ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿದ್ಯುಚ್ಚೋರನೆಂಬ ಋಷಿಯ ಕಥೆ ೬

  ದ್ದೆಲ್ಲವನ್ನೂ ಕೊಡುತ್ತೇನೆ"ಎಂದನು.ಎನ್ನಲಾಗಿ,"ಬೇರೆ ಏನನ್ನೂ ಒಲ್ಲೆ.ನನ್ನ ಕೆಳೆಯನಾದ ಯಮದಂಡನಿಗೆ ಕ್ಷಮೆದೋರಬೇಕು.ಇದೊಂದನ್ನೇ ನಾನು ಬೇಡುವುದು"ಎಂದು ವಿದ್ಯುಚ್ಚೋರನು ಕೇಳಿಕೊಂಡನು.ಅರಸನೂ ಮತ್ತೆ ಹೀಗೆಂದು ಬೆಸಗೊಂಡನು:"ಯಮದಂಡನು ನಿನಗೆ ಹೇಗೆ ಕೆಳೆಯನಾದನು?ನೀನು ಶ್ರಾವಕ ವ್ರತಗಳನ್ನು ಕೈಕೊಂಡೆಯಾದರೂ ಏಕೆ ಕದಿಯೂತ್ತೀತ?"ಹೀಗೆ ಬೆಸೆಗೊಳ್ಳಲಾಗಿ ಆತನು,"ಯಮದಂಡನು ನನಗೆ ಕೆಳೆಯನಾಗಿರುವ ಸಂಗತಿಯನ್ನೂ ನಿನ್ನ ಪಟ್ಟಣದ ಧನವನ್ನು ಕದ್ದದಕ್ಕೆ ಕಾರಣವನ್ನೂ ಹೇಳುತ್ತೇನೆ.ಕೇಳು,ಅರಸ"ಎಂದು ಹೇಳತೊಡಗಿದನು:
    "ದಕ್ಷಿಣಾಪಥದಲ್ಲಿ ಅಭೀರವೆಂಬ ನಾಡು.ಅಲ್ಲಿ ವರ್ಣೆಯೆಂಬ ತೊರೆ.ಅದರ ದಡದಲ್ಲಿ ವೇಣಾತಟವೆಂಬ ಪಟ್ಟಣ.ಅ ಷಟ್ಟಣ ಬಹು ರಮ್ಯವಾಗಿ ಸ್ವರ್ಗವನ್ನೆ ಹೋಲುತ್ತಿರುವುದು.ಅದನ್ನಾಳುವವನು ಜಿತಶತ್ರುವೆಂಬರಸ.ಆತನ ಮಹಾದೇವಿ ವಿಜಯಮತಿಯೆಂಬವಳು.ಆ ಇಬ್ಬರಿಗೂ ಮಗ ನಾನು,ವಿದ್ಯುಚ್ಚೋರ.ಮತ್ತು ಅದೇ ಪಟ್ಟಣದಲ್ಲಿ ಯಮಪಾಶನೆಂಬವನು ತಳಾರ.ಆತನ ಹೆಂಡತಿ ನಿಜಗುಣದೇವತೆಯೆಂಬವಳು.ಆ ಇಬ್ಬರಿಗೂ ಮಗ ಈತ,ಯಮದಂಡನೆಂಬವನು.ನಾವಿಬ್ಬರೂ .ಮಾನ ವಯಸ್ಸಿನವರು.ಐದಾರು ವರ್ಷದವರಾಗಿದ್ದಾಗ ಸಿದ್ದಾರ್ಥನೆಂಬ ಉಪಾಧ್ಯಾಯರ ಬಳಿ ಇಬ್ಬರೂ ಓದುವುದಕ್ಕೆ ಬಿಟ್ಟರು.ಏಳೆಂಟು ವರ್ಷದೊಳಗೆ ವ್ಯಾಕರಣ,ಛಂದಸ್ಸು,ಅಲಂಕಾರ,ಕಾವ್ಯ,ನಾಟಕ,ಚಾಣಕ್ಯ,ವೈದ್ಯ ಮೊದಲಾದ ಶಾಸ್ತ್ರಗಳನ್ನೆಲ್ಲ ಇಬ್ಬರೂ ಕಲಿತೆವು.ಬಳಿಕ ಈತ ತಳಾರನ ಮಗನಾಗಿದ್ದರಿಂದ ಕಳ್ಳರನ್ನು ಕಂಡುಹಿಡಿಯುವ ರೀತಿಯನ್ನು ತಿಳಿಸುವ'ಸುರಖ'ವೆಂಬ ವಿದ್ಯೆಯನ್ನು ಕಲಿತನು.ನಾನು ಕದಿಯುವ ಉಪಾಯವನ್ನು ಹೇಳುವ 'ಕರಪಟ'ಶಾಸ್ತ್ರವನ್ನು ಕಲಿತೆನು.ಹೀಗೆ ನಾವಿಬ್ಬರೂ ಅನ್ಯೋನ್ಯ ಪ್ರೀತಿಯಿಂದ ಕಾಲಕಳೆಯುತ್ತಿದ್ದೆವು.
  "ಒಂದು ದಿವಸ ಇಬ್ಬರೂ ವನಕ್ರೀಡೆಯಾಡುವುದಕ್ಕೆಂದು ಇಂದ್ರೋಪಮವೆಂಬ ವನಕ್ಕೆ ಹೋದೆವು.ಹಲವು ತೆರದ ವೃಕ್ಷಜಾತಿಗಳಿಂದ ಕಿಕ್ಕಿರಿದಿದ್ದ ಆ ವನದಲ್ಲಿ ಇಬ್ಬರೂ ಉಳಿಚೆಂಡಾಡುತ್ತಿದ್ದೆವು.ಆಗ,ಇವನು ಆಲೋಕನ ವಿದ್ಯೆಯನ್ನು ಕಲ್ತವನಾದ್ದರಿಂದ ಎಲ್ಲಿ ಉಳಿದರೂ ಇವನನ್ನು