ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೩೦ ಕನಕ ಸಾಹಿತ್ಯ ದರ್ಶನ-೧ ಕನ್ನಡ ಸಾಹಿತ್ಯದಲ್ಲಿ ಕನಕದಾಸರ ಸ್ಥಾನ ೬೩೧ ಕಿವಿ, ಕಣ್ಣು, ಮೂಗು ಮುಂತಾದ ಇಂದ್ರಿಯಗಳು ವ್ಯಕ್ತಿಯ ನಾಶಕ್ಕೆಂತೋ, ಅಂತೆಯೇ ಉದ್ದಾರಕ್ಕೂ ಕಾರಣವಾಗಬಲ್ಲವು-ನೆರವಾಗಬಲ್ಲವು. ಆದರೆ ಅವನ್ನು ಬಳಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬೇಕು. ಹಿಂದಿನವರು ಯಾವುದನ್ನು ಮಾನವನ ಶತ್ರುಗಳೆಂದು ಹೇಳಿದ್ದರೋ, ಅವುಗಳಲ್ಲಿಯೇ ಮಿತ್ರತ್ವವನ್ನು ಕಾಣುವ ಬಗೆಯನ್ನು ಕನಕದಾಸರು ತೋರಿದ್ದಾರೆ. ಕನಕದಾಸರ ಮತ್ತೊಂದು ವೈಶಿಷ್ಟ್ಯ ಕಂಡು ಬರುವುದು ಅವರು ರಚಿಸಿರುವ ಮುಂಡಿಗೆಗಳಲ್ಲಿ ಇವುಗಳು ಕುಮಾರವ್ಯಾಸನಲ್ಲಿ ಬರುವ ವೇದ ಪುರುಷನ ಸುತನಸುತನ ಸ ಹೋದರನ ಹೆಮ್ಮಗನ ಮಗನ ತ 0. \ ಳೋದರಿಯ ಮಾತುಳನ ಮಾವನನತುಳ ಭುಜಬಲದಿ ಬಹುಮಂದಿ ಎಂಬ ವಿಚಾರವನ್ನು ಎಲ್ಲಾ ಸಾಧಕರೂ ವಿವಿಧ ರೀತಿಯಲ್ಲಿ ಹೇಳಿದ್ದಾರೆ. ಸರ್ವಜ್ಞ ಒಂದೆಡೆ ಅದನ್ನು : ಕಣ್ಣು ನಾಲಗೆ ಮನವು ತನ್ನದೆಂದೆನಬೇಡ ಅನ್ಯರು ಕೊಂದರೆನಬೇಡ | ಇವು ಮೂರು ತನ್ನನೇ ಕೊಲ್ಲುವುವು ಸರ್ವಜ್ಞ || ಎಂದು ಹೇಳಿದ್ದರೆ ; ಬಸವಣ್ಣನವರು ಬೇರೆ ಸಂದರ್ಭದ ಹಿನ್ನೆಲೆಯಲ್ಲಿ: ಅತ್ತಲಿತ್ತಲು ಹೋಗದಂತೆ ಹೆಳವನ ಮಾಡಯ್ಯಾ ತಂದೆ : ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ ; ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ ; ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲ ಸಂಗಮದೇವ || ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾರೆ. ಸಾಧನೆಗೆ ಅಡ್ಡಿಯಾಗುವ ಈ ಇಂದ್ರಿಯಗಳ ಬಗ್ಗೆ ವಹಿಸಬೇಕಾದ ಎಚ್ಚರವನ್ನು ಹಾಗೂ ಅವುಗಳ ಸ್ವರೂಪವನ್ನೂ ಹೇಳಿದ್ದಾರೆ. ಆದರೆ ಕನಕದಾಸರಲ್ಲಿ ಇದು ಬೇರೊಂದು ರೀತಿಯಲ್ಲಿಯೇ ಬಣ್ಣಿತವಾಗಿದೆ. ಆ ಪಂಚೇಂದ್ರಿಯಗಳ ನೆರವಿನಿಂದಲೇ ಹೇಗೆ ಮಾನವ ಉದ್ದಾರದ ಹಾದಿಯನ್ನು ಹಿಡಿಯಬಹುದು ಎಂಬುದನ್ನು ಹೇಳುವಲ್ಲಿ ವಿಶಿಷ್ಟತೆಯನ್ನು ಕನಕದಾಸರು ತೋರಿದ್ದಾರೆ : “ಕಣ್ಣೆ ಕಾಮನ ಬೀಜ ಕಣ್ಣಿನಿಂದಲೆ ನೋಡು ಮೋಕ್ಷ ಸಾಮ್ರಾಜ್ಯ ಕಣ್ಣಿನ ಮೂರುತಿ ಬಿಗಿದು | ಒಳ ಗಣ್ಣಿಂದಲೆ ದೇವರ ನೋಡಣ್ಣ || ಮೂಗೆ ಶ್ವಾಸ ನಿಶ್ವಾಸ | ಈ ಮೂಗಿನಿಂದಲೆ ಕಾಣೋ ಯೋಗ ಸನ್ಯಾಸ ಮೂಗನಾದರೆ ವಿಶೇಷ | ಒಳ ಮೂಗಿನಿಂದ ನೋಡಣ್ಣ ಲೀಲಾವಿಲಾಸ || ಕಿವಿಯೆ ಕರ್ಮಕೆ ದ್ವಾರ | ಈ ಕಿವಿಯಿಂದಲೆ ಕೇಳೊ ಮೋಕ್ಷಸಾರ ಕಿವಿಯ ಕರ್ಮಕುಠಾರ | ಒಳ ಗಿವಿಯಲ್ಲಿ ಕಾಣೋ ನಾದದ ಬೇರ || ಕಾದಿಗೆಲಿದವನಣ್ಣನವ್ವಯ ನಾದಿನಿಯ ಜಠರದಲಿ ಜನಿಸಿದ ನಾದಿಮೂರುತಿ ಸಲಹೊ ಗದುಗಿನ ವೀರನಾರಾಯಣ || ಪದ್ಯಗಳಂತಹ ಹಾಗೂ ವಚನ ಸಾಹಿತ್ಯದಲ್ಲಿ ಬರುವ ಬೆಡಗಿನ ವಚನಗಳನ್ನು ಹೋಲುವಂತಹವು. ಬೌದ್ಧಿಕ ಕಸರತ್ತಿಗೆ ಎಡೆಮಾಡಿಕೊಡುವ ಇಂತಹ ಸಾಂಕೇತಿಕ ಶೈಲಿಯಲ್ಲಿ ಕನಕದಾಸರೂ 'ಮುಂಡಿಗೆಗಳನ್ನು ರಚಿಸಿದ್ದಾರೆ. ಬಾಯೊಳಗಿಹ ಗಂಡನ ನಿಜ ತಮ್ಮನ ತಾಯ ಪಿತನ ಮಡದಿಯ ಧರಿಸಿದನ ಸ್ತ್ರೀಯಳ ಸುತನ ಕೈಯಲಿ ಶಾಪಪಡೆದನ ದಾಯಾದ್ಯನ ಮಗನ ಸಾಯಕವದು ತೀವ್ರದಿ ಬರುತಿದೆ ಕಂಡು ಮಾಯಾಪತಿ ಭೂಮಿಯನೊತ್ತಿ ತನ್ನಯ ಬೀಯಗಾರನ ತಲೆಗಾಯಿದಂಥ ರಾಯನ ಕರೆದು ತೋರೆ ರಮಣಿ || ಈ ಬಗೆಯ ರಚನೆಗಳು ಜಾಣೆ, ಚಮತ್ಕಾರ ಹಾಗೂ ಪಾಂಡಿತ್ಯ, ಪ್ರತಿಭೆಗಳಿಂದ ಕೂಡಿದವುಗಳು. ಗೂಢಾರ್ಥದಿಂದ ಕೂಡಿದ ಇವುಗಳನ್ನು ತಿಳಿಯಬೇಕಾದರೆ ಸಾಕಷ್ಟು ತಿಣುಕಬೇಕಾಗುತ್ತದೆ ; ಪೌರಾಣಿಕವಾದ ಹಾಗೂ ಅಧ್ಯಾತ್ಮದ ಸ್ಪಷ್ಟ ಪರಿಚಯವಿರಬೇಕಾಗುತ್ತದೆ. ಕನಕದಾಸರು ಕೀರ್ತನೆ, ಕಾವ್ಯರಚನೆಗಳ ಜೊತೆಗೆ ಇಂತಹ 'ಮುಂಡಿಗೆಗಳನ್ನು ರಚಿಸುವುದರ ಮೂಲಕ