ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೧೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ಜಾನಪದ ಅಂಶಗಳು ೭೧೩ ದಾನಧರ್ಮಕ್ಕೆ ಹೆಸರಾದ ಸೌರಾಷ್ಟ್ರದಲ್ಲಿ ಎಲ್ಲೆಲ್ಲಿ ನೋಡಿದರೂ ಅರವಟ್ಟಿಗೆಗಳು ಕಂಡುಬರುತ್ತಿದ್ದವು. ಆ ದ್ವಾರಾವತಿಯ ನಾಡಿನಲ್ಲಿ ಮಳೆಗಾಲದಲ್ಲಿ ಮಾತ್ರ ತುಂಬಿ ಬೇಸಗೆಯಲ್ಲಿ ಕಾಲುಹೊಳೆಯಾದವೆಂಬ ಅಪವಾದಕ್ಕೆಡೆ ಮಾಡದೆ ಕಾಲುವೆಗಳ ತೂಬಿಂದ ಹೊರಟ ನೀರು ಸದಾ ಇಳೆಯಗಲ ಚಲಿಸುವುದು. ಇಂಥ ನಾಡಿನಲ್ಲಿ ರಮಣಿಯರು : ನಾಗವಲ್ಲಿಯಪರ್ಣ ಚೂರ್ಣಸುಕರ್ಪೂರ ಪೂಗ ಸಂಭಾಗ ತಾಂಬೂಲ ರಾಗಪೂರಿತ ಗಂಧಕುಸುಮಂಗಳಿಂದೆಲ್ಲ ಭೋಗವೀವರು ಪಾರ್ವರಿಗೆ || ಹೀಗೆ ಆರಂಭದಲ್ಲಿಯೇ ಸೌರಾಷ್ಟ್ರ ವರ್ಣನೆಯ ನೆಪದಲ್ಲಿ ಕನಕದಾಸರು ಸುಂದರ ಜನಜೀವನದ, ಸುಖಸಂತೃಪ್ತಿಗಳ, ಭೋಗಭಾಗ್ರಗಳ ಮನೋಹರವಾದ ನಾಡಿನ ಚಿತ್ರವನ್ನು ನೀಡುತ್ತಾರೆ. ಆಗಿನ ವ್ಯವಸಾಯ ಪದ್ಧತಿ, ಜನೋಪಕಾರದೃಷ್ಟಿ ಕೆರೆಕಟ್ಟೆ ಕಾಲುವೆಗಳ ವೈಖರಿ. ಅತಿಥಿಸತ್ಕಾರ, ತಾಂಬೂಲದ ಮೋಜುಗಳುಜಾನಪದದ ಹಿನ್ನೆಲೆಯನ್ನು ಪಡೆದುಕೊಳ್ಳುತ್ತವೆ. ಕಾವ್ಯದ ಮುಂದಿನ ಭಾಗಗಳಲ್ಲಿ ಜಾನಪದ ಅಧ್ಯಯನಕ್ಕೆ ಪೂರಕವಾಗುವ ಅನೇಕ ಅಂಶಗಳು ಬರುತ್ತವೆ. ಜಾನಪದ ನಂಬಿಕೆಗಳ ಸಾಲಿನಲ್ಲಿ ಶಕುನಗಳ ಪಾತ್ರವೂ ದೊಡ್ಡದೇ, ಮದನನು ಶಿವನನ್ನು ವಿಚಲಿತಗೊಳಿಸಲು ಸಾಗುವ ಸಂದರ್ಭದಲ್ಲಿ ಕೆಲವು ಶಕುನಗಳು ತೋರಿಬರುವುದನ್ನು ಕವಿ ಸೂಚಿಸುತ್ತಾನೆ: ತೋಟಿತು ವಾಮಸನೆಡಗಡೆಯಡದಿಂದೆ ಹಾಳೆತು ಹಂಗ ದಕ್ಷಿಣಕೆ ದೂಟೆತು ಬಲದ ಭಾಗದೆ ಪಲ್ಲಿ ಮುಂಗಟ್ಟಿ ಪಾಟೆತುವಾಸುಗಿನಕ್ಕಿ || (೬-೨೫) | ಗಾದೆಗಳು ಜನಪದ ಸಾಹಿತ್ಯದ ಅತ್ಯಂತ ಸಾರವತ್ತಾದ ಭಾಗ, ಎಲ್ಲ ಪ್ರಾಚೀನ ಕವಿಗಳಲ್ಲೂ ಗಾದೆಗಳ ಬಳಕೆಯನ್ನು ಕಾಣಲಾಗುವುದಿಲ್ಲ. ಗಾದೆಗಳ ಬಳಕೆಯಿಂದ ಕಾವ್ಯದ ಶೈಲಿಗೆ ಓಜಸ್ಸು ಬರುತ್ತದೆ ; ಶಕ್ತಿ ಬರುತ್ತದೆ. ನಯಸೇನನಂಥ ಕವಿ ಗಾದೆಗಳ ಭಂಡಾರವನ್ನೇ ಸೂರೆಮಾಡಿರುವುದುಂಟು. ರಾಘವಾಂಕ ಕುಮಾರವ್ಯಾಸರು ಹದವರಿತು ಗಾದೆಗಳನ್ನು ಬಳಸುತ್ತಾರೆ. ಆಡುನುಡಿಯ ಸಹಜ ಸೌಂದರ್ಯ ಗಾದೆಗಳಿಂದ ವರ್ಧಿಸುತ್ತದೆ. ಕವಿ ಕನಕದಾಸರು 'ಮೋಹನ ತರಂಗಿಣಿ'ಯಲ್ಲಿ ಧಾರಾಳವಾಗಿ ಗಾದೆಗಳನ್ನು ಬಳಸಿ ತಮ್ಮ ಕಾವ್ಯಶೈಲಿಗೆ ವಿಶೇಷ ಸತ್ವವನ್ನು ತುಂಬಿದ್ದಾರೆ. ಕೆಲವು ಗಾದೆಗಳನ್ನು ಇಲ್ಲಿ ಉಲ್ಲೇಖಿಸಬಹುದು : ೧. ಕೊಡವಾಲು ಪುಳಿವೆರೆದಳೆವುದಲ್ಲದೆ ಪಾ ಇಡಲು ನಾಶವನೈದುವುದೆ (ಪು. ೨೯) ೨. ಸುಣ್ಣ ಕಲ್ನುಡಿಗಟ್ಟಿ ಮಡುವಿನೊಳಿದಂತೆ - (ಪು. ೭೬) ೩. ಆವಕಾಲವನಾದೊಡೆ ಮೀರಿ ಬಪ್ಪುದು ಸಾವಕಾಲವ ಮೀಬಹುದೆ | (ಪು. ೮೯) ೪. ತಲೆ ಬಲ್ಲಿತೆಂದು ಕಲ್ಲನೆ ಹಾಯಬೇಡ (ಪು. ೧೦೬) ಕರಗಸವೆತ್ತ ಕದಳಿಯೆತ್ತ (ಪು. ೧೦೯) ಪಾಪಕ್ಷಯಕ್ಕೆಂದು ಗಂಗೆಯೊಳ್ ಮಿಂದರೆ ಪಾಪಿಯ ಮೊಸಳೆ ತಿಂದಂತೆ (ಪು. ೧೧೭) ಒಗೆತನ ಬಿಟ್ಟು ಹೋಹಾಗ ಹಾಲಿಗೆ ಹೆಪ್ಪ ಮೊಗೆದಿಕ್ಕಿದವರಾರುಂಟು (ಪು. ೧೨೪) ೮. ಕಣ್ಣಿರಿಯದಿರ್ದೊಡೇನು ಕರುಳೇಬಲ್ಲುದು (ಪು. ೧೮೧) ೯. ಕಂಡುದ ನುಡಿದರೆ ಕೋಪವೆ ? (ಪು. ೧೬೩) ೧೦. ಕನಸಿನ ಭತ್ತಕ್ಕೆ ಗೋಣಿಯನಾಂತರು (ಪು. ೩೮೪) ೧೧. ವಿಷಯಾತುರಗೆ ವಿವೇಕವಿಲ್ಲ (ಪು. ೪೨೮) ೧೨. ಎಳವಾಟ ಬಲ್ಲಿಗೆ ಬಂದರೆ ಸೀಗೆಯ ಮೆಳೆಯೊಳು ಮಥನವೆ (ಪು. ೪೬೪) ಇಂಥ ಸೊಗಸಾದ ಗಾದೆಗಳು 'ಮೋಹನ ತರಂಗಿಣಿ'ಯಲ್ಲಿ ಮೇಲಿಂದ ಮೇಲೆ ಬಳಕೆಗೊಂಡು ನಮ್ಮ ಮನಸ್ಸನ್ನು ಸೆಳೆದುಕೊಳ್ಳುತ್ತವೆ. ಆಯಾ ಸನ್ನಿವೇಶಕ್ಕೆ ವಿಶಿಷ್ಟ ಅರ್ಥ ಸೌಂದರ್ಯವನ್ನು ಒದಗಿಸುತ್ತವೆ. ಕನಕದಾಸರ ಶೈಲಿಯ ago ಎಡದೋಳುಹಾಟೆತು ವಾಮಲೋಚನ ಬೆಂ ಬೆಡದಲುಗಿತು ಮುಂದೆ ನೋಡೆ ಗಿಡುವೆದ್ದು ಸರಿದುದು ಮನ್ಮಥ ಬಲಗೂಡಿ ನಡೆವಾಗಲೇನ ಹೇಳುವೆನು ||(೬-೨೬) ಕಾಗೆ, ಹಲ್ಲಿ, ಎಡದೋಳು, ಎಡಗಣ್ಣುಗಳ ಶಕುನ ಇಂದಿಗೂ ಜನತೆಯಲ್ಲಿ ಪ್ರಬಲ ನಂಬಿಕೆಗಳಾಗಿ ಉಳಿದುಬಂದಿರುವುದನ್ನು ಕಾಣಬಹುದು.