ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು {ಳಿದನು. ಅರ್ಜುನನು ವಿವರಿಸಿ ಹೇಳಿದನು, - ಉತ್ತರನಿಗೆ ಬೆರಗು ; ಬೆರಗಿನ ಜೊತೆಗೆ ಸಂಶಯ. “ಪಾಂಡವರ ಈ ಗುಟ್ಟನ್ನು ಬಲ್ಲ ನೀನು ಯಾರು ? ಅರ್ಜುನನೇ ? ಭೀಮನೆ ? ನಕುಲನೇ ? ಸಹದೇವನ ? ಮಹಾತ್ಮಾನಾದ ಯುಧಿಷ್ಟರನೆ ? ಆಥವಾ ಅವರ ಬಂಧುವೆ ? ತಿಳಿಸು” ಎಂದು ಬೇಡಿದನು. ಆಗ ಆತನು, “ ಹೌದು, ನಾನು ಅರ್ಜುನ. ಕಂಕಯತಿ ಯುಧಿಷ್ಠಿರ ; ಬಾಣಸದ ವಲಲನ ಭೀಮ ; ನಿಮ್ಮ ಗೋಕುಲವನ್ನು ಕಾಯುವವನು ನಕುಲ ; ಅಶ್ಲಾಧ್ಯಕ್ಷನಾಗಿರುವವನು ಸಹದೇವ ; ನಿಮ್ಮಂತಃ ಪುರದಲ್ಲಿ ಸೈರಂಧಿಯಾಗಿರುವಾಕೆಯೆ ನನ್ನರಸಿ ಗೌಪದಿ' ಎಂದು ತಮ್ಮೆಲ್ಲರ ಪರಿಚಯವನ್ನೂ ಹೇಳಿದನು. ಉತ್ತರನ ಸಂಶಯಗಳನ್ನೆಲ್ಲ ಪರಿಹರಿಸಿ ನಂಬಿಕೆಯಾಗುವಂತೆ ಮಾಡಿದನು. ಕಡೆಗೆ ನಂಬಿಕೆಯಾಗಲು ಉತ್ತರ ಕುಮಾರ ಅರ್ಜುನನ ಅಡಿಗೆರಗಿ, ಉಳಿದವರಿಗೆ ಈ ಮಹಿಮೆಯಲ್ಲಿಯದು ? ಬದುಕಿದ್ದರೆ ಅತಿಶಯವನ್ನು ಕಾಣಬಹುದೆಂಬ ನುಡಿ ನಿಜವಾಯಿತು. ನಾನು ತಿಳಿವಳಿಕೆಯಿಲ್ಲದೆ ಹಲವು ತಪ್ಪು ಮಾತನ್ನಾಡಿದ್ದೇನೆ. ಅವನ್ನೆಲ್ಲ ಮನ್ನಿಸಿ ಕಾಪಾಡಬೇಕು” ಎಂದು ಬೇಡಿಕೊಂಡನು. ಅರ್ಜುನನು ಹಿಡಿದೆತ್ತಿ ತಲೆ ಸವ ರುತ್ತ “ನಿನ್ನ ಮೇಲೆ ತಪ್ಪಿಲ್ಲ” ಎಂದು ಕ್ಷಮೆ ನುಡಿದು ಸಮಾಧಾನ ಪಡಿಸಿದನು. ಬಳಿಕ ಬಳೆಗಳನ್ನು ನೆಕ್ಕಿ ಹೆಣ್ಣುಡೆಯನ್ನು ತೊರೆದು ನೀರವೇಷವನ್ನು ಧರಿಸಿದನು. ನೆನೆದ ಕೂಡಲೆ ಪಾರ್ಥನ ದಿವ್ಯ ರಥಾಶ್ವಗಳು ಬಂದು ನಿಂತವು ; ಕಪಿವೀರನು ಧ್ವಜಾಗ್ರದಲ್ಲಿ ಮಂಡಿಸಿದನು. ಗಾಂಡೀನ ಧನುಸ್ಸನ್ನು ಹಿಡಿದು ಆಕ್ಷಯವಾದ ಬತ್ತಳಿಕೆಗಳನ್ನು ಬೆನ್ನಿಗೆ ಕಟ್ಟಿ ಕಲಿಸಾರ್ಥ ರಥವನ್ನು ಹತ್ತಿದನು. ಉತ್ತರ ಕುಮಾರ ಅಂಜಿಕೆ ತೊರೆದು ರಧ ನಡಸಿದನು. ಉತ್ತರ ಸಾರಥ್ಯ ಮಾಡುತ್ತಿರಲು ಅರ್ಜುನನು ಕುರುಸೇನೆಯ ಮೇಲೆ ಸಾಗಿ ಬಂದನು. ಈಗ ಕಾದ ಬಂದವನು ಅರ್ಜುನನೆಂಬುದನ್ನು ಭೀಷ್ಮ ದ್ರೋಣಾದಿಗಳು ಹಲವು ಸೂಚನೆಗಳಿಂದ ಅರಿತುಕೊಂಡರು. ಅರ್ಜುನನು ಪ್ರಕಟವಾಗಿ ಕಾಣಿಸಿಕೊಂಡರೆ ಮೊದಲಿನ ನಿಯಮದಂತೆ ಮತ್ತೆ ಪಾಂಡವರು ಅರಣ್ಯವಾಸಕ್ಕೆ ನಡೆಯಬೇಕಾಗುವುದೆಂದು ದುರ್ಯೋಧನ ಹರ್ಷಿಸಿದನು. ಭೀಷ್ಮರು ಲೆಕ್ಕ ಮಾಡಿ, “ನಿನ್ನಿನ ಹಗಲು ನಿನ್ನದು ; ಇ೦ದಿನದು ಅವರದು ಈಗ ಅವಧಿ ಮುಗಿದಿದೆ.” ಎಂದು ನಿರ್ಣಯ ಹೇಳಿದರು. ಅರ್ಜುನನೊಡನೆ ,