ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಬೆಳಗಾಗಲು ಪ್ರೀತಿಯಿಂದ ಶಂಕರನನ್ನು ಅಪ್ಪಿ ಕೊಂಡಾಡಿ, 'ಒಡೆ ಯನೇ, ಬೇಟೆಗೆ ಹೋಗುತ್ತೇನೆ” ಎಂದನು. “ನಿನ್ನೆ ಯ ಹಾಗಲ್ಲ, ನನ್ನವನೇ. ತಡಮಾಡುವುದಿಲ್ಲ. ನಿನ್ನಾಣೆ, ಬೇಗನೆ ಬರುತ್ತೇನೆ ” ಎಂದು ನಂಬುಗೆ ನುಡಿದನು. ಆಗಲಲಾರ, ಆಗದೆ ಇರಲಾರ, ಮುನ್ನಿನ ದಿನದಂತೆಯೇ ಹೇಗೋ ಕಷ್ಟದಿಂದ ಹೊರಹೊರಟನು. ೯ ಮೈ ಅತ್ಯ, ಮನಸ್ಸಿಲ್ಲ ' ಎಂಬಂ ತಾಯಿತು ಅವನ ಸ್ಥಿತಿ, ಅಡವಿ ಅಡವಿ ಅಲೆಯುತ್ತ ಬೇಟೆಯಾಡುತ್ತಿದ್ದರೂ ಅವನ ಮನಸ್ಸಿನ ತುಂಬ ಶಿವನೇ ತುಂಬಿಕೊಂಡಿದ್ದನು. ಇತ್ತ ಆ ಶಿವಬ್ರಾಹ್ಮಣನು ಹಿಂದಿನ ದಿನದಂತೆಯೇ ಅಂದು ಕೂಡ ಮಿಂದು ಮಡಿಯುಟ್ಟು ಅಗ್ಗವಣಿಯ ಕೊಡವನ್ನು ಹೊತ್ತು ಹೂ ಪತ್ರಗಳನ್ನು ತೆಗೆದುಕೊಂಡು ಪೂಜೆಗೆಂದು ಬೆಟ್ಟ ಹತ್ತಿ ಬಂದನು. ದೇವಾಲಯದ ಬಾಗಿ ಲಿಗೆ ಬಂದು ನೋಡಿದರೆ ಮೊದಲಿಗಿಂತಲೂ ನಾಲ್ಮಡಿ ಹೇಸಿಕೆಯಾಗಿತ್ತು. ಕಂಡು ಒಳಕ್ಕೆ ಹೋಗದೆ ಸಿಡಿಮಿಡಿಗೊಂಡು ಹೊತ್ತ ಆಗ್ಗವಣಿ ಸಹಿತ ನಾಗಿಯೆ ಬೆರಗಾಗಿ ನಿಂತನು. “ ಎತ್ತ ಹೋದೆ, ಶಿವನೇ ? ಇಲ್ಲಿ ನಿನ್ನ ಹೊಲಬಿಲ್ಲ. ಕಾಳಹಸ್ತೀಶ್ವರನೇ ಹೀಗೆ ಮಾಡಿಸುವರೇ ? ಇಂಥ ಅನಾಚಾರಕ್ಕೆ ಎಡೆಗೊಡುವರೆ ? ಪ್ರಾಣಿಯನ್ನು ಕೊಲ್ಲಬಿಡುವುದು ಇದು ಧರ್ಮವೆ ? ಅವನಿಗೆ ಅಡವಿಯಲ್ಲಿ ಬೇರೆ ಎಲ್ಲಿಯೂ ಎಡೆಯಿರಲಿಲ್ಲವೆ ? ಈ ಮರುಳುತನಕ್ಕೇನು ಮಾಡಲಿ ? ಹೇಗೆ ಬಂದು ಅರ್ಚಿಸಲಿ ? ಇಂದು ಮೊದ ಲಾಗಿ ನಾನು ಬರುವುದಿಲ್ಲ ; ಇತ್ತ ಸುಳಿಯುವುದಿಲ್ಲ. ಮೊದಲು ಅವನನ್ನು ಕೊಲ್ಲುತ್ತೇನೆ ; ಆಮೇಲೆ ಬಂದು ಅರ್ಚಿಸುತ್ತೇನೆ” ಎಂದು ನೊಂದು ನೊಂದು ನುಡಿಯುತ್ತಿದ್ದನು. ಹಾಗೆ ನುಡಿಯುತ್ತಲೆ ಅಗ್ಗವಣಿ ಹೂ ಪತ್ರೆ ಗಳನ್ನು ಒಂದು ಕಡೆ ಇಟ್ಟು, ಗುಡಿಯನ್ನು ಗುಡಿಸಿ ಸಾರಿಸಿ ಚೊಕ್ಕಟಮಾಡಿ ದನು, ಬಳಿಕ ಕ್ರಮವಾಗಿ ಅಭಿಷೇಕ ಅಲಂಕಾರ ಧೂಪ ದೀಪ ನೈವೇದ್ಯಾದಿ ಗಳಿಂದ ಅರ್ಚಿಸಿದನು. ಆದರೂ ಅವನಿಗೆ ದೇವನ ಮೇಲೆ ಕೋಪ, ಎಂದೂ ಇಲ್ಲದ ದುರಾಚಾರಕ್ಕೆ ಅವಕಾಶಕೊಟ್ಟನಲ್ಲಾ ಎಂದು. ಹಾಗೆ ಹೇಸಿಕೆ ಮಾಡುವವನನ್ನು ಕೊಲ್ಲುವ ಸಂಕಲ್ಪ ಮಾಡಿಕೊಂಡು ಬ್ರಾಹ್ಮಣ ಹೊರಟು ಹೋದನು.