ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೦ ಕನಕ ಸಾಹಿತ್ಯ ದರ್ಶನ-೧ ೭೨೧ ಮಾಹಿತಿಗಳನ್ನು ತಂದಿರುವುದರಿಂದ ಕಾವ್ಯದ ಸೊಗಸು ಹೆಚ್ಚಿದೆ. ಜಾನಪದ ದೃಷ್ಟಿಯಿಂದ ಈ ಕಾವ್ಯಕ್ಕೆ ಒಂದು ಮಹತ್ವದ ಸ್ಥಾನ ಲಭ್ಯವಾಗುತ್ತದೆ. ಕನಕದಾಸರ ಕೀರ್ತನೆಗಳು ಹಾಗೂ ಕಾವ್ಯಗಳು ಜಾನಪದ ಪ್ರಭಾವದಿಂದ ದೂರವಿರಲು ಸಾಧ್ಯವಿಲ್ಲ. ಏಕೆಂದರೆ ಈ ಕವಿ ಜನಪದರ ನಡುವೆಯೇ ಬಾಳಿ ಬದುಕಿದವನು. ಜನಪದ ಸಂಪ್ರದಾಯಗಳಲ್ಲಿ ನೇರವಾಗಿ ಬೆರೆತವನು. ಆದುದರಿಂದಲೇ ಅವನ ಕೃತಿಗಳಲ್ಲಿ ಜಾನಪದ ಹೇರಳವಾಗಿ ಕಂಡುಬಂದು ಕವಿಗೆ ಈ ದೃಷ್ಟಿಯಿಂದ ಒಂದು ಗಣ್ಯಸ್ಥಾನವನ್ನು ತಂದುಕೊಟ್ಟಿದೆ. ಕನಕದಾಸರ ಕೃತಿಗಳಲ್ಲಿ ವಿಡಂಬನೆ ಡಾ. ಪದ್ಮಾ ಶೇಖರ್ ವಿಡಂಬನೆ ಸೂಕ್ಷಜನ ಸಹಜ ಪ್ರವೃತ್ತಿ, ಸಮಸ್ತ ದೋಷಗಳು ವಿಡಂಬಕನ ಬತ್ತಳಿಕೆಯ ಅಸ್ತ್ರಗಳು, ಮಾನವನೇನು ದೇವನೂ ಇವುಗಳಿಂದ ತಪ್ಪಿಸಿಕೊಳ್ಳಲಾರನು. ಈ ಅಸ್ತ್ರಗಳಲ್ಲಿ ರೊಚ್ಚಿನ ಕಾವಿರುತ್ತದೆ ; ಹಾಸ್ಯದ ಹೊನಲಿರುತ್ತದೆ ; ವ್ಯಂಗ್ಯದ ಮೊನಚಿರುತ್ತದೆ ; ಮಾರ್ಮಿಕ ಸತ್ಯದ ಧ್ವನಿಯಿರುತ್ತದೆ. ವಿಡಂಬಕ ಕವಿಮನದವನಾಗಿದ್ದರಂತೂ ಅದಕ್ಕೊಂದು ಹೊಸ ಛಾಪು, ಹುರುಪು, ತೀಕ್ಷತೆಯ ಸೊಗಸು ಬರುತ್ತದೆ. ಯಶಸ್ವೀ ವಿಡಂಬನೆಯಲ್ಲಿ ಕಲಾವಂತಿಕೆ, ನ್ಯಾಯಬುದ್ದಿ, ಆತ್ಮಶೋಧನೆಯ ಗುಣ ಇರುತ್ತದೆ. ಇದು ಬರೀ ಭೂಮದ ಹಾಡಲ್ಲ, ಬೀಭತ್ಸವಲ್ಲ, ಬರೀ ಸಿಟ್ಟಿನ ರಗಳೆಯಲ್ಲ, ಸಿಟ್ಟಿನೊಡನೆ ಸ್ವಾಭಿಮಾನವನ್ನು ತುಸು ವಿನೋದವನ್ನು ಕೂಡಿಸಿದಾಗ ಹುಟ್ಟಿಬರುವ ಅಪಹಾಸವು (Ridicule) ಅಲ್ಲ. ವಿಡಂಬನೆಯ ಅಣಕಕ್ಕೆ ಸಮೀಪವಾಗಿದ್ದರೂ ಅದರಲ್ಲಿ ವಿನೋದದ ಅಂಶ ಇನ್ನೂ ಹೆಚ್ಚಾಗಿರುತ್ತದೆ, ಸಾತ್ವಿಕ ಕೋಪವೂ ತುಸುಮಟ್ಟಿಗೆ ಅದರಲ್ಲಿ ಕೂಡಿರುತ್ತದೆ. ಸ್ವಾಭಿಮಾನವು ಮಾತ್ರ ಅದೃಶ್ಯ ವಿನೋದ ಸ್ವಾಭಿಮಾನ ಮತ್ತು ಕೋಪ ಈ ಮೂರರ ಸಮ್ಮಿಶ್ರಣದ ಮೇಲೆ ವಿಡಂಬನೆಯ ಸ್ವಭಾವ ಗುಣದ ನಿರ್ಣಯವಾಗುತ್ತದೆ”.೧ ಚತುರೋಕ್ತಿ ಬಹುಪಾಲು ವಿಡಂಬನೆಯ ಮೂಲಸೆಲೆ. ಇದನ್ನು ಅವಲಂಬಿಸಿಯೆ ಶಬ್ದಾರ್ಥ ಭಾವ ಶೇಷಗಳು ಸಂದರ್ಭಕ್ಕನುಗುಣವಾಗಿ ಅನಂತ ರೂಪವನ್ನು ಧರಿಸುತ್ತ ಹೋಗುವುದನ್ನು ಗಮನಿಸಬಹುದು. ವಿಡಂಬಕನ ಗುರಿ ಲೋಕದ ಡೊಂಕನ್ನು ತಿದ್ದುವುದು. ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸುವುದು. ಹಾಗೆಂದು ಆತ ಉಪದೇಶ ಮಾಡಲಾರ. ಉಪದೇಶಗಳ ಪ್ರಭಾವ ಪರಿಣಾಮಗಳ ಹುಸಿ ಬೆದರಿಕೆಗಳನ್ನು ಅವನು ಚೆನ್ನಾಗಿ ೧. ಎಂ.ಎಸ್/ ಸುಂಕಾಪುರ, 'ಕನ್ನಡದಲ್ಲಿ ಹಾಸ್ಯ, ಧಾರವಾಡ, ೧೯೬೯, ಪು. ೮೦.