ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪೦ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಸಾಹಿತ್ಯದ ಮೇಲೆ ಅವರ ಹಿಂದಿನ ಮತ್ತು ಅವರ ಸಮಕಾಲೀನ ಕವಿಗಳ ಪ್ರಭಾವ ೬೪೧ ಜ್ಞಾನಂತೇಹಂ ಸವಿಜ್ಞಾನಮಿದಂ ವಕ್ಷಾಮ್ಯ ಶೇಷತಃ ಯಜ್ಞಾತ್ವಾ ನೇಹ ಭೂಯೋನ್ಯ ಜ್ಞಾನವ್ಯಮವ ಶಿಷ್ಯತೇ || -ಅಧ್ಯಾಯ ೭-ಶ್ಲೋಕ ೨-ಜ್ಞಾನ ವಿಜ್ಞಾನಯೋಗ. “ಕಲಿಸುಯೋಧನನ ಓಲಗದಿ ಕೆಡಹಿದಪಾದ' (ಭಜಸಿ ಬದುಕೆಲೇ ಮಾನವ ಕ, ಕೀ. ೨೯) ಕುಮಾರವ್ಯಾಸನ ಉದ್ಯೋಗ ಪರ್ವದ 'ಸೆಣಸು ಸೇರದ ದೇವ ನಿದಿರಲಿ | ಮಣಿಯದಾತನ ಕಾಣುತವೆ ಧಾ | ರುಣಿಯನೊತ್ತಿದನುಂಗುಟದ ತುದಿಯಿಂದ ನಸುನಗುತ' ಎಂಬ ಸಾಲುಗಳನ್ನು ನೆನಪಿಗೆ ತರುತ್ತದೆ. 'ಶಿಲೆಯ ಸತಿಯಳ ಮಾಡಿ ಶುದ್ದಮಾಡಿದ ಪಾದ' ಎಂಬ ಸಾಲು (ಅದೇ) ರಾಮಾಯಣದ ದಾಕ್ಷಿಣಾತ್ಯ ಪಾಠದ ಅರಿವು ಕನಕದಾಸರಿಗೆ ಇತ್ತೆಂಬುದನ್ನು ಸಮರ್ಥಿಸುತ್ತದೆ. ಉತ್ತರದ ಪಾಠದಲ್ಲಿ ಅಹಲೈ ಗಾಳಿಯಾಗಿ ಆಶ್ರಮದಲ್ಲಿ ಅಲೆಯುತ್ತಿದ್ದರೆ, ದಕ್ಷಿಣದ ಪಾಠದಲ್ಲಿ ಶಿಲೆಯಾಗಿದ್ದಳೆಂದು ವರ್ಣಿತವಾಗಿದೆ. 'ಶಿಷ್ಟ ಹರಿಶ್ಚಂದ್ರನಿಗೆ ಮಸಣದಡಿಗೆಯಂತೆ' ಎಂಬ ವಿವರ ರಾಘವಾಂಕನ ಹರಿಶ್ಚಂದ್ರ ಕಾವ್ಯದಲ್ಲಿ ಹರಿಶ್ಚಂದ್ರ ಸಂಬಳಿಗೋಲನ್ನು ಹಿಡಿದು ವೀರಬಾಹುವಿನ ಶಿಷ್ಯನಾಗಿ ಸ್ಮಶಾನವನ್ನು ಕಾಯ್ದ ದೃಶ್ಯವನ್ನು ನೆನಪಿಗೆ ತರುತ್ತದೆ. “ಭರದಿಂದ ಬೃಗುಮುನಿ ಬಂದು ಕೋಪಿಸಿ ಬೇಗ ಚರಣ ಒತ್ತಿದನ'-ಎಂಬ ಬೃಗು ಮುನಿಯ ಕಣ್ಣನ್ನು ವಿಷ್ಣು ಒಡೆದ ಕತೆ ಭವಿಷ್ಟೋತ್ತರ ಪುರಾಣದಲ್ಲಿದೆ. ಎನ್ನ ಕಂದ ಹಳ್ಳಿಯ ಹನುಮ (ಪು ೯. ಕೀ. ೧೨) ಎಂಬ ಕೀರ್ತನೆಯಲ್ಲಿ ಕನಕದಾಸರ ಸಂಭಾಷಣಾ ಚಾತುರ್ಯವನ್ನೂ, ನಾಟಕೀಯ ವ್ಯಂಗ್ಯವನ್ನೂ ಗುರುತಿಸಬಹುದು. ರಾಮಲಕ್ಷ್ಮಣರ ಅರಮನೆಯ ವೈಭವದ ಬದುಕು-ಇಂದಿನ ವನವಾಸದ ಸರಳ ಕ್ಲಿಷ್ಟಕರ ಬದುಕು ಇವೆರಡರ ಹೋಲಿಕೆಯ ಮೂಲಕ ವೈಭವದ ಜೀವನ ಸರಳ ಜೀವನಕ್ಕೆ ಎಂದೂ ಎಡೆಮಾಡಿಕೊಡಬಹುದು ಎಂಬ ಎಚ್ಚರಿಕೆಯ ದನಿ ಇರುವಂತಿದೆ. ವಿಜಯನಗರದ ವೈಭವದ ಕಾಲದ ಅತಿಭೋಗ ಜನರನ್ನು ಎಲ್ಲಿ ವಿನಾಶದತ್ತ ಒಯ್ಯುವುದೋ ಎಂದು ಚಿಂತಿಸಿ ವೈರಾಗ್ಯವನ್ನು ಬೋಧಿಸಿ ಸರಳ ಜೀವನದೆಡೆಗೆ ಅವರ ಮನಸ್ಸನ್ನು ಹರಿಸುವತ್ತ ದಾಸರು ಮಾಡಿದ ಪ್ರಯತ್ನ ಅನನ್ಯವಾಗಿದೆ. ಶ್ರೀಮಂತರಾದ ಪುರಂದರದಾಸರಾಗಲಿ, ನಾಯಕರಾಗಿದ್ದ ಕನಕದಾಸರಾಗಲಿ ತಮ್ಮ ವೈಭವ, ಶ್ರೀಮಂತಿಕೆಯ ಬದುಕನ್ನು ತೊರೆದು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಶ್ರೀಸಾಮಾನ್ಯನ ಬದುಕನ್ನು ಆರಿಸಿಕೊಂಡ ಹಿನ್ನೆಲೆಯಲ್ಲಿ ಈ ಕೀರ್ತನೆಯನ್ನು ಸಮಾಲೋಚಿಸುವುದು ವಿಹಿತವಾಗಿದೆ. ತುಪ್ಪ ಪಂಚಾಮೃತ-ಅಡವಿಗಡ್ಡೆ, ಕರ್ಪೂರವೀಳ್ಯ-ಕುರುಕು, ಸುಪ್ಪತ್ತಿಗೆ ಮಂಚ-ಹುಲ್ಲು ಹಾಸಿಗೆ, ನವವಸ್ತ-ನಾರಸೀರೆ, ಹುನಗಂಟುಜಡೆ, ಜಾಜಿ ಕತ್ತುರಿ-ಭಸಿತ ಧೂಳು, ಕನಕರಥ-ಕಾಲುನಡಿಗೆ, ಛತ್ರಚಾಮರಬಿಸಿಲು ಈ ವೈದೃಶ್ಯಗಳು ಶ್ರೀಮಂತಿಕೆ-ಬಡತನ ಇವುಗಳ ನಡುವಿನ ಕಂದರಕ್ಕೆ ಕನ್ನಡಿ ಹಿಡಿಯುವುದರ ಜೊತೆಗೆ ಇಂಥ ಸ್ಥಿತ್ಯಂತರವನ್ನು ಅನುಭವಿಸಿದ ರಾಮಲಕ್ಷ್ಮಣರಂಥವರ ಉದಾಹರಣೆ ಕಣ್ಣೆದುರಿರುವಾಗ ಈಗ ಇರುವ ಭೋಗವೇ ಶಾಶ್ವತ ಎಂದು ನಂಬಿ ಕೆಡಬೇಡಿ ಎಂದು ವೈಭವಯುಕ್ತ ವಿಜಯನಗರದ ಸಾಮಾನ್ಯತಾಶ್ರೀಗೆ ಎಚ್ಚರಿಕೆ ನೀಡುತ್ತಿರುವಂತಿದೆ ಈ ಕೀರ್ತನೆ. ಶರಣರ ಮಹೇಶ್ವರ ನಿಷ್ಠೆಯನ್ನು ಹೋಲುವ ವೈಷ್ಣವ ನಿಷ್ಠೆಯನ್ನು ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಪ್ರತಿಪಾದಿಸಿದ್ದಾರೆ. (ಪು. ೧೪-ಕೀ, ೧೮) 'ದಾಸೋಹ'ದ ಪರಿಕಲ್ಪನೆ ಶಿವಶರಣದಲ್ಲಿ ಇರುವಂತೆ ಹರಿದಾಸರಲ್ಲೂ ಇದೆ. ಇದಕ್ಕೆ ನಿದರ್ಶನವಾಗಿ ಕನಕದಾಸರ 'ಬಂಟನಾಗಿ ಬಾಗಿಲ ಕಾಯ್ದೆ ಹರಿಯ' (೧೭-೨೨) ಎಂಬ ಕೀರ್ತನೆಯನ್ನು ನೋಡಬಹುದು. 'ಮೀಸಲ ಊಳಿಗ. ಮಾಡಿಕೊಂಡಿರುವೆ ದಾಸರ ದಾಸರಮನೆಯ' ಎಂಬ ವಾಕ್ಯ ಬಸವಣ್ಣನವರ “ಶಿವಭಕ್ತರಿಗಿಂತ ಹಿರಿಯರಿಲ್ಲ, ಎನಗಿಂತ ಕಿರಿಯನಿಲ್ಲ' ಎಂಬ ಸಾಲುಗಳನ್ನು ನೆನಪಿಗೆ ತರುತ್ತದೆ(೯೬-೧೦೮), 'ಡೊಂಕುಬಾಲದ ನಾಯಕರೆ ನೀವೇನೂಟ ಮಾಡಿದಿರಿ' ಎಂಬ ಕೀರ್ತನೆಯಲ್ಲಿ ರಾಜಕೀಯ ವಿಡಂಬನೆ ಇರುವಂತೆ ತೋರುತ್ತದೆ. 'ಹಿರಿಯಹಾದಿಲಿ ಓಡುವಿರಿ ಕರೇ ಬೂದಿಯಲಿ ಹೊರಳುವಿರಿ' ಎಂಬ ಸಾಲುಗಳು ಮಾರ್ಮಿಕವಾಗಿವೆ. ಸಮಕಾಲೀನ ಬದುಕಿಗೆ ಹಿಡಿದ ಕನ್ನಡಿಯಂತಿದೆ ಈ ಸಾಲುಗಳು. ಮೋಹನ ತರಂಗಿಣಿ :- ಅಚ್ಚಗನ್ನಡ ದೇಸಿಛಂದಸ್ಸಾದ ಸಾಂಗತ್ಯದಲ್ಲಿ ರಚಿತವಾದ 'ಮೋಹನ ತರಂಗಿಣಿ' ಕನಕದಾಸರು ತಮ್ಮ ಅನುಭವದ ಮೂಸೆಯಲ್ಲಿ ಪರಂಪರಾಗತವಾದ ಪೌರಾಣಿಕ ಕಥೆಯನ್ನು ಕರಗಿಸಿ ನಿರ್ಮಿಸಿದ ಹೊನ್ನ ಪುತ್ಥಳಿಯಾಗಿದೆ. ಸಂದ ಮಹಾಪುರಾಣ, ಮಹಾಭಾರತ, ಭಾಗವತ, ಹರಿವಂಶ, ವಿಷ್ಣುಪುರಾಣಗಳಲ್ಲಿ ಬರುವ ಮನ್ಮಥ-ರತಿಯರ ಬದುಕಿನಲ್ಲಿ ಎದ್ದ ಬಿರುಗಾಳಿ ಮತ್ತು ಅದರಿಂದ ಅವರು ಹೊರಬಂದ ಕತೆಯನ್ನು ತಮ್ಮದೇ ವಿಶಿಷ್ಟ ರೀತಿಯಲ್ಲಿ ಪಳಗಿಸಿದ್ದಾರೆ. ಶಿವನಿಂದ ಸುಟ್ಟುಹೋದ ಮನ್ಮಥ ಮರುಹುಟ್ಟನ್ನು ಪಡೆದು ರತಿಯನ್ನು ಮರಳಿ ಪಡೆಯುವ ಘಟನೆಯನ್ನು ಹಿನ್ನೆಲೆಯಾಗುಳ್ಳ ಈ ಕಾವ್ಯ ಮೂಲ ಕತೆಯಲ್ಲಿ ಇಲ್ಲದ ಅನೇಕ ಅಂಶಗಳನ್ನು ಒಳಗೊಂಡು ಒಮ್ಮೆಗೇ ಪುರಾತನ ಮತ್ತು ನೂತನಗಳನ್ನು ಹೊಯ್ಕಯ್ಯಾಗಿಸಿದ