ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೧೦ ಕನಕ ಸಾಹಿತ್ಯ ದರ್ಶನ-೧ ಕನಕಸೂಕ್ತಿ ಸಂಚಯ ೧೦೧೧ ನಳ ಚರಿತ್ರೆಯಿಂದ ೧) ಕರಿಗಳನ್ನು ಮುರಿದಿಡುವ ಸಿಂಹಕೆ ನರಿಗಳಿದಿರೆ ? ೨) ಕುಲಗಿರಿಗೆ ನೊರಜಂತರವೆ. ೩) ಕಂತೆಗೆ ತಕ್ಕಬೊಂತೆ. ೪) ನಿನ್ನಡಿ ನೆಳಲಿನಲ್ಲಿರೆ ಹಳುವವೇ ಸಾಮ್ರಾಜ್ಯ. ೫) ನೀನಿಲ್ಲದ ನಿಲಯವೇ ನನಗಡವಿ. ೬) ಮಾಣಿಕವೆಂದು ಪಿಡಿದರೆ ಭೂರಿಕೆಂಡವಿದಾಯ್ತು. ೭) ಬಡವಗೌತಣವಿಕ್ಕುವೊಡೆಯೊಕ್ಕುಡಿತೆ ಹಾಲೆ ೮) ಮಂಜು ಸುರಿಯಲೊಡನೆ ಕೆರೆತುಂಬುವುದೆ ೯) ಮುಂಗೈ ಕಂಕಣಕೆ ಕನ್ನಡಿಯೇಕೆ. ೧೦) ಸುಂದರಿಗೆ ಮಿಕ್ಕೆವ ಬಣಗು ಸತಿಯರು ಸರಿಯೆ ಲೋಕದೊಳು ೧೧) ಪರರ ದುಃಖವ ಪರಿಹರಿಸಿ, ಮಿಗೆ ಪರರಿಗುಪಕಾರಾರ್ಥವೆಸಗಲು ಪರಮ ಪುಣ್ಯವದು. ೧೨) ದೂತರಲಿ ಕುಲಗೋತ್ರಗಳ ನೀನೇತಕರಸುವೆ. ೧೩) ನಳಿನಮುಖಿಯರ ಕಪಟಚಿತ್ತವ ತಿಳಿಯಲಾರಿಗೆ ಸಾಧ್ಯ. ೧೪) ಶರೀರ ಸುಖಗಳನಿತ್ಯ. ೧೫) ಎಳೆಯ ಬಾಳೆಯ ಸುಳಿಯು ಅನಲನ ಜಳದ ಹೊಯ್ದಲಿ ಬೆಂದವೋಲ್. ೧೬) ವಿಧಿಬರೆದ ಬರಹವ ತಪ್ಪಿಸಲು ಹರಿವಿರಿಂಚಾದಿಗಳಿಗಳವೇ. ೧೭) ನೆಳಲು ತನುವಿನ ಬಳಿಯೊಳಲ್ಲದೆ ಚಲಿಸುವುದೆ ಬೇರೆ. ೧೮) ಹಿಮಕರನ ನುಂಗುವ ರಾಹುವಿನವೋಲ್. ೧೯) ಕತ್ತಲೆಬಿಗಿದುದವಗೀ ತಿಳಿವ ಪೆಟ್ಟಿಗೆ ಮುಚ್ಚುವಂದದಲಿ. ೨೦) ಕಾಲವಾವನ ಕೀಳು ಮಾಡದು. ೨೧) ಪುರಾಕೃತ ಮೀರಲಾರಳವೆಂದು. ೨೨) ಮುನ್ನಮಾಡಿದ ಕರ್ಮ ಫಲವಿದು ಬೆನ್ನಬಿಡದು. ೨೩) ಪತಿವ್ರತೆಗೆ ಹಾನಿಯೆ. ೨೩) ಪತಿವಿಹೀನೆಗೆ ಸಲುವುದೇ ಸುವ್ರತ ಸುಭೋಜನ ಸೌಖ್ಯ. ೨೪) ನಡೆಯು ತೆಡಹಿದ ಪಟ್ಟದಾನೆಯ ವಿಡಿದುಕೊಲ್ಲುವರುಂಟೆ. ಹರಿಭಕ್ತಿಸಾರದಿಂದ ೧) ಗಿಳಿಯ ಮರಿಯನು ತಂದು ಪಂಜರ ದೊಳಗೆ ಪೋಷಿಸಿ ಕಲಿಸಿ ಮೃದುನುಡಿ ಗಳನು ಲಾಲಿಸಿಕೇಳ್ವ ಪರಿಣತರಂತೆ ನೀನೆನಗೆ ತಿಳುಹು ಮತಿಯನು... ೨) ವೇದಶಾಸ್ತ್ರ ಪುರಾಣ ತನ್ನ ಶಿಶುವಿಗೆ || ಹಾದಿಯನು ನಾನರಿಯೆ........ ಹಸಿವರಿತು ತಾಯ್ ತನ್ನ ಶಿಶುವಿಗೆ || ಒಸೆದು ಮೊಲೆ ಕೊಡುವಂತೆ ನೀಪೋಷಿಸದೆ ಬೇರಿನ್ನಾರು ಪೋಷಕರಾಗಿ ಸಲಹುವರು......... ಏನು ಮಾಡಿದಡೇನು ಕರ್ಮವ ನೀನೊಲಿಯದಿನ್ನಿಲ್ಲವಿದಕನುಮಾನವುಂಟೇ............ ನೀನೋಲಿಯೆ ತೃಣ ಪರ್ವತವು ಪುಸಿಯೇನು. ೬) ಎಷ್ಟುಮಾಡಲು ಮುನ್ನ ತಾಪಡೆ ದಷ್ಟುಯೆಂಬುದ ಲೋಕದೊಳು ಮತಿ ಗೆಟ್ಟ ಮಾನವರಾಡುತಿಹರು....... ೭) ನೀನೊಲಿದ ಬಳಿಕಿನ್ನು ಪಾತಕವುಂಟೆ. ಇಲ್ಲಿಹನು ಅಲ್ಲಿಲ್ಲವಂಬೀಸಲ್ಲು ಸಲ್ಲದು. ದೀನನಾನು ಸಮಸ್ತಲೋಕಕೆ ದಾನಿ ನೀನು ವಿಚಾರಿಸಲು ಮತಿ ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು. ೧೦) ನಿಮ್ಮಡಿಯ ಮರೆದು ಬಾಹಿರನಾದವನು ನೀ ಮರೆವರೆ, ಹಸು ತನ್ನ ಕಂದನ ಮರೆವುದೇ. ೧೧) ಗತಿವಿಹೀನರಿಗಾರು ನೀನೇಗತಿ ಕಣಾ. ೧೨) ಕರುಣಾಸಮುದ್ರನು ನೀನಿರಲು ಕಮಲಾಸನನ ಹಂಗೇಕೆ. ೧೩) ಪಂಚಭೂತದ ಕಾಯದೊಳು ನೀ ವಂಚಿಸಿದೆಯಿರುತಿರಲು ಪೂರ್ವದ ಸಂಚಿತದ ಫಲವೆನ್ನಲೇಕಿದು ಮರುಳುತನದಿಂದ.