ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೦೮ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೦೯ ಕನ್ನಡ ಸಾಹಿತ್ಯದ ಆರಂಭ ಕವಿಗಳಂತೆ ಕನಕದಾಸರು ಚಂಪುವಿನಲ್ಲಿ ಕಾವ್ಯರಚನೆ ಮಾಡಲಿಲ್ಲವಾದರೂ, ಕನ್ನಡದ ಆದಿಕವಿ ಪಂಪನಂತೆ ಕಲಿಯಾಗಿದ್ದು, ಕವಿಯಾಗಿ ಕೀರ್ತಿಗಳಿಸಿದವನು. ಪಂಪ, ಕನಕದಾಸರಂತೆ ಸಂತನೆನಿಸದಿದ್ದರೂ, ಧರ್ಮಶ್ರದ್ಧೆಯುಳ್ಳ ರಸಿಕ ಹಾಗೂ ಶೃಂಗಾರಪ್ರಿಯ ಕವಿ. ಕನಕದಾಸರು ತಮ್ಮ “ಮೋಹನ ತರಂಗಿಣಿ'ಯಲ್ಲಿ ಅದನ್ನು ಮೆರೆದಿದ್ದರೆ, ಪಂಪ, ತನ್ನ ಧಾರ್ಮಿಕ ಕಾವ್ಯವಾದ 'ಆದಿಪುರಾಣ'ದಲ್ಲಿಯೇ- 'ನೀಲಾಂಜನೆಯ' ಹಾಗೂ 'ಶ್ರೀಮತಿ ವಜ್ರಜಂಘರ ಸಂದರ್ಭದಲ್ಲಿ ಅದನ್ನು ಉತ್ತುಂಗ ಶಿಖರಕ್ಕೇರಿಸಿದ್ದಾನೆ. ಆ ಮಟ್ಟದ ಕೃತಿ ಇದಲ್ಲವಾದರೂ, ಸನ್ನಿವೇಶ ನಿರ್ಮಾಣ ಹಾಗೂ ಔಚಿತ್ಯ ಪ್ರಜ್ಞೆಯನ್ನು ತೋರುವಲ್ಲಿ ಕನಕದಾಸರು ಪಂಪನಿಗೆ ಹೆಗಲೆಣೆಯಾಗಿ ನಿಲ್ಲದಿದ್ದರೂ, ನಿರಾಶೆಯುಂಟುಮಾಡುವ ಕವಿಯಲ್ಲ, ಕನಕದಾಸರನ್ನು ಪಂಪನೊಂದಿಗೆ ತೂಗಿ ನೋಡುವುದೇ ಕೆಲವರಿಗೆ ಕಸಿವಿಸಿಯುಂಟು ಮಾಡಬಹುದುದಾದ ಸಂಗತಿಯಾಗಬಹುದಾದರೂ, ಕೆಲವೊಂದು ಸನ್ನಿವೇಶಗಳ ಚಿತ್ರಣ ಹಾಗೂ ವರ್ಣನಗಳು ಕನಕದಾಸರಿಗೆ ಕೀರ್ತಿಯನ್ನು ತಂದುಕೊಡಬಲ್ಲಂತಹವು. ಪಂಪನ “ಆದಿಪುರಾಣ' ಧಾರ್ಮಿಕ ಕಾವ್ಯವಾದಂತೆ ಕನಕದಾಸರ 'ಮೋಹನ ತರಂಗಿಣಿ'ಯೂ ಒಂದರ್ಥದಲ್ಲಿ ದೈವೀಪಾತ್ರಗಳನ್ನೊಳಗೊಂಡ ಶೃಂಗಾರ ಕಾವ್ಯ ಎರಡರಲ್ಲಿಯೂ ಪುರಾಣ ವಸ್ತುವನ್ನು ಕಾಣಬಹುದು. ಆದರೆ ಒಂದು 'ಚಂಪು' ಇನ್ನೊಂದು ಸಾಂಗತ್ಯ', ಚಂಪುವಿನ ಚೌಕಟ್ಟಿನಲ್ಲಿ ಬರುವ ಬಂಧ, ಸಾಂಗತ್ಯದಲ್ಲಿ ತರಲಾಗುವುದಿಲ್ಲ ಎಂಬ ಅಂಶವನ್ನು ಮನಗಂಡು ಇವುಗಳ ಇತಿಮಿತಿಯನ್ನು ಗುರುತಿಸ ಬೇಕಾಗುತ್ತದೆ. ವಾಸ್ತವವಾಗಿ ಇವರಿಬ್ಬರ ತುಲನೆ ಸಮಂಜಸವಲ್ಲವೆನಿಸಬಹುದಾದರೂ 'ಸತ್ಯಾವ್ಯ'ದ ಸಾಲಿನಲ್ಲಿ ನಿಲ್ಲಬಲ್ಲ 'ಮೋಹನ ತರಂಗಿಣಿ' ಕಾವ್ಯಗುಣವನ್ನು ಧಾರಾಳವಾಗಿಯೇ ಪ್ರಕಟಿಸುತ್ತದೆ : ರಸಪೂರಿತ ಸುಪ್ರಬಂಧ ವಿಲಕ್ಷಣ ವೆಸೆವಂತೆ ಪೇಳಪೆನಿದನು ಹಸನಾದುದೆಂದು ಯೋಗ್ಯರು ತಲೆದೂಗಲು ಉಸಿರುವೆ ಹರಿಕೃಪೆಯಿಂದ || ಎಂದು ಪೀಠಿಕೆಯಲ್ಲಿಯೇ ಹೇಳಿಕೊಂಡಿರುವ ಈ ಕವಿ ಅದನ್ನು ಹುಸಿಯಾಗಿಸಿಲ್ಲ. ಆದರೆ ಪಂಪನ ಕಾವ್ಯದಲ್ಲಿನ- “ನೋಡಿ ಕಣ್ತಣಿವಿನಂ ಅಪ್ಪಿ ತೋಳ್ ತಣಿವಿನಂ ಸುರತಾಮೃತ ಸೇವೆಯೋಳ್ ಮನಂ ತಣಿವಿನಂ ಆದಲಂಪು ಮಿಗೆ ಭೋಗಿಸಿದಂ ಸುರಲೋಕ ಸೌಖ್ಯಮಂ” ಮಟ್ಟದ ಬಿಗಿ ಪ್ರಕಟವಾಗದೆ ಹೋದರೂ, ಉಷಾ-ಅನಿರುದ್ದರ ಸಮಾಗಮ ಸಂದರ್ಭದಲ್ಲಿ ಬರುವ ಕನಸಿನ ಪ್ರಣಯ ಭೇಟಿಯೇ ಮೊದಲಾದ ಶೃಂಗಾರ ಸನ್ನಿವೇಶಗಳಲ್ಲಿ ಕವಿ ಕನಕದಾಸರು ತಾವು ಸಂತರೆಂಬುದನ್ನು ಸಂಪೂರ್ಣ ಮರೆತು, ಕಾವ್ಯರಚಿಸಿರುವುದು ಕಂಡುಬರುತ್ತದೆ. ಶೃಂಗಾರ ಕವಿಯಾಗಿ ಮೆರೆದಿರುವುದು ಕಂಡು ಬರುತ್ತದೆ : ನಿದ್ರಾನ್ವಿತೆಯಾಗಿ ಕಣ್ಣಿಟ್ಟಿಯೊಳಗನಿ ರುದ್ಧನ ಕಂಡಮರ್ದಪ್ಪ ಮುದ್ದಾಡಿ ಮುದ್ದು ಬಾಯೊಳಗಿಟ್ಟು ಚುಂಬಿಸು ತಿದ್ದಳು ರತಿಶಾಸ್ತ್ರದಲಿ || ಚಾಪಲಾಕ್ಷಿಯ ಪರವಶಭೀತು ಕಾಮೋ ದೀಪನ ತಲೆದೋರೆ ಮಗುಳೆ ರೂಪಕಂದರ್ಪನೆಂದೆನಿಸುವ ತನ್ನ ಪ್ರಾ ಸೋಪನ ತಡವಿ ನೋಡಿದಳು || ಪಂಪನದು 'ಚಂಪು', ಕನಕನದು 'ಸಾಂಗತ್ಯ', ಅದರ ಬಂಧವೇ ಬೇರೆ, ಇದರ ಚಂದವೇ ಬೇರೆ. ಆದರೂ ಕಾವ್ಯದ ಸ್ವಾದ, ರಸಿಕತೆಯ ಮೋದ ಇದ್ದೇಇದೆ. ಪ್ರಧಾನವಾಗಿ ಶೃಂಗಾರ ಕಾವ್ಯವೆನಿಸಿದ 'ಮೋಹನ ತರಂಗಿಣಿ'ಯಲ್ಲಿ ಕವಿ ಹೇಳಬೇಕಾದ್ದನ್ನು ಔಚಿತ್ಯವರಿತು ಸಂಕೋಚವಿಲ್ಲದೆ ಹೇಳಿದ್ದಾನೆ-ನಿಜವಾದ ಕಾವ್ಯವಾಗಿಸಿದ್ದಾನೆ. ಕನಕದಾಸರ ಕಾವ್ಯದಲ್ಲಿ ಹೆಚ್ಚಿನ ವಿಶೇಷತೆ ಇರುವುದು ಅವರು ತೋರುವ ಸಮಕಾಲೀನ ಪ್ರಜ್ಞೆ ಹಾಗೂ ಸಾಮಾಜಿಕ ಪ್ರಜ್ಞೆಯಲ್ಲಿ, ಆರಂಭದ ಚಂಪೂ ಕವಿಗಳು ತಾವು ಕೈಗೆತ್ತಿಕೊಂಡ ವಸ್ತುವಿನ ಕಾಣದಿಂದಾಗಿ ಪ್ರಕಟಿಸಲಾಗದ ಹಲವಂಶಗಳನ್ನು ಅನಂತರದ ಕವಿಗಳು ಧಾರಾಳವಾಗಿ ತಮ್ಮ ಕೃತಿಗಳಲ್ಲಿ ಪ್ರಕಟಿಸಿರುವುದನ್ನು ಕಾಣಬಹುದು. ಅಲ್ಲದೆ ಅಂದಿನ ಸಾಹಿತ್ಯಕ ಸಂದರ್ಭವೂ ಅವರಿಗೆ ಅವಕಾಶ ಕೊಡಲಿಲ್ಲ ಎಂಬುದೂ ಸತ್ಯ. ಹಾಗಾಗಿ ಪಂಪ, ಪೊನ್ನ, ರನ್ನರಂತಹ ಕವಿಗಳೂ ಕೂಡ ಕೃತಿ ರಚನೆಯ ಸಂದರ್ಭದಲ್ಲಿ ಪೂರ್ಣ ಸ್ವಾತಂತ್ರ್ಯವನ್ನು ಮೆರೆಯಲಾಗಲಿಲ್ಲ. ಪಂಪ 'ವಿಕ್ರಮಾರ್ಜುನ ವಿಜಯ'ದಲ್ಲಿ ಮೆರೆದ ಸ್ವಾತಂತ್ರ್ಯವನ್ನು 'ಆದಿಪುರಾಣ'ದಲ್ಲಿ ಮೆರೆಯಲಾಗಲಿಲ್ಲ ಎಂಬುದೇ ಸಾಕು ಅಂದಿನ ಕಾವ್ಯದ ವಸ್ತು, ಸಾಹಿತ್ಯದ ಸಂದರ್ಭದಂತಹ ಅಂಶಗಳು ಕವಿಗಳಿಗೆ ಹೇಗೆ ಕಡಿವಾಣವಾಗಿತ್ತು ಎಂಬುದನ್ನು ತೋರುವುದಕ್ಕೆ. ಆದರೆ