ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೨ ಕನಕ ಸಾಹಿತ್ಯ ದರ್ಶನ-೧ ಕನಕದಾಸರ ಕೃತಿಗಳಲ್ಲಿ ವಿಡಂಬನೆ ೨೩ ಬಲ್ಲ. ಆದ್ದರಿಂದಲೇ ಮಾತಿನ ಪೆಟ್ಟು ಕೊಟ್ಟು ಮನಸ್ಸನ್ನೇ ಪರಿವರ್ತಿಸುವ ಹವಣಿಕೆ ಅವನದು. ಅವನು ಏಕಕಾಲದಲ್ಲಿ ಸಹೃದಯನು, ಸ್ವಚ್ಛ ಮನಸ್ಸಿನನು, ಆದರ್ಶದ ಹಂಬಲಿಕೆಯವನು, ಸರ್ವಹಿತ ಮುಖಂಡ ; ಸಮಾಜದ ಮಾನಸಿಕ ಜಗತ್ತಿನ ಜಾಲಗಾರ”. ಇದೇ ಸಂದರ್ಭದಲ್ಲಿ ಟೆಲ್‌ಟೈನ್ ಹೇಳಿರುವ “A little wit and great deal of ill-nature will furnish a men for satire but the greatest instance of wit is to commend well” ಎಂಬ ಮಾತನ್ನು ನೆನಪಿಸಿಕೊಳ್ಳಬಹುದು. ಒಟ್ಟಾರೆ ಜೀವನದ ಲೋಪದೋಷಗಳನ್ನು ತಲಸ್ಪರ್ಶಿಯಾಗಿ ವಿಡಂಬಕ ಎತ್ತಿತೋರಿಸುವ ಸಾಹಸ ಮಾಡುತ್ತಾನೆ. ಹೀಗೆ ಮಾಡುವುದರಲ್ಲಿ ಅವನಿಗೆ ವಿಶೇಷ ಮನೋಧೈರ್ಯ ಇರಬೇಕಾಗುತ್ತದೆ. ಈ ಎಲ್ಲ ನಿಟ್ಟಿನಲ್ಲಿ ಕನಕದಾಸರು ನಮಗೆ ಅದ್ವಿತೀಯ ವಿಡಂಬಕರಾಗಿ ತಮ್ಮೆಲ್ಲ ಕೃತಿಗಳಲ್ಲಿ ಕಾಣಸಿಗುತ್ತಾರೆ. ಕನಕದಾಸರು ದಾಸಶ್ರೇಷ್ಠರು. ಈ ಮಾತು ಇದ್ದಕ್ಕಿದ್ದಂತೆ ಮೂಡಿ ಬಂದುದಲ್ಲ ಅವರು ತಮ್ಮ ಸಾಧನೆ ಶ್ರಮದಿಂದ ಪಡೆದದ್ದು. ಪರಂಪರೆಯ ಶೂದ್ರತ್ವದ ನೋವನ್ನು ನಿವಾರಿಸಿಕೊಂಡು ಮಾನವತ್ವಗುಣಗಳಿಂದ ದೈವತ್ವವನ್ನು ಏರಿದ್ದರಿಂದ ಗಳಿಸಿಕೊಂಡದ್ದು. ಅವರ ಸೂಕ್ಷಾವಲೋಕನದ ಕಣ್ಣಿಗೆ, ತಾನು ಕಂಡು ಅನುಭವಿಸಿದ ಜೀವನದ ನಾನಾ ನೋವಿನ ಹೆಜ್ಜೆಗಳು, ಸಮಾಜದ ವೈಷಮ್ಯ ವೈದೃಶ್ಯಗಳೂ ವಿಡಂಬಕ ವಸ್ತುಗಳಾಗಿ ಪರಿಣಮಿಸಿವೆ. ಕನಕದಾಸರ ಕೀರ್ತನೆಗಳು ವಿಡಂಬನೆಗಳ ವಿಪುಲಾಗರ. ಅಲ್ಲೆಲ್ಲ ಅವರು ತಮ್ಮ ಅಂತರಂಗವನ್ನು ಶೋಧಿಸಿಕೊಳ್ಳುವುದರ ಜೊತೆಗೆ ತಮ್ಮ ಆರಾಧ್ಯ ದೈವವನ್ನು ಛೇಡಿಸಲು ಹಿಂದೆಗೆಯುವುದಿಲ್ಲ. 'ರಾಮಧಾನ್ಯ ಚರಿತ್ರೆ'ಯಂತೂ ವಿಡಂಬನೆಯ ಆಡುಂಬೊಲ, ಇವರ ಉಳಿದ ಕೃತಿಗಳಲ್ಲಿ ವಿಡಂಬನೆಯ ಹೊಳಹುಗಳಿದ್ದರೂ ಅವೆಲ್ಲ ಪ್ರಧಾನವಾಗಿ ಕನಕದಾಸರ ಭಕ್ತಿಯ ಪರಾಕಾಷ್ಠತೆ, ಧಾರ್ಮಿಕ ಪ್ರವೃತ್ತಿಗೇ ಹೆಚ್ಚು ಮೀಸಲಾದಂತೆ ತೋರುತ್ತದೆ. ಅವನ್ನೆಲ್ಲ ತಮ್ಮ ನಿಕಷಮತಿಯಿಂದ ಒರೆಹಚ್ಚಿ ವಿಡಂಬಿಸುವುದರ ಮೂಲಕ ಸತ್ಯವನ್ನು ಸಾರ್ವತ್ರಿಕವಾಗಿ ಬಯಲುಗೊಳಿಸಿದ್ದಾರೆ. 'ರಾಮಧಾನ್ಯ ಚರಿತ್ರೆ' ಮೇಲುನೋಟಕ್ಕೆ ರಾಗಿಯ ಶ್ರೇಷ್ಠತೆಯನ್ನು ಒತ್ತಿ ಹೇಳುವ ಭತ್ತದ ಅಹಂಕಾರವನ್ನು ಬಯಲಿಗಿಡುವ ಹಾಸ್ಯಮಯ ಸುಂದರ ಪುಟ್ಟ ಕಾವ್ಯ, ರಾಮನ ಪಾತ್ರವಿಲ್ಲಿ ನಿಮಿತ್ತ ಮಾತ್ರ ಇವನಿಲ್ಲಿ ಒಂದರ್ಥದಲ್ಲಿ ನ್ಯಾಯ ಮೂರ್ತಿ, ದೈವಾಂಶದ ಪ್ರತಿರೂಪ. ಅವನೆದುರೇ ರಾಗಿಯ ಪರೀಕ್ಷೆ ನಡೆದದ್ದು ಅದರ ಮಹತ್ವಕ್ಕೆ ಸಾಕ್ಷಿ. ಇದಕ್ಕೊಂದು ದೈವತ್ವದ ಮುಖವನ್ನು ರೂಪಿಸಿ, ಅದರ ಸಾರ್ವತ್ರಿಕ ಮೇಲೆಯನ್ನು ಅನಿವಾಯ್ಯತೆಯನ್ನು ಮನದಟ್ಟು ಮಾಡಿಕೊಡುವುದೇ ಕವಿಯ ಆಶಯ. ಹಾಗೆ ನೋಡಿದರೆ ಇಲ್ಲಿಯ ರಾಗಿಯ ಮತ್ತು ಭತ್ತದ ಪಾತ್ರಗಳು ಕೇವಲ ಸಂಕೇತಗಳಷ್ಟೆ ನಮ್ಮ ಸಾಮಾಜಿಕ ವ್ಯವಸ್ಥೆಯ ದುರಂತತೆಯ ಪ್ರತಿಬಿಂಬಗಳಿವು, ನಿರಂತರವಾಗಿ ನಮ್ಮನ್ನು ಬೆನ್ನಟ್ಟುತ್ತ ಬಂದಿರುವ ಭೂತಗಳು. ಮೇಲು ವರ್ಗದ ಪುರೋಹಿತಶಾಹಿತ್ವದ ಪ್ರತಿನಿಧಿಯಾಗಿ ಭತ್ತವೂ, ಕೆಳಸ್ತರದವರ ಪ್ರತಿನಿಧಿಯಾಗಿ ರಾಗಿಯೂ ಇಲ್ಲಿ ಚಿತ್ರಿತವಾಗಿವೆ. ಇವೆರಡೂ ಅತ್ಯಂತ ಮಾರ್ಮಿಕವಾಗಿ ಕಲಹವಾಡುತ್ತವೆ. ಇವುಗಳ ಮೂಲಕ ಕವಿ ಕನಕದಾಸರು ತಮ್ಮ ಕಾಲದ ಸಾಮಾಜಿಕ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಾರೆ. ರಾಗಿ ಭತ್ತಗಳ ಜಗಳ ಜರುಗುವುದೇ ಒಂದು ವಿಶಿಷ್ಟ ಸಂದರ್ಭದಲ್ಲಿ. ರಾವಣಾದಿ ರಕ್ಕಸರನ್ನು ಕೊಂದು, ಸೀತೆ ಲಕ್ಷ್ಮಣರೊಡಗೂಡಿ ಅಯೋಧ್ಯೆಗೆ ತೆರಳುವ ಮಾರ್ಗ ಮಧ್ಯದಲ್ಲಿ ರಾಮ ಗೌತಮಮುನಿಯ ಆಶ್ರಮದಲ್ಲಿ ಬೀಡುಬಿಟ್ಟ ಸನ್ನಿವೇಶದಲ್ಲಿ, ಹೊಸಧಾನ್ಯದ ಭಕ್ಷದ ರುಚಿಗಾಗಿ ರಾಮನು ಒಡ್ಡಿದ ಬೇಡಿಕೆಗೆ ಗೌತಮರು ತರಿಸಿದ ನವಧಾನ್ಯಗಳಲ್ಲಿ ರಾಮ ಮೆಚ್ಚುಗೆ ಸೂಚಿಸಿದ್ದು, ಗೌತಮರು ಏಕಮೇವಾದ್ವಿತೀಯವೆಂದು ಹೊಗಳಿದ್ದು ರಾಗಿಯನ್ನು, ಸಹಜವಾಗಿ ಇದರಿಂದ ಭತ್ತಕ್ಕೆ ಕೋಪ. ಫಲವಾಗಿ ರಾಗಿಗೆ “ಕುಲಹೀನ”, “ಶೂದ್ರಾನ್ನ”, “ಮತಿಹೀನ” ಎಂಬ ಹಲವು ನಿಂದನೆಪೂರಿತ ತಿರಸ್ಕಾರಗಳ ಸುರಿಮಳೆ, ಶುಭ ಸಮಾರಂಭ, ಯಜ್ಞಯಾಗಾದಿಗಳಲ್ಲಿ ತನಗೆ ಸಲ್ಲುವ ಪ್ರಥಮ ಪ್ರಶಸ್ಯಗಳಿಂದ “ತಾ ಯೋಗ್ಯ” ಎಂಬುದು ಭತ್ತದ ಹೆಗ್ಗಳಿಕೆ. ಭತ್ತ ಹೇಳುವ ಈ ಒಂದೊಂದು ಮಾತಿನಲ್ಲೂ ಮೇಲುವರ್ಗದ ಉಚ್ಚಾಯ ಸ್ಥಿತಿ, ಸ್ವಾಮ್ಯಪ್ರವೃತ್ತಿ, ಒಣಹೆಮ್ಮೆ, ದುರಹಂಕಾರಗಳು ಮೊಳಗುತ್ತವೆ. ರಾಗಿಯೂ ಸುಮ್ಮನಿರುವುದಿಲ್ಲ. ತನ್ನ ನಿಸ್ವಾರ್ಥ ಮೂಲವನ್ನು ಬಯಲಿಗಿಡುತ್ತದೆ. ಭತ್ತವನ್ನು “ನುಡಿಗೆ ಹೇಸದ ಭಂಡ” ಎಂದು ಛೇಡಿಸುವ ಪರಿಯನ್ನು ಕನಕದಾಸರು ಹೀಗೆ ಕಂಡರಿಸಿದ್ದಾರೆ: ಸತ್ಯಹೀನನು ಬಡವರನು ಕ ಣ್ಣೆತ್ತಿ ನೋಡೆ ಧನಾಡ್ಯರನು ಬೆಂ ಬತ್ತಿ ನಡೆವವುಪೇಕ್ಷೆ ನಿನ್ನದು ಹೇಳಲೇನದನು ಹೆತ್ತ ಬಾಣಂತಿಯರು ರೋಗಿಗೆ ೨. ಪೂರ್ವೋಕ್ತ ಪು. ೭೮