ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ತಿನ್ನ ಬೇಡ " ಎಂದರು. ಧನಂತರಿ ಆಗಲೆಂದು ಅಡಿಗೆ ಮನೆಗೆ ಬಂದನು.

  • ಕೆಲವು ದಿನ ಕಳೆದ ಮೇಲೆ ಅವನೂ ವಿಶ್ವಾನುಲೋಮನೂ ತನ್ನ ಪಡೆಯೊಡನೆ ಪರದೇಶಕ್ಕೆ ಹೋಗಿ ಕದ್ದು ಬಹು ದ್ರವ್ಯವನ್ನು ಪಡೆದು ಹಿಂದಿರುಗಿ ಬರುವ ದಾರಿಯಲ್ಲಿ ಒಂದಡವಿಯಲ್ಲಿ ಬೀಡು ಬಿಟ್ಟರು, ಬುತ್ತಿ ಮುಗಿದಿತ್ತು. ಹಸಿವು ಹೆಚ್ಚಾಯಿತು. ಅಡವಿಯ ಹಣ್ಣುಗಳನ್ನು ಹುಡುಕಿ ತನ್ನಿರೆಂದು ಆಳುಗಳನ್ನು ಕಳಿಸಿದರು. ಅವರು ಕರ್ಪೂರದ ಹಂಪಣ ಕುಂ ಕುಮದ ಬಣ್ಣವೂ ಕೂಡಿ ಅಂದವಾಗಿ ಕಂಡ ಕಾಂಚೀರದ ಕಣ್ಣುಗಳನ್ನು ಆಯು ಕಂದು ರಾತ್ರಿ ಹಾಕಿದರು. ಹೆಸರು ಗೊತ್ತಿಲ್ಲದ್ದರಿಂದ ಧನ್ವಂತರಿ ತಿನ್ನಲಿಲ್ಲ. ವಿಶ್ವಾನುಲೋಮನು, “ ಈ ಸವಣರು ತಾವು ಉಣ್ಣದೆ ಹೋಗು ವುದಲ್ಲದೆ ಉಳಿದವರನ್ನೂ ಉಣ್ಣಗೊಡುವುದಿಲ್ಲ. ಇಂಥ ಧೂರ್ತರನ್ನು ಈ ಲೋಕದಲ್ಲಿ ಈ ಸೆ. ಇವರ ಮಾತು ಯಾವ ನಿಶ್ಚಯ ? ” ಎಂದು ನುಡಿದು ಒಡಂಬಡಿಸಿ ನೋಡಿದನ. ಆದರೂ ಧನ್ವಂತರಿ ಹಣ್ಣು ತಿನ್ನಲಿಲ್ಲ. ಅವನು ತಿನ್ನಲಿಲ್ಲವೆಂದು ವಿಶ್ವಾನುಲೋಮನ ತಿನ್ನಲಿಲ್ಲ. “ ನೀವಿಬ್ಬರೂ ಸವ ಇರುಳಗಳು, ಉಪವಾಸ ಸಾಯಿರಿ ಎಂದುಕೊಂಡು ಹಸಿವು ತಡೆಯ ಲಾರದೆ ನೃತ್ಯರೆಲ್ಲರೂ ಹಣ್ಣು ತಿಂದರು ತಿಂದು ಸತ್ತರು. ' ಶಂಕಿಸಿ ಬದುಕಿದೆ ಎಂದು ಗೆಳೆಯರಿಬ್ಬರೂ ಸಂತೋಷಪಟ್ಟರು. ನೃತ್ಯರ ಹೊನ್ನ ನ್ನೆಲ್ಲ ಇಬ್ಬರೂ ಹಂಚಿಕೊಂಡು ಊರಿಗೆ ಬಂದರು.

ಧನ್ವಂತರಿ ವರಧರ್ಮ ಭಟ್ಟಾರಕರನ್ನು ಕಂಡು ನಡೆದದ್ದನ್ನು ತಿಳಿಸಿ ಮತ್ತೊಂದು ವ್ರತವನ್ನು ಬೇಡಿದನು. ಅವರು “ ಹಿಟ್ಟನನ್ನೂ ಬಂಡಿ ಯನ್ನೂ ತಿನ್ನಬೇಡ” ಎನ್ನಲು ಆ ವ್ರತವನ್ನು ಕೈಕೊಂಡನು. ಹೀಗಿರುವಲ್ಲಿ ಮತ್ತೊಂದು ಸಲ ಕದ್ದು ಹಿಂದಿರುಗಿ ಬರುತ್ತಿರುವಾಗ ನಟ್ಟಡವಿಯಲ್ಲಿ ಹಸಿವು ನೀರಡಿಕೆಗಳಿಂದ ಕಂಗೆಟ್ಟರು, ನಾಗಾಲಯದ ಮುಂದಿನ ತಾವರೆಗೊಳಕ್ಕೆ ನೀರು ಕುಡಿಯಲು ಹೋದರು. ಅಲ್ಲಿ ಮುನ್ನಿನ ವಿನ ನಾಡವರು ಬಂದು ಹಿಟ್ಟಿನ ಎತ್ತು ಬಂಡಿಗಳನ್ನು ಪೂಜಿಸಿ ಹೋಗಿದ್ದರು. ಪೃಶ್ಯರು ಅವನ್ನು ತಂದು ತೋರಿಸಿದರು. ಧನ್ವಂತರಿ ತಿನ್ನಿಲ್ಲದಿರಲು ವಿಶ್ಯಾನುಲೋಮನೂ ಒಲ್ಲೆನೆಂದೆನು. ಉಳಿದವರೆಲ್ಲ ಸೈರಣೆಗೆಟ್ಟು ತಿಂದರು. ಹಿಂದಿನಿರುಳು ಹುತ್ತದಿಂದ ಹೊರಬಂದ ಹಾವೊಂದು ಆ ಹಿಟ್ಟಿನಲ್ಲಿ ವಿಷ