ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೪೮ ಕನಕ ಸಾಹಿತ್ಯ ದರ್ಶನ-೧ ೭ರ್೪ ತಾನೇ ನೇರವಾಗಿ ಅದನ್ನು ಸ್ವೀಕರಿಸದಿದ್ದರೆ ಅವನ ವ್ಯಕ್ತಿತ್ವ ಅಥವಾ ಅಭಿವ್ಯಕ್ತಿಗೆ ಮಾನ್ಯತೆ ಇರುವುದಿಲ್ಲ. ಈ ಒಂದು ಅವಾಂತರದಿಂದಾಗಿಯೆ ವಿಶ್ವಾಮಿತ್ರನಿಂದ ಆರಂಭಗೊಂಡು ಅನೇಕರು ಆ ಕಡೆಗೆ ಹೋಗಲು ಇನ್ನಿಲ್ಲದ ಪ್ರಯತ್ನವನ್ನು ನಡೆಸಿ ವಿಫಲರಾಗಿದ್ದಾರೆ. ಕಾರಣವಾಗಿ ತಿಮ್ಮಪ್ಪ ಕನಕದಾಸನಾಗದೆ ಔನತ್ಯದ ಹಿರಿಮೆ ಬರಲಾರದು. ಇದು ಕೇವಲ ಬದುಕಿನಿಂದಷ್ಟೆ ಸಾಧ್ಯವಾಗದು; ಹುಟ್ಟಿನಿಂದಲೆ ಸಾಧ್ಯವಾಗಬೇಕು. ಅದಾಗಿ ತಿಮ್ಮಪ್ಪ ತಿರುಪತಿ ಶ್ರೀವೆಂಕಟರಮಣ ದೇವರ ವರವಾಗಿ ಹುಟ್ಟಬೇಕಾಗುತ್ತದೆ. ಪರಿಣಾಮವಾಗಿ ಸಾಧನೆಯಲ್ಲಿ ಕೂಡ ಮೇಲಿನವರ ಸೇವೆಯನ್ನು ಅಗತ್ಯ ಮತ್ತು ಪವಿತ್ರವೃತ್ತಿಯನ್ನಾಗಿ ಒಪ್ಪಿಕೊಳ್ಳಬೇಕು. ಇದಕ್ಕಾಗಿ ಅವರು ತಮ್ಮ ವಾಸ್ತವದ ಹುಟ್ಟನ್ನೂ, ಬೆಳವಣಿಗೆಯನ್ನು ಕಳಚಿಕೊಳ್ಳಬೇಕಾಗುತ್ತದೆ. ಹಾಗೆ ಮಾಡುವಾಗ ತನ್ನ ನಿಜವಾದ ಹುಟ್ಟು ಮತ್ತು ಬದುಕನ್ನು ಪ್ರತಿಭಟಿಸಬೇಕಾಗುತ್ತದೆ. ಇದು ಆ ಸ್ತರದಲ್ಲಿ ಬಂಡಾಯ-ಅಭಿವೃದ್ಧಿ ಮತ್ತು ಮಾನವಿಯತೆ ಎನಿಸಿಕೊಳ್ಳುತ್ತದೆ. ಕನಕದಾಸರ ಗೀತೆಗಳಲ್ಲಾಗಲಿ, ರಾಮಧಾನ್ಯ ಚರಿತ್ರೆಯಲ್ಲಾಗಲಿ ಕಂಡುಬರುವ ಪ್ರತಿಭಟನೆ, ಬಂಡಾಯ ಈ ರೀತಿಯದು. ಅದನ್ನು ನಮ್ಮ ಓದುಗರು ಬ್ರಾಹ್ಮಣವಿರೋಧಿ ಎಂದಾಗಲೀ, ವರ್ಗ ಹೋರಾಟದ ಕರೆ ಎಂದಾಗಲಿ ಗ್ರಹಿಸುವುದು ಸರಿಯಲ್ಲ. ಇಂಥ ದೃಷ್ಟಿಕೋನ ಕನಕದಾಸರ ಜೀವನ ಮತ್ತು ಕೃತಿಯ ಮೇಲೆ ಮಾಡಿದ ಆರೋಪವಾಗುತ್ತದೆ. ವಸ್ತು ಆಶಯ ಮತ್ತು ವ್ಯಕ್ತಿ ಆಶಯಗಳಲ್ಲಿ ಹುಟ್ಟಿಕೊಂಡ ಬಾಹ್ಯಪ್ರತಿಭಟನೆ ಪರಂಪರೆಯ ಜೊತೆಗೆ ಹೊಂದಿಕೊಂಡು ಆಂತರಿಕ ಪ್ರತಿಭಟನೆ ಮತ್ತು ಘರ್ಷಣೆಯಾಗಿ ಪರಿಣಮಿಸುತ್ತದೆ. ಇದು ಸಮಾಜದಲ್ಲಿಯ ಪಾರಂಪರಿಕ ಘರ್ಷಣೆ ಮತ್ತು ಘರ್ಷಿತ ಜನ ವರ್ಗ ಮತ್ತು ಮೌಲ್ಯವನ್ನು ಮು೦ದುವರಿಸಿಕೊಂಡು ಹೋಗುವ ನಿರಂತರ ಪ್ರಕ್ರಿಯೆ. ಈ ಬಗೆಯ ಸಾಂಘಿಕ ಘರ್ಷಣೆ ಮತ್ತು ಮುಂದುವರಿಕೆಯನ್ನು ಅರ್ಥಮಾಡಿಕೊಳ್ಳದ ವಿಮರ್ಶಕರು ಕುವೆಂಪು ಬ್ರಾಹ್ಮಣವಿರೋಧಿ ಎಂದೋ ಅಥವಾ ಅವರು 'ಶೂದ್ರಶಾಹಿಯಿಂದ ಪುರೋಹಿತಶಾಹಿಯ ಕಡೆಗೆ' ಚಲಿಸಿದ್ದಾರೆಂದೋ ಹೇಳಿಬಿಟ್ಟಿದ್ದಾರೆ. ಕನಕದಾಸರಿಗೂ ಇದೇ ಸುಲಭ ಆರೋಪವನ್ನು ಎರಡು ಸ್ಥಿತಿಯಲ್ಲಿ ಮಾಡಿಬಿಡಬಹುದು. ಒಂದು ತಿಮ್ಮಪ್ಪದಾಸನಾದ ಅವಹೇಳನ, ಮತ್ತೊಂದು ತನ್ನ ಜನಾಂಗಕ್ಕೆ ಹಾಗೂ ವಾಸ್ತವ ಬದುಕಿಗೆ ಮಾಡಿದ ಅಪಮಾನ. ಇನ್ನೂ ತೀರಾ ಆಚೆಗೆ ಹೋಗಿ ವರ್ಗ ಸಂಘರ್ಷ ಎಂದು ಸುಲಭೀಕರಿಸಲೂಬಹುದು. ೨. ೪. ದರ್ಶನದ ಬೀಜ : ಕನಕ-ಕುವೆಂಪು ಹಾಗೆ ನೋಡಿದರೆ ಕುವೆಂಪು ಅವರ 'ರಾಮಾಯಣದರ್ಶನಂ' ಬೀಜ ಕನಕದಾಸರ ರಾಮಧಾನ್ಯಚರಿತ್ರೆಯಲ್ಲಿ : ಅರ್ಥಾತ್ ಕನಕದಾಸರಲ್ಲಿ ಇದೆ. ಸರಳಾರ್ಥದಲ್ಲಿ ಹೇಳುವುದಾದರೆ ಕನಕದಾಸರ ಪರಂಪರೆಯನ್ನು ಬಹು ದೊಡ್ಡದಾಗಿ ಹಾಗೂ ಮನೋಜ್ಞವಾಗಿ ಕುವೆಂಪು ಅವರು ಮುಂದುವರಿಸಿದ್ದಾರೆ. ಕನಕ ದಾಸ ರಲ್ಲಿ ಬೀಜ ಮಾತ್ರವಾದ ರಾಗಿ ರಪ ಕ ಕ್ರಿಂ ರಾಮಾಯಣದರ್ಶನಂನಲ್ಲಿ ಮೊಳೆತು ಮಕ್ಕಳಾದ ವ್ಯಕ್ತಿಗಳಾದವರು ಮಹಾವ್ಯಕ್ತಿಗಳಾಗುತ್ತಾರೆ. ಹೀಗೆ ಬೀಜ ವೃಕ್ಷ ಸಂಬಂಧ ಕನಕ-ಕುವೆಂಪು ಅವರಲ್ಲಿ ಸೂತ್ರಧಾರಿತ್ವವನ್ನು ವಹಿಸಿದೆ. ರಾಗಿ ರಾಘವನ ಕಡೆಗೆ ಕನಕದಾಸರಲ್ಲಿ ಚಲಿಸುವಂತೆ ಆ ಸಂಸ್ಕೃತಿಯ ಮಹಾ ಪ್ರತಿನಿಧಿಯಾದ ರಾವಣನೇ ರಾಮತ್ವದ ಕಡೆಗೆ 'ರಾಮಾಯಣ ದರ್ಶನಂ' ನಲ್ಲಿ ಚಲಿಸುತ್ತಾನೆ. ಈ ಎರಡೂ ಕಡೆ ೨. ೫. ಕಾಯುವ ಕಾಯಕ-ತಪಸ್ಸು-ಸಿದ್ಧತೆ ನಮ್ಮ ತಲೆಮಾರಿನ ಶೂದ್ರರ ಸಿಟ್ಟು, ಅವಸರ, ಅರಾಜಕತೆ ವಿಚಾರವನ್ನು ಪ್ರಾಯೋಗಿಕಗೊಳಿಸದೆ ಧ್ವಂಸ ಮಾಡಿಬಿಟ್ಟಿವೆ. ಹಾಗಾಗಿ ಸಾಧನೆ-ತಪಸ್ಸುಸಿದ್ದಿಗಳ ವಿಷಯದಲ್ಲಿ ನಾವು ಹಗುರವಾಗಿಯೆ ಮಾತನಾಡುತ್ತೇವೆ. ಕಾರಣ ಇವೆಲ್ಲ ಸಾಧನೆಗಳಿಗೆ ಮೂಲದ್ರವ್ಯವಾದ ಶ್ರದ್ದೆ ನಮ್ಮಲ್ಲಿ ಕಾಣುತ್ತಿಲ್ಲ. ಹಾಗಾಗಿ ನಮ್ಮ ಹಿಂದಿನ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಗಳನ್ನು ವಿಶ್ಲೇಷಿಸುವಾಗ ನಾವು ನೇರವಾಗಿ ಅವುಗಳ ಮೇಲೆ ಬಿದ್ದುಬಿಡುತ್ತೇವೆ. ಕಾರಣವಾಗಿ ಶೀಲಸ೦ಬ೦ಧಿಯಾಗಿ ಅವುಗಳನ್ನು ಅರ್ಥಮಾಡಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಕನಕದಾಸ-ಕುವೆಂಪು ಇವರನ್ನು ಅರ್ಥಮಾಡಿಕೊಳ್ಳುವಲ್ಲಿ ಕೂಡ ಇದೆ ಅಪಚಾರವನ್ನು ಮಾಡಿದ್ದೇವೆ. ಭಾರತೀಯ ಸಾಂಸ್ಕೃತಿಕ ಇತಿಹಾಸದ ಸಂದರ್ಭದಲ್ಲಿ ಶೂದ್ರಿ, ಬ್ರಾಹ್ಮಣವೊ ಆಂತರಿಕವಾಗದೆ ಯಾವುದಾದರೂ ಒಂದು ಹೊರಗೆ ನಿಂತಿದ್ದರೆ ಅದು ಖಂಡಿತ ನಾಶವಾಗಿ ಬಿಡುತ್ತಿತ್ತು. ಅದು ಜನಾಂಗಿಕ-ಸಾಂಸ್ಕೃತಿಕ ಕ್ರೂರತೆಯಾಗುತ್ತಿತ್ತು, ಅನೈಸರ್ಗಿಕವಾಗುತ್ತಿತ್ತು. “ಬಳಕೆಯ” ಒಂದೇ ಆಧಾರದ ಮೇಲೆ ಜನ, ಜಾತಿ, ವರ್ಗ, ಪರಿಸರ ಮತ್ತು ಪರಿಸ್ಥಿತಿಗಳನ್ನು ಸ್ವಂತಕ್ಕೆ