ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಪುರೋಹಿತನು "ದೇವಾ, ನಿನಗೆ ಇನ್ನೂ ಹಗೆಗಳಿರುವರೆಂಬುದನ್ನು ಇದು ಸೂಚಿಸುತ್ತದೆ” ಎಂದು ನುಡಿದನು, ಮತ್ತೂ ಮುಂದುವರಿಸಿ “ ನೀನು ಇದುವರೆಗೂ ಹೊರರಾಜ್ಯಗಳಲ್ಲಿ ಸಾಧಿಸಬೇಕಾದ್ದನ್ನೆಲ್ಲ ಸಾಧಿಸಿದ್ದಾಯಿತು. ಒಳದೇಶದಲ್ಲಿ ಸಾಧಿಸುವುದು ಸ್ವಲ್ಪ ಉಬಗೆ, ನಿನ್ನ ತಮ್ಮಂದಿರು ಇನ್ನೂ ನಿನಗೆ ಎರಗಿಲ್ಲ. * ಭರತನೂ ಪುರುಸುತ, ನಾವೂ ಪುರುಸುತರು. ನಮಗೆ ತಂದೆ ರಾಜ್ಯ ಕೊಟ್ಟಿದ್ದಾನೆ. ನಮ್ಮ ಭಾಗ್ಯವನ್ನು ನಾವು ಅನುಭವಿಸುತ್ತೇವೆ ? ಎಂದು ಅವರು ಮದಿಸಿದ್ದಾರೆ. ಅವರಲ್ಲಿ ಅತಿ ಪರಾಕ್ರಮಿಯಾದ ಬಾಹು ಬಲಿಯಂತೂ ತನ್ನ ತೋYಲವನ್ನೇ ಮೆರೆಯುತ್ತಿದ್ದಾನೆ. ಆದಿ ಬ್ರಹ್ಮನು ಕೊಟ್ಟ ಈ ರಾಜ್ಯಕ್ಕೆ ನಾನು ಒಡೆಯ. ಭರತನು ಆರಸಾದರೆ ನನಗೇನು ? ಎಂದು ಮದಿಸಿದ್ದಾನೆ. ಬಲಗರ್ವಿತರಾದ ಸುಭಟರ ತೋಳ್ಳಲವನ್ನು ಧ್ವಂಸ ಮಾಡುವುದು ಅವನಿಗೆ ಆಟವಾಗಿ ಹೋಗಿದೆ. " ಶತ್ರುಗಳನ್ನು ಮುರಿ ದೇನೇ ! ' ಎಂದು ಅವನು ಸದಾ ಕಾತರಿಸುತ್ತಿದ್ದಾನೆ. ರಾಜನೆಂಬ ಹೆಸರು ನಿನಗೊಬ್ಬನಿಗೆ ಸಲ್ಲತಕ್ಕದ್ದಾಗಿರಬೇಕು, ಭರತೇ ಸ್ವರಾ, ಅವರೆಲ್ಲರೂ ನಿನ್ನ ಕಾಲೆರಗಿ ರಾಜಸುಖವನ್ನನುಭವಿಸಲಿ. ಒಲ್ಲದಿದ್ದರೆ ಪುರು ಪರಮೇಶ್ವರನ ಪಾದಪದ್ಮಕ್ಕೆರಗಿ ತಪಸ್ಸು ಮಾಡಲಿ, ಬೇರೆ ದಾರಿ ಯಿಲ್ಲ” ಎಂದನು. ಭರತಾನುಜರ ವೈರಾಗ್ಯ ಕೇಳಿ ಭರತನಿಗೆ ಕೋಪ ಕೆರಳಿತು ; ಕಣ್ಣು ಕೆಂಡವಾಯಿತು. “ ಆಹಾ ! ನನ್ನ ತಮ್ಮಂದಿರು ಹೀಗೆ ಮದಿಸಿರುವರೆ ? ಇವರನ್ನು ಯುದ್ಧ ಮಾಡಿ ಸೋಲಿಸಬೇಕು. - ನಮಗೇನು ಮಾಡಿಯಾನು ?' ಎಂದು ಅವರು ಭಾವಿಸಿ ಕೊಂಡು ತಾವೇ ಶೂರರೆಂದು ಸೊಕ್ಕಿದ್ದಾರೆ. ಹೀಗಿರುವಾಗ ಲೋಕವನ್ನೆಲ್ಲ ಗೆದ್ದು ತಾನೆ ಫಲವೇನು ? ಬಾಹುಬಲಿಯೊಬ್ಬ ಸಿಡಿದು ನಿಂತಿರುವಾಗ ಲೋಕ ದರಸುಗಳೆಲ್ಲ ನನ್ನ ಕಾಲಿಗೆ ಬಿದ್ದರೂ ಬಂದ ಭಾಗ್ಯವೇನು ? ” ಎಂದು ಗರ್ಜಿಸಿದನು. ತಮ್ಮಂದಿರ ಮೇಲೆ ದಂಡೆತ್ತಿ ನಡೆಯಲಿಚ್ಚಿಸಿದ ಚಕ್ರವರ್ತಿಯನ್ನು ಕುರಿತು, 'ದೇವಾ, ನಿನ್ನ ಒಂದು ಓಲೆಯಲ್ಲಿ ಮುಗಿಯುವಂಥದು ಈ ಮನೆ