ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕಿನ್ನರ ಬೊಮ್ಮಯ್ಯ టన్నుడి [ ರನ್ನರಡನೆಯ ಶತಮಾನ ಕನ್ನಡ ನಾಡಿನಲ್ಲಿ ಒಂದು ಪರಿವರ್ತನೆಯ ಕಾಲ, ಆಗ ಧರ್ಮ ಏಷಯನಾದ ಚಳವಳಿ ನಡೆಯಿತು ; ಸಮಾಜದ ಸ್ಥಿತಿಯಲ್ಲಿ ಹೊಸ ಮಾಪಾ೯ಟು ಕಳೆದೋರಿತು ; ರಾಜಕೀಯದಲ್ಲೂ ಹೆಚ್ಚು ಕಡಮಯಾಯಿತು. ಈ ವರ್ಷಟು ವಿಶೇಷವಾಗಿ ವೀರಶೈವ ಮತಪ್ರಚಾರದಿಂದ ಉಂಟಾಯಿತನ್ನ ಬಹುದು, ಆಗಿನ ಆ ಹೊಸ ಚಳವಳಿಗೆ ಒಂದು ಸ್ಪಷ್ಟ ರೂಪ ಕೊಟ್ಟು ಮುಂದು ವರಿಸಿದವರು ಭಕ್ತಿ ಭಂಡಾರಿ ಬಸವಣ್ಣನವರು, ಜಾತಿ ವೃತ್ತಿ ನಿದ್ವತ್ತುಗಳ ಕೀಳು ಮೇಲುಗಳನ್ನೆಣಿಸದ ಶಿವಭಕ್ತಿಯಲ್ಲಿ ಸರ್ವ ಸಮಾನತೆಯನ್ನು ಬಸವಣ್ಣನವರು ಆಚರಣೆಗೆ ತಂದರು. ಅವರ ಸಂಥ ವಿಶೇಷ ಕಾಗಿ ನಾಡಿನ ಸಾಧಾರಣ ಜನರಿಗೆ ಹೆಚ್ಚು ಮುಚ್ಚಿಕೆಯಾಯಿತು. ಇದಕ್ಕನುಸಾರ ವಾಗಿ ಅವರ ಅವರಿಗೆ ಪ್ರೇರಕರಾಗಿದ್ದ ಇತರ ವಚನಕಾರರೂ ನಾಡುನುಡಿಯಾದ ಕನ್ನಡದಲ್ಲಿ ಧರ್ಮಬೋಧೆ ಮಾಡಿದರು,

  • ಇದರ ಪರಿಣಾಮವಾಗಿ ಅಲ್ಲಿಂದ ಈಚನ ಸಾಹಿತ್ಯದಲ್ಲೂ ಪರಿವರ್ತನೆಯುಂಟ ಯಿತು. ಅದುವರೆಗೆ, ಆಸ್ಥಾನದ ಪ್ರೌಢ ಶcಡಿತರ ಮತ್ತು ರಾಜರ ಮಟ್ಟಿಗೆಯನ್ನೆ ಹೆಚ್ಚಾಗಿ ಲಕ್ಷದಲ್ಲಿಟ್ಟುಕೊಂಡು ಸಂಸ್ಕೃತ ತುಂಬಿದ ಪ್ರೌಢ ಶೈಲಿಯಲ್ಲಿ ಕಾವ್ಯ ಗಳನ್ನು ರಚಿಸುತ್ತಿದ್ದರು. ಆ ಚ ಕನ್ನಡದ ಛಂದಸ್ಸು ಕೂಡ ಹೆಚ್ಚಾಗಿ ಬಳಕೆಯಲ್ಲಿರ ಲಿಲ್ಲ. ಬಸವಣ್ಣನವರ ಆನಂತರದ ಸಾಹಿತ್ಯದಲ್ಲಿ ಈ ಸ್ಥಿತಿ ಬದಲಾಯಿಸಿತು. ಆಚ್ಚ ಕನ್ನಡ ನುಡಿಗೂ ಸಾಮಾನ್ಯರಿಗೆ ಅರ್ಥವಾಗುವ ಸುಲಭ ಶೈಲಿಗೂ ಹೆಚ್ಚು ಪ್ರಾಮುಖ್ಯ ಬಂತು. ರಗಳೆ, ಪಟ್ಟದಿ, ಸಾಂಗತ್ಯ ಮುಂತಾದ ಜನಪ್ರಿಯವಾದ ಛಂದಸ್ಸುಗಳಲ್ಲಿ ಕಾವ್ಯ ರಚನೆಯಾಗತೊಡಗಿತು, ಭಾಷೆಯ ಸರಳವಾಗುತ್ತ ಬಂತು, ಸಾಹಿತ್ಯದಲ್ಲಾದ ಈ ಬಗೆಯ ಮಾರ್ಪಾಟುಗಳಿಗೆ ಜೀವಕೊಟ್ಟವನು Kಂಸೆಯ ಹರಿಹರೇಶ್ವರ ಕಪಿ.

- ಹರಿಹರ ಹೊಯ್ಸಳ ರಾಜರ ಆಸ್ಥಾನದಲ್ಲಿ ಕರಣಿಕರ ಮುಖ್ಯನಾಗಿದ್ದನಂತೆ. ಆತನ ಭಕ್ತಿಪರವಶತೆಯನ್ನು ಕಂಡು ದೊರೆ ಆತನಿಗೆ ಅಧಿಕಾರದ ಹೊರೆಯನ್ನು ತಪ್ಪಿಸಿ ಆತನನ್ನು ಪಂಪಾಕ್ಷೇತ್ರಕ್ಕೆ ಕಳಿಸಿಕೊಟ್ಟ ಸಂತ, ಅಲ್ಲಿ ವಿರೂಪಾಕ್ಷನನ್ನು ಭಕ್ತಿಯಿಂದ ಪೂಜಿಸುತ್ರ ಹರಿಹರ ಆನೇಕ ಕಾವ್ಯಗಳನ್ನು ರಚಿಸಿದನಂತೆ. - ಹೀಗೆಂದು ಅವನ ವಿಷಯದಲ್ಲಿ ಒಂದು ಪ್ರತೀತಿಯಿದೆ. ಅವನು ರಾಜಾಸ್ಥಾನದಲ್ಲಿದ್ದು, ಆ ಸೇವಾವೃಷ್ಟಿಯಿಂದ ಬಿಡುಗಡೆ ಹೊಂದಿ ಹಂಸ್ಥೆಯಲ್ಲಿ ನೆಲಸಿದನೆಂಬುದಕ್ಕೆ ಅವನ ಗ್ರಂಥಗಳಲ್ಲೂ ಸೂಚನೆ ಕಂಡುಬರುತ್ತದೆ, ಯಾವ ರಾಜನ ಆಸ್ಥಾನದಲ್ಲಿ, ಯಾವ ಅಧಿಕಾರದಲ್ಲಿ ಇದ್ದನೆಂಬಿವೇ ಮೊದಲಾದ ಯಾವ ಸಂಗತಿಯ ಗೊತ್ತಾಗುವುದಿಲ್ಲ.