ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಅಪರಿಮಿತವಾಗಿ ಮಳೆ ಸುರಿಸಿದರು. ನೀರು ಸಮುದ್ರದಂತೆ ಉಕ್ಕಿಬಂದು ಸೈನ್ಯವನ್ನು ಕೊಚ್ಚಿಸತೊಡಗಿತು. ಚಕ್ರವರ್ತಿ ಸೈನ್ಯವನ್ನೆಲ್ಲ ಚರ್ಮರತ್ನದ ಮೇಲೇರಿಸಿದನು ; ಮೇಲೆ ಛತ್ರರತ್ನವನ್ನು ಹಿಡಿಸಿದನು. ಸಾಗರದ ನಡುವೆ ದೊಡ್ಡ ಹಡಗಿನಲ್ಲಿರುವಂತೆ ಚರ್ಮರತ್ನದ ಮೇಲೆ ಸೇನೆ ಸುರಕ್ಷಿತವಾಗಿತ್ತು. ಮೇಲಿನಿಂದ ಒಂದು ತೊಟ್ಟೂ ನೀರು ಬೀಳದಂತೆ ಛತ್ರರತ್ನ ಮರೆಮಾಡಿತು. ಜಯಕುಮಾರ ನೆಂಬ ಮಹಾವೀರನು ಮೇಘಮುಖಾಮರರೊಡನೆ ಕಾಳಗಕ್ಕೆ ನಿಂತನು. ಮೇಘಮುಖರು ಪೆಟ್ಟು ತಿಂದು ನೊಂದರು. ಆದರೂ ಕಾಳಗ ಬೇಗ ಕೊನೆ ಗೊಳ್ಳದಿರಲು ಭರತೇಶ್ವರ ಚಕ್ರವರ್ತಿ ಖಡ್ಡ ರತ್ನ ಕೈ ಕೈನೀಡಿದನು. ಆಗ ಮೇಘಮುಖರು ಅಂಜಿ ಹಿಂಜರಿದರು. ಬಳಾಕಾವರ್ತರು ಸೊಕ್ಕುಡುಗಿ ಚಕ್ರೇಶನ ಅಡಿಗೆರಗಿದರು. ಮುಂದೆ ವಿಜಯಿಯಾದ ಭರತೇಶ್ವರನು ಸಿಂಧೂ ಮೂಲಕ್ಕೆ ಹೋಗಿ ಸಿಂಧು ದೇವಿಯಿಂದ ಅಭಿಷಿಕ್ತನಾದನು. ಹಿಮವತ್ಪರ್ವತದ ಮಧ್ಯಮ ಶಿಖರವನ್ನು ತಲುಪಿ ಹಿಮವತ್ಕುಮಾರನಿಂದ ಪೂಜೆಗೊಂಡನು. ಅಲ್ಲಿಂದ ವೃಷಭಾಚಲಕ್ಕೆ ಹೋಗಿ ಸೇರಿದನು. ಅಲ್ಲಿ ತನ್ನ ವಿಜಯ ಪ್ರಶಸ್ತಿಯನ್ನು ಕತ್ತಿಸಬೇಕೆಂದು ನಿಶ್ಚಯಿಸಿದನು, ಕೆತ್ತಿ ಸನೋಡಿದರೆ ಪೂರ್ವ ಚಕ್ರವರ್ತಿಗಳ ಪ್ರಶಸ್ತಿಯಿಂದ ಅಲ್ಲಿನ ಕಲ್ಲುಗಳೆಲ್ಲ ತುಂಬಿಹೋಗಿದ್ದವು. ಮತ್ತಾರ ಪ್ರಶ ಸಿಗೂ ಎಡೆಯುಳಿದಿರಲಿಲ್ಲ. ಅದುವರೆಗೂ ಆತನು ತಾನೇ ಮಹಾಶೂರನೆಂದುಕೊಂಡಿದ್ದನು. ಈ ಪ್ರಶಸ್ತಿಗಳನ್ನು ಕಂಡ ಬಳಿಕ ಮಡುಗಟ್ಟಿದ್ದ ಅವನ ಗರ್ವರಸವೆಲ್ಲ ಸೋರಿ ಹೋಯಿತು. ಹೆಮ್ಮೆಯಡಗಿ ನಾಚಿ ತಲೆ ತಗ್ಗಿಸಿದನು. ಆದರೂ ಸ್ವಾಭಿ ಮಾನಕ್ಕೆ ಸಿಕ್ಕಿ ಪೂರ್ವ ಚಕ್ರವರ್ತಿಗಳ ಪ್ರಶಸ್ತಿಗಳಲ್ಲೊಂದನ್ನು ದಂಡರತ್ನ ದಿಂಬೊರಸಿ ಹಾಕಿ ಆಯೆಡೆಯಲ್ಲಿ ತನ್ನ ಪ್ರಶಸ್ತಿಯನ್ನು ಬರಸಿದನು. ಆ ಬಳಿಕ ಸೇನಾ ಸಮೇತನಾಗಿ ಗಂಗಾಕೂಟಕ್ಕೆ ಹೋಗಿ ಸೇರಿದನು. ಗಂಗಾದೇವಿ ಆತನಿಗೆ ತನ್ನ ಮಗಳ ಜಲಗಳಿಂದ ಅಭಿಷೇಕ ಮಾಡಿದಳು. ಆಮೇಲೆ ಗಂಗೆಯ ತಡಿವಿಡಿದು ಚಕ್ರವರ್ತಿಯ ಸೈನ್ಯ ದಕ್ಷಿಣಾಭಿಮುಖವಾಗಿ