ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೦೦ ಕನಕ ಸಾಹಿತ್ಯ ದರ್ಶನ-೧ ಕೊಡೇಕಲ್ಲ ಬಸವಣ್ಣನ ಸಂಪ್ರದಾಯ ಮತ್ತು ಕನಕದಾಸ ೧೦೦೧ ತಲೆಮಾರು ಈಚೆಗೆ ಬದುಕಿದ್ದ, ಈತನ ವಂಶಸ್ಥನೇ ಆದ ವೀರಸಂಗಯ್ಯ ಬರೆದ 'ನಂದಿಯಾಗಮ ಲೀಲೆ' ಎಂಬ ಕಾವ್ಯವೇ (ಕ್ರಿ. ಶ. ೧೫೮೯) ಪ್ರಮುಖ ಆಧಾರವಾಗಿದೆ. ಕಲ್ಯಾಣ ಬಸವಣ್ಣನೊಂದಿಗೆ ಕೊಡೇಕಲ್ ಬಸವಣ್ಣ ವಿಜಾಪುರದ ದೊರೆ ಯೂಸುಫ್ ಅಲಿ ಆದಿಲ್‌ಶಹನನ್ನು ಕೊಡೇಕಲ್ ಬೇಡರ ಹನುಮನಾಯಕನೊಂದಿಗೆ ಎದುರಿಸಿ ಗೆದ್ದ ವಿವರಗಳಿವೆ. ಯೂಸುಫ್ ಅಲಿ ಆದಿಲಶಹ (ಕ್ರಿ. ಶ. ೧೫೧೦) ವಿಜಾಪುರವನ್ನು ಆಳುತ್ತಿರುವಾಗ ವಿಜಯನಗರದಲ್ಲಿ ಕೃಷ್ಣದೇವರಾಯ ಅರಸನಾಗಿದ್ದ, ಈ ಕೃಷ್ಣದೇವರಾಯನ ಕಾಲದಲ್ಲಿಯೇ ಕನಕದಾಸ ಇದ್ದುದ್ದು, ಈ ಹಿನ್ನೆಲೆಯಲ್ಲಿ ಕನಕದಾಸನ ಕಾಲದಲ್ಲಿಯೇ ಕೊಡೇಕಲ್ ಬಸವಣ್ಣ ಇದ್ದು ಪ್ರಾಯಶಃ ವಯಸ್ಸಿನಲ್ಲಿ ಕನಕದಾಸನಿಗಿಂತ ಹಿರಿಯನಿದ್ದಿರಬೇಕು ; ಕನಕದಾಸ-ಸಂಗಪ್ಪಯ್ಯ-ರಾಚಪ್ಪಯ್ಯ ಹೆಚೂ ಕಡಿಮೆ ಸಮವಯಸ್ಕರಿರಬೇಕು. ವಿಜಾಪುರದ ಆದಿಲ್‌ಶಾಹನ ವಿರುದ್ದ ಕೊಡೇಕಲ್ಲ ಬಸವಣ್ಣ ಬೆಂಬಲಿಸಿದ ಬೇಡರ ಹನುಮನಾಯಕ ಸುರಪುರದ ಬೇಡರ ವಂಶಜನಾಗಿದ್ದು, ಕೊಡೇಕಲ್ ಬೆಟ್ಟಪ್ರದೇಶಗಳಲ್ಲಿ ಈತನ ಕುರುಹುಗಳಿವೆ ಕೊಡೇಕಲ್ ಬಸವಣ್ಣನ ಮತಸಂಪ್ರದಾಯ ಆರೂಢ ಪಂಥದ ಅದೈತವೆಂದು ಹಿಂದೆ ಕಾಣಿಸಲಾಗಿದೆ. ಇವರ ಈ ಅದ್ಯೆತಕ್ಕೂ ಕನಕದಾಸನ ದೈತಮಾರ್ಗಕ್ಕೂ ಯಾವ ಸಂಬಂಧವೂ ಇಲ್ಲ. ಅಂದರೆ ಕೊಡೇಕಲ್ಲ ಬಸವಣ್ಣನ ಸಂಪ್ರದಾಯದಲ್ಲಿ ಕನಕದಾಸ ಕಾಣಿಸಿಕೊಳ್ಳಲು ಮತಧರದ ಸಮಾನ ಆಕರ್ಷಣೆ ಕಾರಣವಾಗಿಲ್ಲ, ಹಾಗಾದರೆ ಧರ್ಮ-ಅಧ್ಯಾತ್ಮಗಳಿಗೆ ಹೊರತಾದ ಯಾವ ಸಂಬಂಧ ಕೊಡೇಕಲ್-ಕಾಗಿನೆಲೆಯ ಈ ವ್ಯಕ್ತಿಗಳನ್ನು ಬೆಸೆಯಿತು ? ಎಂದು ಕೇಳುವಂತಾಗುತ್ತದೆ. ನನಗೆ ತೋರುವಂತೆ, ಕನಕದಾಸ ದಾಸಕೂಟದತ್ತ ಆಕರ್ಷಿತನಾಗುವ ಪೂರ್ವದಲ್ಲಿಯೇ ಕೊಡೇಕಲ್ ಸಂಬಂಧವನ್ನು ಉಳ್ಳವನಾಗಿದ್ದ ಎನಿಸುತ್ತದೆ. ದಾಸಕೂಟದತ್ತ ಒಲಿಯುವ ಮುಂಚಿನ ಕನಕದಾಸನ ಜೀವನವೆಂದರೆ ಎಲ್ಲರೂ ಬಲ್ಲಂತೆ ದೊರೆತನದ ರಾಜಕೀಯ ಜೀವನ. ಬಹುಪಾಲು ವಿದ್ವಾಂಸರು ಅಭಿಪ್ರಾಯಪಡುವಂತೆ ಈತ ಜಾತಿಯಿಂದ ಕುರುಬನಾಗಿರಲಿಲ್ಲ. ಬೇಡನಾಗಿದ್ದ. ಕೊಡೇಕಲ್ ಬಸವಣ್ಣನಿಂದ ರಾಜಕೀಯ ಬೆಂಬಲ ಪಡೆದ ವ್ಯಕ್ತಿ ಕೊಡೇಕಲ್ ಹನುಮನಾಯಕ ಬೇಡ ಜನಾಂಗದವನೇ ಆಗಿರುವುದು. ಈ ಬೇಡರ ರಾಜಕೀಯ ಸಂಘಟನೆಯ ಮೂಲಕ ಮುಸ್ಲಿಂ ಪ್ರಭುತ್ವವನ್ನು ಧಿಕ್ಕರಿಸಹೊರಟ ಕೊಡೇಕಲ್ ಬಸವಾದಿಗಳ ರಾಜಕೀಯ ಚಟುವಟಿಕೆಗಳು ಅವರವರ ಸಾಹಿತ್ಯದಲ್ಲಿ ಸ್ಪುಟವಾಗಿ ವರ್ಣಿಗೊಂಡಿರುವುದು-ಇದನ್ನು ನೆನೆದರೆ ಕನಕದಾಸ ಕೊಡೇಕಲ್ಲಿಗೆ ಬಂದುದು, ಸಂಗಪ್ಪಯ್ಯ ಕಾಗಿನೆಲೆಗೆ ಕನಕದಾಸನ ಹಿಂದೆ ಹೋದುದು ರಾಜಕೀಯ ಉದ್ದೇಶದಿಂದಲೇ ಇರುವಂತಿದೆ. ಕೊಡೇಕಲ್ ಬೇಡರ ಪಾಳಯಕ್ಕೆ ಬಾಡದ ಬೇಡರ ಪಾಳೆಯಗಾರ ಕನಕದಾಸನ ಸೈನ್ಯಶಕ್ತಿಯನ್ನು ತಂದುಕೊಳ್ಳಲು ಇರಬಹುದು. ಈ ಸಂದರ್ಭದಲ್ಲಿ, ಊರಿಗೆ ಮರಳದೆ ಕಾಗಿನೆಲೆಯಲ್ಲಿ ದೇಹವಿಟ್ಟ ಸಂಗಪ್ಪಯ್ಯನ ಅಂತ್ಯ ವಿಚಾರಾರ್ಹವಾಗಿದೆ-ಕೊಡೇಕಲ್-ಕಾಗಿನೆಲೆ ಸ್ಥಳಪುರಾಣಗಳ ಹೇಳಿಕೆಯ ಪ್ರಕಾರ, ಸಂಗಪ್ಪಯ್ಯನ ಕುದುರೆ ಕಾಗಿನೆಲೆಯಲ್ಲಿ “ಘೋಷಾದವರ' ಮನೆಯೊಳಗೆ ನುಗ್ಗಿತಂತೆ ; ತಕ್ಷಣ ಜನವೆಲ್ಲ ಒಳಹೋಗಿ ನೋಡಲಾಗಿ ಸಂಗಪ್ಪಯ್ಯ 'ಮಾಯ'ವಾಗಿದ್ದನಂತೆ. ಇಲ್ಲಿ ' ಘೋಷಾದವರ ಮನೆ' ಮುಸಲ್ಮಾನರ ನಿವಾಸವನ್ನು ಹೇಳುತ್ತಿದ್ದು, ಸಂಗಪ್ಪಯ್ಯ ಇಲ್ಲಿ 'ಮಾಯ'ವಾದದ್ದು ಆತ ಮುಸಲ್ಮಾನರ ಕೈಗೆ ಸಿಕ್ಕು ಮಡಿದದ್ದನ್ನು ಹೇಳುತ್ತಿರುವಂತೆ ಕಾಣುತ್ತದೆ. ಈ ಸಂಗಪ್ಪಯ್ಯನನ್ನು ಒಳಗೊಂಡು ಇಡೀ ಕೊಡೆಕಲ್ ಬಸವಾದಿಗಳ ವೀರಸಂಘಟನೆ ತನ್ನ ಕೊನೆಕೊನೆಯ ದಿನಗಳಲ್ಲಿ ಸಂಪೂರ್ಣ ಮುಸ್ಲಿಂ ರಾಜಶಕ್ತಿಯ ವಿರೋಧಿಯಾಗಿ ಹೋರಾಡಿದುದನ್ನು ಕೊಡೇಕಲ್ ಸಾಹಿತ್ಯ ಅದರಲ್ಲೂ ಕಾಲಜ್ಞಾನ ಸಾಹಿತ್ಯ ಏರುಧ್ವನಿಯಲ್ಲಿ ಸಾರುವುದನ್ನು ಲಕ್ಷಿಸಿದರೆ, ಒಂದು ಹಂತದಲ್ಲಿ ಮುಸಲ್ಮಾನರ ಕೈ ಮೇಲಾಗಿ ಸಂಗಪ್ಪಯ್ಯ ಕಾಗಿನೆಲೆಯಲ್ಲಿ ಕೊನೆಯಾಗಬೇಕಾದ ದುರಂತ ಸಂಭವಿಸಿದ್ದು ಚಾರಿತ್ರಿಕವೆಂದೇ ತೋರುತ್ತದೆ. ಕೊಡೇಕಲ್ ಸಾಹಿತ್ಯದಲ್ಲಿ ವರ್ಣಿತವಾದ ಆತನ ವೀರೋಚಿತ ವರ್ತನೆಗಳು ಈ ದುರ್ಘಟನೆಗೆ ಪುಷ್ಟಿಯೊದಗಿಸುತ್ತವೆ. ಈ ದುರಂತ ಕೊಡೇಕಲ್ ಬಸವಣ್ಣ, ಹನುಮನಾಯಕರನ್ನು ಆವರಿಸಿದ್ದಕ್ಕೆ ಆಧಾರಗಳಿವೆ. ಹೀಗಿರುವಾಗ ಇವರಿಗೆ ಹತ್ತಿರದವನಾಗಿದ್ದ ಕನಕ (ದಾಸ) ನಾಯಕ, ತನ್ನೊಂದಿಗೆ ಬಂದು ತನ್ನ ಪ್ರದೇಶ (ಕಾಗಿನೆಲೆ)ದಲ್ಲಿ ದೇಹವಿಟ್ಟ ಸಂಗಪ್ಪಯ್ಯನನ್ನು ಕಳೆದುಕೊಂಡ ಕನಕನಾಯಕ ರಾಜಕೀಯ ಮೌನ ಧರಿಸಿದ್ದನೆಂದು ಹೇಳುವುದು ಹೇಗೆ ಸಾಧ್ಯ ? ಕನಕದಾಸನೇ ರಚಿಸಿದ 'ಸಾಲದೆ ನಿನ್ನದೊಂದು ದಿವ್ಯನಾಮ' ಎಂಬ ಹಾಡಿನಲ್ಲಿ ಬರುವ ಒಂದು ನುಡಿ ಹೀಗಿದೆ : “ರಣದೊಳಗೆ ದೇಹವ ಖಂಡ ತುಂಡವ ಮಾಡಿ ರಣವನುತ್ತರಿಸಿ ಮರಣವ ತೋರಿದೆ || ಪ್ರಣವಗೋಚರನಾಗಿ ಲೀಲೆಯಿಂದಲಿ ಬಂದು ಹೆಣಕೆ ಪ್ರಾಣವನ್ನು ತಂದಿತ್ತ ಮಹಾತುಮನೆ |” ಕನಕದಾಸ ಯುದ್ಧವೊಂದರಲ್ಲಿ ಮಾರಣಾಂತಿಕ ಗಾಯವಡೆದು ಬಿದ್ದ