ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಬಾಹ.ಬಳಿ

ಎಂದುಕೊಂಡರು. ಹೀಗೆ ಆಲೋಚಿಸಿ ಇಬ್ಬರೂ ಮೊದಲು ಭರತ ಚಕ್ರ ವರ್ತಿಯ ಬಳಿ ಬಂದರು. “ ದೇವಾ, ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧಗಳಲ್ಲಿ ನೀವು ಜಯವನ್ನು ನಿರ್ಧರಿಸಿರಿ. ಜನ ವಿನಾಶಕ್ಕೆ ಕಾರಣವಾದ ಯುದ್ಧದಿಂದ ಪ್ರಯೋಜನವೇನು ? ಪಾಪ, ಅಪಯಶಸ್ಸು, ಅಷ್ಟೇ. ಅದನ್ನು ಬಿಡಿ, ಲೋಕದ ನಿಂದೆ ತಾಗದ ಹಾಗೆ ಧರ್ಮಯುದ್ದ ಮಾಡಿ ” ಎಂದು ಬೋಧಿಸಿ ದರು. ಚಕ್ರವರ್ತಿ ಅದಕ್ಕೆ ಒಪ್ಪಿಕೊಂಡನು.” ಮಂತ್ರಿಗಳಿಬ್ಬರೂ ಬಾಹುಬಲಿಯ ಸವಿತಾಸಕ್ಕೆ ಹೋಗಿ ಮೊದಲಿ ನಂತೆಯೆ ಧರ್ಮಯುದ್ದದ ಏರ್ಪಾಟನ್ನು ಬಿನ್ನಯಿಸಿದರು. ಬಾಹುಬಲಿಗೆ ಅವರ ಮಾತು ರುಚಿಸಲಿಲ್ಲ. “ ನನ್ನ ಚತುರಂಗ ಬಲವನ್ನು ಯಾವನೆದುರಿ ಸುತ್ತಾನೆ ” ಎಂದು ನಿಮ್ಮರಸ ಗರ್ವಪಡುತ್ತಾನೆ. ಆ ಗರ್ವದ ಉನ್ನತಿಯನ್ನು ಮೊದಲು ಸ್ವಲ್ಪ ನೋಡುತ್ತೇನೆ. ಬಳಿಕ ಧರ್ಮಯುದ್ದವಾಗಲಿ” ಎಂದು ಕೋಪದಿಂದಲೇ ನುಡಿದು ವಿಷಣ್ಣನಾಗಿ ನಿಂತನು. ಮಂತ್ರಿಗಳು, “ಈ ಕೆಟ್ಟ ಆಗ್ರಹ ಬೇಡ, ಬಿಟ್ಟು ಬಿಡು. ಯುವರಾಜಾ, ಪ್ರಸನ್ನಚಿತ್ತನಾಗಿ ಈ ಮಾತು ಕೇಳು. ಮನಸ್ಸು ಮಾಡಿ ಒಮ್ಮೆ ಈ ಮುದು ಕರ ಮಾತನ್ನು ನಡೆಸಿಕೊಡು ” ಎಂದು ಹಿತನುಡಿದರು. ಕಡೆಗೂ ಬಾಹುಬಲಿ ಯನ್ನೊ ಡಂಬಡಿಸಿದರು. ಧರ್ಮ ಯುದ್ದ ಎರಡು ಕಡೆಗಳಲ್ಲೂ ಆನಂದ ಭೇರಿಗಳು ಮೊಳಗಿದವು. * ಐನೂರು ಬಿಲ್ಲೆ ತರದ ಭರತನೂ ಐನೂರಿಪ್ಪತ್ತೈದು ಬಿಲ್ಲೆ ತರದ ಬಾಹುಬಲಿಯೂ ಮುಂದೆ ಬಂದರು, ಒಬ್ಬರನ್ನೊಬ್ಬರು ಎದುರಿಸಿ ನಿಂತು ನೀಲ ನಿಷಧ ಪರ್ವತಗಳು ಹೊರಬಂದುವೋ ಎಂಬಂತೆ ಕಾಣುತ್ತಿದ್ದರು. ಎರಡು ಕಡೆ ಯವರೂ ಮಧ್ಯಸ್ಥರಾಗಿ ನೋಡುತ್ತ ನಿಂತರು.

  • ಆ ಆದಿಕಾಲದಲ್ಲಿ ಜನರ ದೇಹಪ್ರಮಾಣ, ಆಯಸ್ಸು ಎಲ್ಲವೂ ಬಹಳ ಹೆಚ್ಚಾ ಗಿತ್ತೆಂದೂ, ಕ್ರನು ಕ್ರಮವಾಗಿ ಕೂಡ ಸುಯಾಗುತ್ತ ಬಂತೆಂದೂ ಪುರಾಣಗಳ ಹೇಳಿಕೆ. ಭರತ ಚಕ್ರವರ್ತಿಯ ದಿಗ್ವಿಜಯಕ್ಕೆ ಅರುವತ್ತು ಸಾವಿರ ವರ್ಷ ಹಿಡಿಯಿತಂತೆ,