ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೬೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ರಾಮಧಾನ್ಯ ಚರಿತೆ ೬೬೫ ದುಗಳ ಹೊಗಳಲು ಚೀರಿದವು ಕಹ ಳೆಗಳು ರಭಸದಿ ಬಂದು ಹೊಕ್ಕನು ನೃಪತಿಯರಮನೆಯ || ಕವಿಯ ಸಮಕಾಲೀನ ಭಾರತ ಮತ್ತು ಕರ್ನಾಟಕದಲ್ಲಿ ಯಾವ ಯಾವ ರಾಜ್ಯಗಳಿದ್ದುವೆಂಬುದನ್ನು ನೋಡಬಹುದು. ಜೋಳ ಗುಜ್ಜರ ದ್ರವಿಡವಂಗ ವ ರಾಳ ಚೋಟಕ ಸಿಂದು ಶಿಬ ನೇ ಪಾಳ ಪಾಂಡ್ಯ ಮರಾಟ ಸಿಂಹಳ ಹೂಣ ಸಮೀರಾ ಲಾಳ ಮಗಧ ವಿದರ್ಭ ರುತು ಮಲೆ ಯಾಳ ನಿಷಧ ಕಳಿಂಗ ವೆರ ಪಾಂ ಚಾಲ ಬಹು ದೇಶಾಧಿಪತಿಗಳು ಬಂದರೊಗ್ಗಿನಲಿ || ತನ್ನ ಕಾಲದ ಸಮಾಜವನ್ನು ಪ್ರತಿನಿಧಿಸುತ್ತಾನೆ. ಈ ಹಿನ್ನೆಲೆಯಲ್ಲಿ ಆಗಿನ ಕಾಲದ ದವಸ ಧಾನ್ಯಗಳು, ವಿವಿಧ ರಾಜ್ಯಗಳು, ಸೈನಿಕ ಶಿಬಿರಗಳು ಇಂಥವನ್ನು ಗುರುತಿಸಬಹುದು. ರಾಮನ ಎದುರಿಗೆ ತಂದು ನಿಲ್ಲಿಸಿದ ಧಾನ್ಯಗಳ ವಿವರ ನೋಡಿ : ನರೆದಲಗನಿದು ನೆಲ್ಲು ಹಾರಕ ಬರಗು ಜೋಳವು ಕಂಬು ಸಾಮೆಯು ಉರುತರದನವಣೆಯಿದು ನವಧಾನ್ಯವೆಂದೆನಲು || ಕನ್ನಡನಾಡಿನ ಪ್ರಧಾನವಾದ ಆಹಾರ ಧಾನ್ಯಗಳನ್ನು ಕನಕದಾಸರು ಇಲ್ಲಿ ಕೊಟ್ಟಿದ್ದಾರೆ. ಹದಿನೈದನೆಯ ಶತಮಾನದ ಹೊತ್ತಿಗೆ ಕನ್ನಡನಾಡಿನಲ್ಲಿ ಗೋಧಿ ಇತ್ತಾದರೂ ಕವಿ ತನ್ನ ಪ್ರಧಾನ ಪಟ್ಟಿಯಲ್ಲಿ ಅದನ್ನು ಸೇರಿಸದೆ ಮುನಿಯೊಬ್ಬನ ಬಾಯಿಂದ ಹೆಸರಿಸಿರುವುದನ್ನು ನೋಡಿದರೆ ಕನ್ನಡನಾಡಿಗೆ ಗೋಧಿ ಹೊರಗಿನಿಂದ ಬಂದುದೆಂಬುದನ್ನು ತೋರಿಸುತ್ತದೆ. ಕನಕದಾಸರು ತಮ್ಮ ಜೀವಿತ ಕಾಲದ ಬಹು ಭಾಗವನ್ನು ಯುದ್ಧಭೂಮಿಯಲ್ಲಿ ಕಳೆದವರು. ಸೇನೆಯೊಂದಿಗೆ ರಾಜ್ಯವನ್ನೆಲ್ಲಾ ಸುತ್ತಿದವರು. ಯುದ್ಧನಿರತರಾಗಿ ಅಲ್ಲಲ್ಲಿ ಬೀಡುಬಿಡುತ್ತಾ ಪಯಣಿಸುವ ಸೇನೆಯ ಚಿತ್ರಗಳು ಕನಕದಾಸರ ಕಾವ್ಯಗಳಲ್ಲಿ ವಾಸ್ತವವಾಗಿ ಮೂಡಿನಿಂತಿವೆ. ಅಲ್ಲಿನ ಸೇನಾ ಶಿಬಿರಗಳ ಇಂತಹ ಅನೇಕ ಚಿತ್ರಗಳನ್ನು ಕವಿ ತನ್ನ ಈ ಪುಟ್ಟ ಕಾವ್ಯದಲ್ಲಿ ನೀಡಿದ್ದಾನೆ. ಆ ಮಹಾವನದೊಳಗೆ ಸುಭಟ ಸೋಮವಿಳಿದುದು ಪಾಳೆಯದ ಸಂ ಗ್ರಾಮದಿದಿರಲಿ ಗುಡಿಗುಡಾರಂಗಳು ವಿರಾಜಿಸಿತು | ಹೊಡೆವ ತಮ್ಮಟೆ ಭೇರಿ ಡಮರುಗ ಗಿಡಿಬಿಡಿ ಗೌಡ ಡಿಂಡಿಮ ಢಕ್ಕೆ ನುಡುವ ಶಂಖ ಮೃದಂಗ ಘನ ನಿಸ್ಲಾಳ ಮೊದಲಾದ | ಮಾಳವಾಂದ್ರ ಕರುಷವರ ನೇ ಪಾಳ ಬರ್ಬರ ಮನೃಪ ಬಂ ಗಾಳ ಮಾಂದ್ರ ಮರಾಟ ಕೋಸಲ ಕೊಡಗ ಕರ್ನಾಟ ಗೌಳ ಕುಂತಳ ಕೃಕರಪತಿ ಬ ಲ್ಲಾಳ ಕೊಂಕಣ ಚೀನ ಕೈಕೆಯ ರಾಳ ಮೇಳದಿ ಬಂದು ಹೊಕ್ಕರು ನೃಪನ ವರಸಭೆಯ | ಕರ್ನಾಟಕಕ್ಕೆ ಸಂಬಂಧಿಸಿದಂತೆ ಕವಿ ಕರ್ನಾಟ, ಕೊಂಕಣ, ತುಳುವ, ಹೊಯ್ಸಳ ಇತ್ಯಾದಿ ವಿಭಾಗಗಳನ್ನು ಗುರುತಿಸುತ್ತಾನೆ. ಆಗಿನ ಕಾಲಕ್ಕೆ ಭಾಷಾವಾರು ರಾಜ್ಯಗಳೊ ಪ್ರಾಂತಗಳೊ ಇರಲಿಲ್ಲವಾದರೂ ಒಂದು ಭಾಷೆಯನ್ನಾಡುವ ಜನರವೇ ಹಲವಾರು ರಾಜ್ಯಗಳಿದ್ದುವು. ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ೧೩ನೆಯ ಶತಮಾನದಲ್ಲಿ ಅಸ್ತಂಗತವಾದ ಹೊಯ್ಸಳ ದೇಶವನ್ನು ಇನ್ನೂರು ವರ್ಷಗಳ ನಂತರವೂ ಈ ಕವಿ ಸ್ಮರಿಸಿರುವುದು ತನ್ನ ತಾಯಿಭೂಮಿಯ ಅಭಿಮಾನದಿಂದ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಯಾವನೇ ವ್ಯಕ್ತಿ ಜೀವನ ನಿರ್ವಹಣೆಗಾಗಿ ಎಲ್ಲಿ ಬೇಕಾದರೂ ಹೋಗಬಹುದು. ಅಂತಹ ಸಂದರ್ಭಗಳಲ್ಲಿಯೂ ಸಮಯ ಬಂದಾಗಲೆಲ್ಲಾ ತನ್ನ ತಾಯಿ ನೆಲವನ್ನು ಆತ ನೆನೆಯದಿರನು. ರಾಮಧಾನ್ಯ ಚರಿತೆ ಒಂದು ಸಂಘರ್ಷದ ಹಿನ್ನೆಲೆಯ ಕಾವ್ಯ, ಸಾಮಾಜಿಕ ಚಿತ್ರಣ, ಸಮಾಜ ಮತ್ತು ಅದರ ಬದುಕಿಗೆ ಹಚ್ಚಿದ ಪೌರಾಣಿಕ ಲೇಪನ, ನೆಗಳಿದವು ಬೊಂಬಾಳ ದೀವಿಗೆ ಝಗಝಗಿಪ ನವರತ್ನದೊಡುಗೆಯ ಹೊಗರೊಗುವ ಕೈದುಗಳ ಸುಭಟರು ಮುಂದೆ ಸಂದಣಿ ನೆಗಡಿ ಕರಗಳ ಪಾಠಕರು ಬಿರು