕೊಡೇಕಲ್ಲ ಬಸವಣ್ಣನ ಪುತ್ರ ಸಂಗಪ್ಪಯ್ಯ ಅರ್ಥಾತ್ ಸಂಗಮೇಶ್ವರನ ಸಮಾಧಿ ಗದ್ದುಗೆ ಇರುವುದು ಇನ್ನೂ ಕುತೂಹಲಕಾರಿಯಾಗಿದೆ.' ಕನಕದಾಸನಿಗೆ ಸಂಬಂಧಿಸಿ ಕೊಡೇಕಲ್ಲು ಮತ್ತಿತರ ಶಾಖಾಮಠಗಳಲ್ಲಿ ಪ್ರಬಲವಾಗಿ ಪ್ರಚಲಿತವಿರುವ ಜನವದಂತಿ ಹೀಗಿದೆ : ಕನಕದಾಸನಿಗೆ “ಮುಂಡಿಗೆ'ಯೊಂದರ ಅರ್ಥ ಬಿಡಿಸುವ ವ್ಯಕ್ತಿಯ ಅಗತ್ಯ ಬಿತ್ತು. ಕೊಡೇಕಲ್ಲ ಬಸವಣ್ಣನ ಹಿರಿಯ ಮಗ ರಾಚಪ್ಪಯ್ಯ ಇದನ್ನು ಬಿಡಿಸಬಲ್ಲರೆಂದು ಕಿವಿಗೆ ಬಿದ್ದು ಕನಕದಾಸ ಕೊಡೇಕಲ್ಲಿಗೆ ಬಂದ. ಕೊಡೇಕಲ್ ಊರ ಹೊರವಲಯದಲ್ಲಿ ಒಬ್ಬ ದನಕರು-ಕುರಿಗಳನ್ನು ಮೇಯಿಸುತ್ತ ನಿಂತಿದ್ದ. ರಾಚಪ್ಪಯ್ಯನ ವಿಚಾರವಾಗಿ ಆತನನ್ನು ಕೇಳಿದ ಕನಕದಾಸ, ಅದಕ್ಕೆ ಆ ಕುರುಬ 'ನಾವು ಕುರುಬರು ನಮ್ಮ ದೇವರೆ ಬೀರಯ್ಯ' ಎಂದು ಪದಹಾಡುತ್ತ ತನ್ನಲ್ಲಿಯೇ ಮಗ್ನನಾದ. ಕನಕದಾಸ ಊರೊಳಗೆ ಬಂದ. ಯಾರೋ ಆತನಿಗೆ ರಾಚಪ್ಪಯ್ಯನ ಮನೆ ತೋರಿಸಿದರು. ಮನೆಯಲ್ಲಿ ರಾಚಪ್ಪಯ್ಯ ಇರಲಿಲ್ಲ ; ಆತನ ತಂದೆ ಕೊಡೇಕಲ್ಲ ಬಸವಣ್ಣ ಹಾಗೂ ಇಬ್ಬರು ತಮ್ಮಂದಿರು (ಸಂಗಪ್ಪಯ್ಯ, ಗುಹೇಶ್ವರ) ಇದ್ದರು. ಅವರು ಕನಕದಾಸನನ್ನು ಒಳಕರೆದು ಆದರಿಸಿ ರಾಚಪ್ಪಯ್ಯ ಈಗ ಬರುತ್ತಾನೆ' ಎಂದರು. ಸಾಯಂಕಾಲದ ವೇಳೆಗೆ ರಾಚಪ್ಪಯ್ಯ ಹೊರಗಿನಿಂದ ಬಂದ. ಕನಕದಾಸನಿಗೆ ಆಶ್ಚರ್ಯ ಕಾದಿತ್ತು. ಬಂದಾತ ಬೇರಾರೂ ಆಗಿರದೆ ಊರ ಹೊರಗೆ ತಾನು ಕಂಡು ಮಾತನಾಡಿಸಿದ 'ಕುರುಬ'ನಾಗಿದ್ದ. ಮರುಳನಂತೆ ತೋರಿದ ಆಧ್ಯಾತ್ಮಿಕ ಕುರುಬನಾಗಿದ್ದ. ಕನಕದಾಸನಿಗೆ ಬಿಡಿಸಲಾಗದ ಮುಂಡಿಗೆಯ ವಿಷಯ ತಿಳಿದು, ಅದನ್ನು ಬಿಡಿಸಲು ತಾನು ಹೋಗುವದಾಗಿ ರಾಚಪ್ಪಯ್ಯ ಸಿದ್ದನಾದಾಗ ಅವನ ತಮ್ಮ ಸಂಗಪ್ಪಯ್ಯ ತಾನೇ ಹೋಗುವುದಾಗಿ ನುಡಿದ. ಹಾಗೆ ಅಂದು ಕನಕದಾಸನೊಂದಿಗೆ ಊರು ತೊರೆದ ಸಂಗಪ್ಪಯ್ಯ ಪುನಃ ಕೊಡೇಕಲ್ಲಿಗೆ ಮರಳಲಿಲ್ಲ ; ಕಾಗಿನಲೆಯಲ್ಲಿಯೇ ಸಮಾಧಿಸ್ಥನಾದ. ೧. ಈ ಲೇಖನ ರೂಪುಗೊಳ್ಳುವಲ್ಲಿ ನನಗೆ ಮಾರ್ಗದರ್ಶನ ಮಾಡಿದ ನನ್ನ ಗುರುಗಳಾದ ಡಾ. ಎಂ. ಎಂ. ಕಲಬುರ್ಗಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ. -ಇಷ್ಟು ಕೊಡೇಕಲ್ ಸ್ಥಳಪುರಾಣ, ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಕನಕದಾಸನಿಗೆ ಎದುರಾದ 'ಮುಂಡಿಗೆಯ' ಸಮಸ್ಯೆ ಯಾವುದು ? ಈ ಆಹ್ವಾನ ನೀಡಿದರಾರು ? ತಿಳಿಯದು. ಆದರೆ ಮುಂಡಿಗೆಯ ಅರ್ಥ ಬಿಡಿಸುವ ಸಾಮರ್ಥ್ಯ ರಾಚಪ್ಪಯ್ಯನಲ್ಲಿದೆ ಎಂದು ಕನಕದಾಸ ಕೊಡೇಕಲ್ಲಿಗೆ ಬಂದದ್ದು ಮಹತ್ವದ್ದಾಗಿದೆ. ರಾಚಪ್ಪಯ್ಯನಲ್ಲಿ ಆ ಸಾಮರ್ಥ್ಯ ಸಹಜವಾಗಿಯೇ ಇತ್ತು ಎನ್ನಲು ಅವನೇ ಬರೆದ ಹನ್ನೆರಡು ಕಾವ್ಯಗಳಲ್ಲಿ ಉಪಲಬ್ದವಿರುವ ಎಂಟು ಕಾವ್ಯಗಳು ಜೀವಂತ ಸಾಕ್ಷಿಯಾಗಿವೆ. ಕನಕದಾಸನ ಕಣ್ಣಿಗೆ ಕುರುಬನಾಗಿ ಕಂಡ ರಾಚಪ್ಪಯ್ಯ ಹಾಡಿದ 'ನಾವು ಕುರುಬರು' ಪದ್ಯ ಈಗ ಕನಕದಾಸನ ಹೆಸರಿನಲ್ಲಿ ಪ್ರಚಲಿತವಿದ್ದರೂ ಅದರ ನಿಜವಾದ ಕರ್ತೃ ರಾಚಪ್ಪಯನೇ ಆಗಿದ್ದಾನೆ ಎನ್ನಲು ಆಧಾರಗಳಿವೆ. ಕನಕದಾಸ ಕೊಡೇಕಲ್ಲಿಗೆ ರಾಚಪ್ಪಯ್ಯನನ್ನು ಕೇಳಿಕೊಂಡು ಬಂದಿದ್ದರೂ ಆತನೊಂದಿಗೆ ಊರು ಬಿಟ್ಟಾತ ರಾಚಪ್ಪಯ್ಯನಲ್ಲ, ಆತನ ತಮ್ಮ ಸಂಗಪ್ಪಯ್ಯ. ಕೊಡೇಕಲ್ ಸಾಹಿತ್ಯ-ಸಂಪ್ರದಾಯದಲ್ಲಿ ಸಾಕ್ಷಾತ್ ಚನ್ನಬಸವಣ್ಣನೆಂದು ಕೀರ್ತಿತನಾದ ಈತ ಜ್ಞಾನಿಯೂ ಹೌದು, ತಂದೆಯಂತೆ ಯುದ್ಧವೀರನೂ ಹೌದು. ಈತ ಕನಕದಾಸನೊಂದಿಗೆ ಊರು ಬಿಟ್ಟಿದ್ದಕ್ಕೆ ಸಾಕ್ಷಿಯಾಗಿ ಈಗಲೂ ಕಾಗಿನೆಲೆಯಲ್ಲಿ ಈತನ ಹೆಸರಿನ ದೇವಾಲಯವಿರುವುದು (ಕೊಡೇಕಲ್ ಬಸವಣ್ಣನಂತೆ ಮುಸ್ಲಿಂ ವಿನ್ಯಾಸವುಳ್ಳ ದೇವಾಲಯ). ಈತನ ಉತ್ಸವಕ್ಕೆ ಕಾಗಿನೆಲೆಗೆ ಸು. ೩೦೦ ಕಿ. ಮೀ. ದೂರದ ಕೊಡೇಕಲ್ ಭಕ್ತರು ಬರುವುದು ಇದೆ. ಈ ಹಿನ್ನೆಲೆಯಲ್ಲಿ ಕೊಡೇಕಲ್ ಜನವದಂತಿ ಅನ್ವಯ ಕನಕದಾಸ ಕೊಡೇಕಲ್ಲಿಗೆ ಬಂದದ್ದು, ಸಂಗಪ್ಪಯ್ಯನೊಂದಿಗೆ ಆತ ಕಾಗಿನೆಲೆಗೆ ಹಿಂದಿರುಗಿದ್ದು ಐತಿಹಾಸಿಕ ಘಟನೆ ಎನಿಸುತ್ತದೆ ಇದಕ್ಕೆ ಪೂರಕವಾಗಿ ಕೊಡೇಕಲ್ ಬಸವಣ್ಣಕನಕದಾಸ-ಸಂಗಪ್ಪಯ್ಯರ ಕಾಲವೂ ಹೊಂದಿಕೊಳ್ಳುತ್ತಿರುವುದು ಗಮನಿಸುವಂತಿದೆ. ಕನಕದಾಸನ ಕಾಲ ಸುನಿಶ್ಚಿತವಿದೆ. ವಿಜಯನಗರದ ಅರಸು ಕೃಷ್ಣದೇವರಾಯನ ಕಾಲದಲ್ಲಿ ಈತನಿದ್ದ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯಗಳಿಲ್ಲ. ಕೊಡೇಕಲ್ಲ ಬಸವಣ್ಣನ ಕಾಲವಾದರೂ ಇದೇ ಆಗಿದೆ ಎನ್ನಲು ಈತನಿಂದ ನಾಲ್ಕು ೧. 'ಅಪ್ರಮಾಣ ಕೂಡಲ ಸಂಗಮದೇವ' ಅಂಕಿತದ ವಚನಕಾರ ಬಾಲಸಂಗಯ್ಯ. ಈತನೇ ಎನ್ನಲು ನನ್ನ ಅಪ್ರಕಟಿತ ಪಿ.ಎಚ್.ಡಿ. ಪ್ರಬಂಧ (ಕ. ವಿ.ವಿ. ಗೆ ಅರ್ಪಿತ) 'ಕೊಡೇಕಲ್ಲ ಬಸವಣ್ಣ : ಒಂದು ಅಧ್ಯಯನ'ವನ್ನು ನೋಡಬಹುದು.