ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿಶ್ಚಂಕೆ : ಲಲಿತಾಂಗನು ನಿಶ್ಯಂಕೆಯಿಂದ ನಂಬಿ ಆ ಮಂತ್ರವನ್ನು ಗ್ರಹಿಸಿ ದನು. ಜನಸಾದಸದ್ಯ ಸ್ಮರಣೆಮಾಡಿ ಜಿನದತ್ತ ಸೆಟ್ಟಿಗೆ ಕೈಮುಗಿದು ನಲು ವಿನ ನೂರು ಕಾಲುಗಳನ್ನೂ ಚೆಕ್ಕನೆ ಕತ್ತರಿಸಿದನು. ಕೆಳಗೆ ಬೀಳುತ್ತ ಯುಧಗಳ ತುದಿ ಮುಟ್ಟುವ ಜಾಗೆ ಬರುವಷ್ಟರಲ್ಲಿ ಮುಟ್ಟಿದ ಮೇಲಕ್ಕೆ ನೆಗೆದನು. ವಿದ್ಯಾದೇವತೆ ಬಂದು ಕೈ ಮುಗಿದು, “ಏನಪ್ಪಣೆ ” ಎಂದು ಬೆಸಗೊಂಡಿತು. ಅವನು, “ ಜಿನದತ್ತಸಿಕ್ಕಿಯ ಬಳಿಗೆ ಕರೆದುಕೊಂಡು ಹೋಗು” ಎಂದನು. ಹಾಗೆಯೇ ಆಗಲೆಂದು ಆ ವಿದ್ಯಾದೇವತೆ ಮರು ಪರ್ವತಕ್ಕೆ ಅವನನ್ನು ಕೊಂಡೊಯ್ದು ಅಲ್ಲಿ ಬಂದಿದ್ದ ಜಿನದತ್ತನನ್ನು ತೋರಿಸಿ ಕೆಳಗಿಳಿಸಿತು, ಇಳಿದ ಕೂಡಲೆ ಅವನು ಜಿನದತ್ತನ ಬಳಿಗೆ ಹೋಗಿ ಅವನ ಕಾಲಿಗೆ ತಲೆ ಮುಟ್ಟಿಸಿ ನಮಸ್ಕಾರ ಮಾಡಿದನು, ಅಂಜನಚೋರ ಅಲ್ಲಿ ಬಂದದ್ದನ್ನು ಕಂಡು ಸಿಟ್ಟಿಗೆ ಬೆರಗಾಯಿತು, ಕಳ್ಳನಿಗೆ ಈ ವಿದ್ಯೆ ದೊರಕಿದ್ದು ಸುಮ್ಮನೆ ಕುಣಿಯುವವನಿಗೆ ಹರೆಯವನೂ ಕೂಡಿದಂತಾಯಿತು. ಅ೦ಜನವಟಿಕೆಯ ಜೊತೆಗೆ ಗಗನಗಾವಿ:ನೀ ವಿದ್ಯೆಯೂ ಬರಲು, ಇವನಿನ್ನು ನಾಡನ್ನೆಲ್ಲ ನಿವಾಳಿ ತೆಗೆದಂತೆ ಕದಿಯದಿರನು.” ಎಂದು ಅಂಜಿ, “ನಿನಗೆ ಈ ವಿದ್ಯ ಹೇಗೆ ಬಂತು ?” ಎಂದು ಕೇಳಿದನು. ಆಂಜನಚೋರನು ಅದರ ಕಥೆಯನ್ನೆಲ್ಲ ಹೇಳಿ, “ಜಿನದತ್ತಾ, ನಿಮ್ಮ ಮಾತನ್ನು ಸಂದೇಹಪಡದೆ ನಂಬಿದ್ದರಿಂದ ಬರುವ ಫಲವನ್ನು ಮನವಾರ ಕಂಡೆ, ಇನ್ನು ಮುಂದೆ ಜನರ ಮತ್ತು ನಿಮ್ಮ ಪಾದಗಳೇ ನನಗೆ ಶರಣು ? ಎಂದು ನುಡಿದು, ಅದುವರೆಗೆ ದುಮಾರ್ಗದಲ್ಲಿ ನಡೆದು ಬಾಳನ್ನು ಹಾಳು ಮಾಡಿಕೊಂಡದ್ದಕ್ಕಾಗಿ ತನ್ನನ್ನು ಪರಿಪರಿಯಲ್ಲಿ ಹಳಿದುಕೊಂಡನು. ಬಳಿಕ, “ ನೀವು ಅರ್ಹನನ್ನಲ್ಲದೆ ಬೇರೆ ದೇವರನ್ನು ಕೈಕೊಳ್ಳುವವರಲ್ಲ. ಪಂಜ ನಮಸ್ಕಾರವನ್ನುಳಿದು ಬೇರೆ ಮಂತ್ರವನ್ನು ನೆನೆಯುವವರಲ್ಲ. ಈ ವಿಧ್ಯ ನಿಮಗೆ ಬಂದದ್ದು ಹೇಗೆ ?” ಎಂದು ಸಿಟ್ಟಿಯನ್ನು ಕೇಳಿದನು. ಆತನು ಆ ಸಂಗತಿಯನ್ನು ಸಂಕ್ಷೇಪವಾಗಿ ಹೇಳತೊಡಗಿದನು !