ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೪೪ ಕನಕ ಸಾಹಿತ್ಯ ದರ್ಶನ-೧ ಕನಕದಾಸರಲ್ಲಿ ಬಂಡಾಯದ ದನಿ ೭೪೫ / ಪುರಾಣದಲ್ಲಿರಲಿ ವಾಸ್ತವತೆಯಲ್ಲಿರಲಿ ಪ್ರತೀಕ್ಷಿಸಲೇಬೇಕು. ನಮ್ಮ ಪರ೦ಪರೆಯಲ್ಲಿ ಉ ಪ ದೇಶ ಮತ್ತು ಬದುಕು ಅಗಲಕ್ಕೆ ಬಿರುಕುಗೊಂಡಿರುವುದರಿಂದ ನಮಗೆ ವ್ಯಕ್ತಿ-ವ್ಯಕ್ತಿತ್ವಗಳು ; ಸ್ವಂತ ಮತ್ತು ಸಂಸ್ಕೃತಿಗಳು ಅರ್ಥವಾಗದಿರುವ ಸನ್ನಿವೇಶದಲ್ಲಿ ಈ ಬಗೆಯ ಸ್ಪಷ್ಟತೆ ಅತ್ಯಂತ ಅನಿವಾರ್ಯವೆ. ಭಾರತದ ಜಾತಿ ಮತ್ತು ಸಂಸ್ಕೃತಿ ಶ್ರೇಣಿಯಲ್ಲಿ ಏರುಮುಖ ಪ್ರಗತಿ (Vertical progress) ಇದೆಯೆ ಹೊರತು ಭೂಮಿಯ ಮಟ್ಟ-ತುಂಬ ಹರಡಿಕೊಳ್ಳುವ ಪ್ರಗತಿಯ ಮಾದರಿಗಳು ಇಲ್ಲ. ಈ ಏರುಮುಖ ಪ್ರಗತಿ ಮತ್ತೊಂದು ಸಿದ್ಧ ಮತ್ತು ಸ್ತಬ್ಧ ಜಾತಿ ವ್ಯವಸ್ಥೆಯನ್ನು ತಲುಪುವುದಾಗಿದೆಯೆ ಹೊರತು ಅದರಾಚೆಗೆ ಭಾರತೀಯನು ಭಾವಿಸಿಕೊಳ್ಳುವುದಕ್ಕೆ ಏನೇನೂ ಇಲ್ಲ ಎನ್ನುವಷ್ಟರ ಮಟ್ಟಿನ ದೃಷ್ಟಿಹೀನತೆ, ಕ್ರಿಯಾಶೂನ್ಯ ಹಾಗೂ ಸತ್ವರಾಹಿತ್ಯ ಉಂಟಾಗಿದೆ. ಕರ್ನಾಟಕದ ಸಾಹಿತ್ಯ ಸಂದರ್ಭದಲ್ಲಿ ಹನ್ನೆರಡನೆಯ ಶತಮಾನದಲ್ಲಿ ವಚನಕಾರರಿಂದ ಇದರಲ್ಲಿ ಒಂದು ಬ್ರೇಕ್ ಉಂಟಾಯಿತು. ಆದರೆ ಅದೆ ಚಳುವಳಿ ಜಾತಿಯಾಗುವ ಭಯಕ್ಕೆ ಒಳಗಾಯಿತು. ನಮ್ಮ ಕಳಚಿಕೊಳ್ಳಲಾರದ ಜಾತಿ ಸರಪಳಿಯಲ್ಲಿ ಒಂದು ಕೊಂಡಿಯಾಗಿ ಮತ್ತೊಂದು ತೊಡಕು ಉಂಟಾಯಿತು. ಭಾರತಕ್ಕೆ ಅನ್ಯದೇಶೀಯ ಚಿಂತನ ಪರಿಭಾವಗಳ ಆಮದು ಆದಮೇಲೂ ಸ್ಥಿತಿ ಏನೂ ಬದಲಾಗಲಿಲ್ಲ. ಇಷ್ಟಿದ್ದೂ ಅಲ್ಲಲ್ಲಿ ಈಗಿರುವ ನಮ್ಮ ಪ್ರಗತಿಯ ಮಾದರಿಗಳು ಮುಗಿದಿವೆ. ನಮಗೆ ಬೇರೆಯದೆ ರೀತಿಯ ಮಾದರಿಗಳು ಬೇಕು ಎನ್ನುವ ವಾಸ್ತವತೆ ಕಣ್ಣಿಗೆ ಕಟ್ಟದೆ ಇರಲಿಲ್ಲ. ಅದರ ಫಲವೆ ನಾವೀಗ ವಿಷಯಗಳ ಕುರಿತು ಸಮಾಜವಾದಿ, ಸಮನ್ವಯವಾದಿ, ಬಂಡಾಯವಾದಿ ಹಾಗೂ ಪುನರ್‌ಸೃಷ್ಟಿವಾದಿ ಧೋರಣೆಗಳನ್ನು ನಮ್ಮ ಪರಂಪರೆಯ ಪರೀಕ್ಷೆಗೆ ಹಚ್ಚುತ್ತಿದ್ದೇವೆ. ಕನಕದಾಸರು ಕೂಡ ಈ ನಮ್ಮ ಕ್ಲೀಷೆಗಳಿಗೆ ಒಳಗಾಗಿದ್ದಾರೆ ; ಅದು ಅವರು ಬದುಕಿದ ಯುಗಧರ್ಮದ ಕಾರಣವಾಗಿದ್ದಿರಬಹುದು ಅಥವಾ ನಮ್ಮ ವಿಶ್ಲೇಷಣೆಯ ಒರೆ ಆಗಿರಬಹುದು. ಪಡೆದು ಹೊರಟ ರಾವಣ ಬೆನ್ನ ಹಿಂದೆ ಪಾರ್ವತಿಗೆ ಬದಲಾಗಿ ಬೇರೆ ಭಯಂಕರವನ್ನು ಕಂಡಂತೆ, ನಮ್ಮ ಚಿಂತನೆಯ ಫಲ ಹೀಗೆ ರಾವಣ ತಪ್ಪಿನ ಫಲದಂತೆ ನೆಗೆಟಿವ್ ಆಗಬಾರದು. ಕನಕದಾಸರ ಸಂದರ್ಭದಲ್ಲಿ ಇದ್ದ ಬದುಕುವ ಉತ್ತಮ ಮಾದರಿಗಳೆಂದರೆ ಎರಡೇ, ಒಂದು, ಶ್ರೇಷ್ಠವೆಂಬ ಬ್ರಾಹ್ಮಣ್ಯದ ಕಡೆಗೆ ಹೋಗುವುದು. ಎರಡು, ಸ್ಥಳ ಬಿಡದಿರುವುದು. ಪ್ರತಿಸ್ಥಳ ಪಲ್ಲಟದಲ್ಲಿ ರಾಜ, ಮಂತ್ರಿ ಡಣಾಯಕ ಆಗುವುದೆಂದಾಗ ಕೂಡ ಬ್ರಾಹ್ಮಣ್ಯವನ್ನು ಅನುಸರಿಸುವುದು ಅನಿವಾರ್ಯವಾಗಿತ್ತು. ತಿಮ್ಮಪ್ಪನಾಯಕ ಹಿಂದೆ ಹೋಗುವುದಿಲ್ಲವೆಂದಾದರೆ ತಿಮ್ಮಪ್ಪ > ಕನಕ ; ಕನಕನಾಯಕ > ಕನಕದಾಸ ಆಗುವುದೇ ಅಂದಿನ ಅನಿವಾರ್ಯ ಕ್ರಿಯೆಯಾಗಿತ್ತು. ಮೂಲವನ್ನು ತೊರೆದುಬಿಡುವ ಮತ್ತು ಅದೇ ಸಂದರ್ಭದಲ್ಲಿ ಮಹಿಮಾನ್ವಿತನಾಗುವ ನಿಯಮ ಮಾತ್ರವೆ ಪ್ರಗತಿ, ಬಂಡಾಯ ಅಥವಾ ಅಭಿವೃದ್ಧಿ ಆಗಿರುತ್ತಿತ್ತು. ೧, ೪, ಕನಕದಾಸರ ಬಂಡಾಯದ ಹಂತಗಳು ಕನಕದಾಸರು ಮೂರು ಹಂತದಲ್ಲಿ ತಮ್ಮ ಮೂಲವನ್ನು ನಿರಾಕರಿಸಿದರು. ಆ ಮೂಲಕ ತಮ್ಮ ಸ್ಥಿತಿಗೆ ಬಂಡಾಯವಾಗಿ ಮೇಲೆ ಬಂದರು. ಭಾರತೀಯ ತಾತ್ವಿಕ ನಿಲುವಿನಲ್ಲಿ ಉತ್ತಮರು, ಕೊಳೆಯನ್ನು ತೊಳಕೊಂಡವರಾದರು. ಕನಕದಾಸರಾಗಲು ಮೂಲ ನೆಲೆಯಿಂದ ಹುಟ್ಟುವ ಮೊದಲೆ ಹೊರಬಿದ್ದು ವಿಶಿಷ್ಟರಾದರು. ಅವರು, ಬಹಳ ಕಾಲ ತಂದೆತಾಯಿಗಳಿಗೆ ಮಕ್ಕಳಾಗದೆ ಇದ್ದು; ತಿರುಪತಿ ವೆಂಕಟರಮಣನ ವರದಿಂದ ಹುಟ್ಟಿದವರೆಂದು ಐತಿಹೀಕರಿಸಲಾಯಿತು. ಅಲ್ಲಿಂದಲೆ ಅವರು ಪರಿಶಿಷ್ಟತೆ ಕಳಚಿ ವಿಶಿಷ್ಟತೆಯ ಕಡೆಗೆ ಸಾಗಿದರು. ಮತ್ತೂ ಮುಂದುವರಿದಾಗ ನಾಯಕ, ನಿಧಿ ದೊರೆತ ಕನಕನಾಗಿ ಒಂದು ಜನಪದ ಪುರಾಣವೆ ಆದರು. ತಾವೇ ಒಂದು 'ಜನಪದ' ಹಾಗೂ ತಮ್ಮದೆ ಒಂದು 'ಜನಪದ'ವನ್ನು ಅವರು ಸೃಷ್ಟಿಸಿಕೊಂಡದ್ದು ಹೀಗೆ. ಹುಟ್ಟಿನಲ್ಲಿ ದಾಸನಾಗುವ, ಬದುಕಿನಲ್ಲಿ ದಾಸನಾಗುವ ಮತ್ತು ಕೆಟ್ಟಲ್ಲಿ ದಾಸನಾಗುವ, ಒಂದು ಶ್ರದ್ಧಾಪೂರ್ವಕ ಬಂಡಾಯದಲ್ಲಿ ಅವರು ಬೆಳೆದರು. ೧. ೩. ಸಮಕಾಲೀನ ಆದ್ಯತೆಗಳು ಮತ್ತು ಕನಕದಾಸರು ಅಂದು ಕನಕದಾಸರಿಗೆ ಇದ್ದ ಆದ್ಯತೆಗಳ ಬಗ್ಗೆ ಆಲೋಚಿಸದೆ ಅವರನ್ನು ಮುಟ್ಟುವುದು ಅಪಾಯ. ಹಾಗೆ ಮಾಡಿದರೆ ಕನಕದಾಸರು ನಮಗೆ ಕಾಣಬೇಕಾಗಿರುವುದಕ್ಕಿಂತ ಏನೇನೋ ಆಗಿ ಕಾಣಬಹುದು ; ಪಾರ್ವತಿಯನ್ನು ೨. ೧. ಬಂಡಾಯವೂ ಕನಕದಾಸರೂ ನಾವು ಈಗ ಬಂಡಾಯವನ್ನು ಪರಂಪರೆಯ ಹೊರಗೆ ನೋಡುತ್ತಿದ್ದೇವೆ. ಅದನ್ನು ಹೊರಗಿನ, ಒಂಟಿಯಾದ, ಭಾರತೀಯ ಪರಂಪರೆಗೆ ಜೋಡಿಸಿಕೊಳ್ಳದ