ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಹಾಗೆ, ಉಂಗುಷ್ಠದ ಕುರುಹಿನಿಂದ ಲಿಂಗದ ಮೇಲಿಟ್ಟು ಲಿಂಗಕ್ಕೆ ಕಣ್ ಕೊಳಿ ಸಿದನು. ಇನ್ನು ಸುಮ್ಮನಿರಬಾರದೆಂದು ಶಿವಲಿಂಗದಿಂದ ಶಿವ ಉದ್ಭವಿಸಿ ಬಂದು ಭಕ್ತಿ ಕುಶಲನಾದ ಕಣ್ಣಪ್ಪನನ್ನು ಕೈಹಿಡಿದೆತ್ತಿದನು. ಆಗ ಹೂಮಳೆ ಸುರಿ ಯಿತು ; ದೇವದುಂದುಭಿಗಳು ಮೊಳಗಿದವು, ನಂದೀಶ ವೀರಭದ್ರಾದಿ ಗಣ ಗಳೂ ಇಂದ್ರಾದಿ ದೇವತೆಗಳೂ ಬಂದು ನೆರೆದರು. ಆಗ ಶಿವನು ( ಕಂಡೆಯಾ ಗಿರಿಜೆ, ನನ್ನ ಪ್ರೀತಿಯ ಪ್ರಾಣವಾದವನನ್ನು ? ಇಂಥ ಭಕ್ತನನ್ನು ಕಂಡು ಬಲ್ಲೆಯಾ, ಗಿರಿಜೆ ? ಕೇಳಿಬಲ್ಲೆಯಾ ಗಿರಿಜೆ ? ಎಂದು ಕೇಳಿದನು. ಕಣ್ಣಪ್ಪನನ್ನು ನೋಡಿ ಪುಳಕವೇರುತ್ತಿರಲು ಬಿಗಿದಪ್ಪಿಕೊಂಡನು. ಅಪ್ಪಿ, ಭಾವು, ಕಣ್ಣಪ್ಪಾ, ಭಾವು, ಎಲ್ಲರಿಗೂ ಕಣ್ಣು ಕೊಡುವವನು ನಾನು. ಅದು ತಪ್ಪಿ, ಇಲ್ಲಿ ನೀನೇ ನನಗೆ ಕಣ್ಣು ಕೊಟ್ಟೆ. ನನ್ನ ಕಣ್ಣ ನೀನೆ, ಪುಣ್ಯವೂ ನೀನೆ, ನನಗೆ ಪುತ್ರನೂ ನೀನೆ, ಮಿತ್ರನೂ ನೀನೆ, ಕಣ್ಣಪ್ಪಾ, ವಿಮಾನವನ್ನೇರು ” ಎಂದು ಕೊಂಡಾಡಿ ಕರೆದನು. ದೇವತೆಗಳೆಲ್ಲ ಚೋದ್ಯ ಪಟ್ಟರು.

  • ಕಣ್ಣಪ್ಪ ಕೈಮುಗಿದು, “ದೇವಾ, ಈ ಮೈಯೊಡನೆಯೆ ಬರಲೆ ? ಅಪ್ಪಣೆ ಯಾಗಬೇಕು” ಎಂದು ಬಿನ್ಮಯಿಸಿದನು. ಆ ಮಾತುಕೇಳಿ ಈಶ್ವರನು, (( ಈ ದೇಹ ಇಲ್ಲಿ ಮೆರೆಯುತ್ತಿರಲಿ” ಎಂದು ನುಡಿದು ಬೇರೊಂದು ನಿರ್ಮಲ ದಿವ್ಯ ದೇಹವನ್ನು ತಂದು ಅದರಲ್ಲಿ ಕಣ್ಣಪ್ಪನನ್ನು ಹೊಗಿಸಿ, ತನಗೆ ಕಣ್ಣು ಕೊಟ್ಟವನನ್ನು ವಿಮಾನದಲ್ಲಿ ಕೂರಿಸಿಕೊಂಡು ಸರ್ವಸಂಭ್ರಮದಿಂದ ಕೈಲಾ ಸಕ್ಕೆ ನಡೆದನು. ಅಲ್ಲಿ ಆಸ್ಥಾನದಲ್ಲಿ ಆನಂದಪೂರ್ಣನಾಗಿ ಭದ್ರಾಸನದ ಮೇಲೆ ಕುಳಿತು, ಕಣ್ಣ ಪ್ರನನ್ನು ಕರೆದು ಗಣಪದವಿಯನ್ನು ಕೊಟ್ಟನು. ಭಕ್ತರ ಸುಖವೇ ತನ್ನ ಸುಖ ; ಭಕ್ತರ ಮುಖವೇ ತನ್ನ ಮುಖ ; ಭಕ್ತರ ಜೀವನೇ ತನ್ನ ಜೀವ; ಭಕ್ಕರ ಕಾಯವೇ ತನ್ನ ಕಾಯ ಎನ್ನಿಸುವ ಶಿವನು ಕಣ್ಣಪ್ಪನ ಭಕ್ತಿಯ ಕಥೆಯನ್ನು ತನ್ನ ಗಣಗಳಿಗೆಲ್ಲ ಹೇಳಿ ಹಿಗ್ಗುತ್ತಿದ್ದನು. ತ್ರೈಲೋಕ್ಯರಕ್ಷಾ ದಕ್ಷನಾದ ಹಂಪೆಯ ವಿರೂಪಾಕ್ಷನು ಹೀಗೆ ಒಪ್ಪುತ್ತಿದ್ದನು.