ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೦೪ ಕನಕ ಸಾಹಿತ್ಯ ದರ್ಶನ-೧ ಕೊಡೇಕಲ್ಲ ಬಸವಣ್ಣನ ಸಂಪ್ರದಾಯ ಮತ್ತು ಕನಕದಾಸ ೧೦೦೫ ಅಮರಕಲ್ಯಾಣದ 'ಅಮರ ಗಣಂಗಳು' ಇದ್ದಾರೆ. ಇವರ ಶರಣಸಂತಾನದಲ್ಲಿ ಬೆಳೆದು ಬಂದ 'ರಾಚನಾದ ತಾನಿದ್ದಾನೆ. ರಾಚಪ್ಪಯ್ಯ ಈ ರೀತಿ ಚಾರಿತ್ರಿಕವೂ ಆಧ್ಯಾತ್ಮಿಕ ಧ್ವನಿಪೂರ್ಣವೂ ಆದ ಈ ಹಿನ್ನೆಲೆ ಕನಕದಾಸನಲ್ಲಿ ಸಂಪೂರ್ಣ ಮಾಯವಾಗಿರುವುದು ಈ ಹಾಡು ಮೂಲತಃ ರಾಚಪ್ಪಯ್ಯನದು ಎಂಬುದನ್ನು ದೃಢಪಡಿಸುತ್ತದೆ. ಹೀಗೆ ಕೊಡೇಕಲ್ ಸಾಹಿತ್ಯ ಹಾಗೂ ಸಂಪ್ರದಾಯಗಳಲ್ಲಿ ಕನಕದಾಸನ ಪೂರ್ವಿ ಬದುಕಿನ ಸಂದರ್ಭಗಳು ಸಮಾವೇಶವಾಗಿದ್ದು ಈ ನಿಟ್ಟಿನಲ್ಲಿ ಇನ್ನೂ ಸಂಶೋಧನೆಯ ಅಗತ್ಯವನ್ನು ಸಾರುತ್ತಲೇ ಇವೆ. “ತನುವಿಂಧ್ಯ'ದಲ್ಲಿ ಮೇಯುತ್ತಿರುವ ನರಕುರಿಗಳನ್ನು 'ಮರವೆ ನರಕುರಿ ಹಿಂಡು' ಎಂದು ರಾಚಪ್ಪಯ್ಯ ವರ್ಣಿಸಿರುವುದು ಸರಿಯಾಗಿದೆಯೇ ವಿನಾ 'ಅರುಹೆಂಬ ನರಗುರಿಯು' ಎಂದು ಕನಕದಾಸನಲ್ಲಿರುವುದು ಸರಿಯಾಗಿಲ್ಲ ಮಾತ್ರವಲ್ಲ ಅರ್ಥವಿರೋಧವೂ ಅಸಂಬದ್ಧವೂ ಆಗಿವೆ. 'ಕುರಿ' ನರನ ಪ್ರತೀಕವಾಗಿರುವ ಹಾಗೆ ಅವನ ಮರವೆಯ ಸಂಕೇತವೂ ಆಗಿದೆ. ಇದರ ನಾಶದರಿವು ('ಕುರಿಸತ್ತುದರಿವು) 'ಪ್ರಭುಗೌಡನಿಗೆ (ರಾಚಪ್ಪಯ್ಯನ ತಂದೆ) ಕೊಡೇಕಲ್ ಬಸವನ “ಅಮರಕಲ್ಯಾಣ' ಸಂಘಟನೆಯ ಅಲ್ಲಮಪ್ರಭುವೆಂದು ಕೊಡೇಕಲ್ ಸಾಹಿತ್ಯದಲ್ಲಿ ಕೀರ್ತಿತನಾಗಿರುವ ಪರಮಾನಂದ ಪ್ರಭು' ಇರುವುದು ಸರಿಯಾಗಿಯೇ ಇದೆ. “ಪಿತನು ಪ್ರಭುಗೌಡ ಸಂಗತಿ ಮಾತೆ ಬಸವಗೊಂಡ ಸುತರು ಅವರ ಗಣಂಗಳೆಂಬ ಬಳಗ ಬಹಳ ರತಿಸಲೆಮ್ಮವರು ಸಾಕಿದರು ನಾ ಒಡಹುಟ್ಟಿ ಅತಿಶಯದಿ ಹೆಸರಿಟ್ಟರೆನಗೆ ರಾಚನೆಂದು” - ರಾಚಪ್ಪಯ್ಯ “ಮೂರು ಲೋಕಕೆ ಗೌಡ ಸಂಗತಿ ಇಹರು ಮಂತ್ರಿ ಮೂರು ಲೋಕದ ಜನರು ಭಜಿಸುತಿಹರು ಮಾರಪಿತ ಕಾಗಿನೆಲೆಯಾದಿ ಕೇಶವನಂಘ್ರವಾರಿಜನ ನೆರೆನಂಬದವನೆ ಕುರುಬ” - ಕನಕದಾಸ ಇವು 'ನಾವು ಕುರುಬರು' ಹಾಡಿನ ಅಂತ್ಯನುಡಿಯ ಎರಡು ಪಾಠಗಳು. ಇಲ್ಲಿ ರಾಚಪ್ಪಯ್ಯ ತನ್ನ ತಂದೆಗೆ ಪರಮಗುರುವಿನ ಸ್ಥಾನದಲ್ಲಿರುವ ಪ್ರಭು ಅರ್ಥಾತ್ ಪರಮಾನಂದ ಪ್ರಭುವನ್ನು, 'ಪಿತನಾದ "ಪ್ರಭುಗೌಡ'ನೆಂದು ಕರೆಯುತ್ತ, ತಂದೆ ಕೊಡೇಕಲ್ ಬಸವಣ್ಣನನ್ನು 'ಮಾತೆ' 'ಬಸವಗೊಂಡ” ಎಂದಿದ್ದಾನೆ. ಹೀಗೆ ಪ್ರಭು-ಬಸವರ ಕಲ್ಯಾಣಕಾಲದ ಸಖ್ಯ ಅಮರಕಲ್ಯಾಣದ ಪರಮಾನಂದ ಪ್ರಭು-ಕೆಡೇಕಲ್ ಬಸ ವರ ಗುರು-ಶಿಷ್ಯ ಸ೦ಬ೦ಧ'ವಾಗಿ ಸಾಂಕೇತಿಕಗೊಳ್ಳುತ್ತಲೇ ಸತಿ-ಪತಿ ಭಾವದ (ಗುರು 'ಪತಿ' ಶಿಷ್ಯ 'ಸತಿ) ಧ್ವನಿಪೂರ್ಣತೆಯನ್ನೂ ಗಳಿಸಿಕೊಂಡಿದೆ. ಈ ಈರ್ವರ 'ಸುತ'ರಾಗಿ ೧. ಉತ್ತರ ಕರ್ನಾಟಕದಲ್ಲಿ ಪರಮಾನಂದ ಗುಡ್ಡ (ದೇವದುರ್ಗ ತಾಲೂಕು.) ಹೆಬ್ಬಾಳ (ಸುರಪುರ ತಾಲ್ಲೂಕು), ಚಾಂದಕವಟೆ (ಸಿಂದಗಿ ತಾಲ್ಲೂಕು) ಮೊದಲಾದ ಕಡೆಗಳಲ್ಲಿ ಈ ಪರಮಾನಂದ ಪ್ರಭುವಿನ ದೇವಾಲಯಗಳಿವೆ.