ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೇಡ. ನಾನು ನಾಳ ಹಿಂದಿರುಗಿ ಬರುವಾಗ ನಿನ್ನ ಮನಸ್ಸಿಗೆ ಒಪ್ಪಾಗುವ ಬಟ್ಟೆ ತಂದುಕೊಡುತ್ತೇನೆ ; ಬಂಗಾರದ ಬೊಂಬೆ ತಂದುಕೊಡುತ್ತೇನೆ; ಒಡವೆ ತಂದುಕೊಡುತ್ತೇನೆ. ಎಚ್ಚರಿಕೆಯಿಂದ ಮನೆಯನ್ನು ಕಾದುಕೊಂಡಿರು. ದಿನವೂ ಶಿವಾಲಯಕ್ಕೆ ಹೋಗುತ್ತಿರು, ಒಂದು ಬಳ್ಳ ಕಪಿಲೆಯ ಹಾಲನ್ನು ತೆಗೆದುಕೊಂಡು ಹೋಗಿ ಹೊತ್ತು ತಪ್ಪದಂತೆ ಶಿವಲಿಂಗಕ್ಕೆ ಒಪ್ಪಿಸಬೇಕು, ಇದು ನನ್ನ ವ್ರತ. ಇದನ್ನು ನಡೆಸುತ್ತಿರು, ತಪ್ಪಬೇಡ” ಎಂದು ಬುದ್ದಿ ಹೇಳಿ ಗನು. ಅವಳನ್ನು ಒಪ್ಪಿಸಿ ಹೆಂಡತಿಯೊಡನೆ ನೆರೆಯೂರಿಗೆ ಹೊರಟುಹೋದನು, ಈ ಹುಡುಗಿ ಪರಿಮಳೋದಕದಲ್ಲಿ ಸ್ನಾನ ಮಾಡಿದಳು ; ಒಳ್ಳೆಯ ಮಡಿ ಸೀರೆಯನ್ನು ಟ್ಟುಕೊಂಡಳು ; ಹಣೆಗೆ ವಿಭೂತಿಯಿಟ್ಟು ಶೃಂಗಾರ ಮಾಡಿ ಕೊಂಡಳು. ಆಮೇಲೆ ಶಿವನಿಗೆ ಮೀಸಲಾಗಿಟ್ಟಿದ್ದ ಕಪಿಲೆಯ ಹಾಲನ್ನು ಕಮ್ಮಗೆ ಇನಿದಾಗುವ ಹಾಗೆ ಕಾಸಿ ಬಳ್ಳದಲ್ಲಿ ಅಳೆದು ಹೊಂಬಟ್ಟಲಿಗೆ ತುಂಬಿ ಕೊಂಡಳು. ಶುಭ್ರವಾದ ಬಿಳಿಯ ಬಟ್ಟೆಯನ್ನು ಎರಡು ಮಡಿಕೆ ಮಾಡಿ ಬಟ್ಟಲ ಮೇಲೆ ಮುಚ್ಚಿಕೊಂಡು ಸಡಗರದಿಂದ ಶಿವಾಲಯಕ್ಕೆ ಹೋದಳು. ಈ ದೇವಾಲಯದ ಒಳಹೊಕ್ಕು ಕಲ್ಲಿನಾಥನನ್ನು ಕಂಡು ನಮಸ್ಕಾರಮಾಡಿ ಜಾಲಿಸ ಬಟ್ಟಲನ್ನು ಮುಂದಿಟ್ಟಳು. ಇಟ್ಟು, “ ದೇವಾ, ಹಸಿದೆ ; ಹಾಲು ಕುಡಿ” ಎಂದು ನುಡಿದು ಕೊಡಗೂಸು ಕಂಬದ ಮರೆಗೆ ಹೋದಳು. ಸ್ವಲ್ಪ ಹೊತ್ತು ಬಿಟ್ಟು ಬಂದು ನೋಡಿದರೆ ಹಾಲಿನ ಬಟ್ಟಲು ಇದ್ದಂತೆಯೇ ಇತ್ತು. ಕಂಡು ನಡುಗಿ ನೊಂದಳು ; ಮರುಗಿದಳು, ಎದೆ ದಡದಡಿಸಿತು ; ಉಸಿರು ಬಿಸಿ ಬಿಸಿಯಾಯಿತು ; ಕೈ ನಡುಗಿತು ; ಬಾಯೊಣಗಿತು ; ಗುಡುಗುಡನೆ ಕಂಬನಿಯಿಳಿಯಿತು. ಕಂಬನಿ ಸುರಿಸುತ್ತ ಲಿಂಗವನ್ನು ನೋಡಿ, " ಏನು ಕಾರಣ ಈ ಹಾಲು ಕುಡಿಯದೆ ನೀನು ಸುಮ್ಮನಿದ್ದೀಯ ? ಅಯ ! ನನಗೆ ಆತಂಕವುಂಟುಮಾಡುವುದು ಸರಿಯೆ ? ಶಂಕರಾ, ನೀನೆ ಹೇಳು, ದೇವಾ, ನಿನಗೇನು ಹಸಿವಾಗಿಲ್ಲವೊ ? ಹಾಲು ಕಾದಿಲ್ಲವೊ ? ಹೆಚ್ಚು ಕಾದು ಕೈ ಬಿಟ್ಟಿದೆಯೋ ? ಬಿಸಿಯೇನಾದರೂ ಆರಿಹೋಗಿದೆಯೇ ? ಕಮ್ಮಗಿಲ್ಲವ ? ಇಂಪಾಗಿಲ್ಲವೆ ? ನಿನ್ನ ಕಣ್ಣಿಗೆ ಚೆನ್ನಾಗಿ ಕಾಣುವುದಿಲ್ಲವೆ ? ಅಥವಾ ಹೊಗೆ ಸುತ್ತಿಕೊಂಡಿದೆಯೆ ? ಹೆರರ ಕಣ್ಣೆ೦ಜಲಾಯಿತೆ ? ತುಂಬ