ಈ ಪುಟವನ್ನು ಪ್ರಕಟಿಸಲಾಗಿದೆ
ಸಂಭಾಷಣ
೧೧೭

ಕುಳಿತ ಸ್ಥಳದಿಂದ ಎದ್ದು, ಮತ್ತೆ ರಣಮಸ್ತಖಾನನಿಗೆ ನೀವು ನನ್ನ ಮಾತು ಕೇಳುವಹಾಗಿದ್ದರೆ, ಇವರನ್ನು ನಮ್ಮ ರಮ್ಯೋದ್ಯಾನಕ್ಕೆ ಕರಕೊಂಡು ಹೋಗಿ, ಅಲ್ಲಿ ಉಪಾಹಾರ ಮಾಡಿರಿ. ವಿಶ್ರಾಂತಿಯನ್ನು ಹೊಂದಿದಬಳಿಕ, ಇವರನ್ನು ಕುಂಜವನಕ್ಕೆ ಕರಕೊಂಡು ಹೋಗಿರಿ. ಇವರಿಗೆ ಬೇಕಾಗುವ ಮೇಣೆ ಮೊದಲಾದವುಗಳ ವ್ಯವಸ್ತೆಯನ್ನು ನಾನು ಮಾಡಿಸುತ್ತೇನೆ, ಅನ್ನಲು ಅದನ್ನು ಕೇಳಿ, ಆ ತರುಣಿಯು ಮತ್ತೊಮ್ಮೆ ಸಂತಾಪದಿಂದ- “ಇನ್ನು ನಾನು ನಿಮ್ಮ ಗಡಿಯಲ್ಲಿ ಅನ್ನೋದಕ ಗ್ರಹಣ ಮಾಡುವದಂತು ಇರಲಿ, ಉಗುಳು ಸಹ ಗುಟಕರಿಸುವ ಹಾಗಿಲ್ಲ. ಇನ್ನು ಈ ಜಗತ್ತಿನಲ್ಲಿ ನನ್ನದೇನು ಆಗಬೇಕಾಗಿದೆ ? ನನ್ನ ತಂದೆಯು......” ಎಂದು ನುಡಿಯುತ್ತಿರಲು, ಮುಂದಿನ ಶಬ್ದಗಳು ಆಕೆಯ ಮುಖದಿಂದ ಹೊರಡದಾದವು. ಆಕೆಯ ಕಣ್ಣುಗಳೊಳಗಿಂದ ಒಂದೇಸಮನೆ ನೀರುಗಳು ಸುರಿಯಹತ್ತಿದವು. ಅದನ್ನು ನೋಡಿ ರಾಮರಾಜನು ಮತ್ತೊಮ್ಮೆ ರಣಮಸ್ತಖಾನನಿಗೆ- “ನಾನು ಇನ್ನು ವಿಶೇಷ ಹೇಳುವದಿಲ್ಲ. ಈ ನಮ್ಮ ಮನುಷ್ಯನನ್ನು ನಿಮ್ಮ ವಶಕ್ಕೆ ಕೊಟ್ಟಿರುತ್ತೇನೆ. ಆತನು ನಿಮಗೆ ಬೇಕಾದ ಅನುಕೂಲತೆಯನ್ನು ಮಾಡಿಕೊಡುವನು” ಎಂದು ಹೇಳಿ ಅಲ್ಲಿಂದ ಹೊರಟುಹೋದನು. ರಾಮರಾಜನು ಹೊರಟು ಹೋದ ಬಳಿಕ ರಣಮಸ್ತಖಾನನ ಮೈಮೇಲೆ ಎಚ್ಚರ ಬಂದಂತಾಯಿತು. ಆಮೇಲೆ ಆತನು ಆ ಸುಂದರಿಯ ಕಡೆಗೆ ಹೊರಳಿ- “ಈ ಹದ್ದಿನಲ್ಲಿ ನೀರು ಸಹ ಕುಡಿಯಲಿಕ್ಕಿಲ್ಲೆಂದು ನೀವು ಹೇಳಿದ್ದು ಯೋಗ್ಯವೇ ಸರಿ, ಆದರೆ ಕುಂಜವನವು ಇಲ್ಲಿಂದ ದೂರವಿರುವದರಿಂದ ಸ್ವಲ್ಪ ಉಪಾಹಾರ ಮಾಡುವದು ನೆಟ್ಟಗೆ ಕಾಣುತ್ತದೆ, ಸುಮ್ಮನೆ ಉಪವಾಸ ಬಿದ್ದರೆ ಪ್ರಯೋಜನವಾಗದು” ಎಂದು ಹೇಳಲು, ಆ ತರುಣಿಯು ಅದಕ್ಕೆ ಒಪ್ಪಲಿಲ್ಲ. ಆಮೇಲೆ ರಣಮಸ್ತಖಾನನು, ಆಗ್ರಹಮಾಡದೆ ರಾಮರಾಜನ ಸೇವಕನಿಗೆ ಹೇಳಿ ತನಗೆ ಬೇಕಾದ ಅನುಕೂಲತೆಯನ್ನು ಮಾಡಿಸಿಕೊಂಡು ಆ ಸ್ತ್ರೀಯರೊಡನೆ ಬೇಗನೆ ಕುಂಜವನದ ಕಡೆಗೆ ಸಾಗಿದನು.

ಈ ಮೊದಲೆ ಕುಂಜವನದಿಂದ ವಿಜಯನಗರಕ್ಕೆ ಬರುವಾಗ ರಣಮಸ್ತಖಾನನು ತನ್ನ ಕುದುರೆಯನ್ನು ವೇಗದಿಂದ ಬಿಟ್ಟಂತೆ ಈಗ ಬಿಡುವಹಾಗಿದ್ದಿಲ್ಲ; ಯಾಕೆಂದರೆ, ಆ ಸ್ತ್ರೀಯರ ಮೇಣೆ-ಡೋಲಿಗಳನ್ನು ಸರಿಸಿ ಆತನು ಈಗ ಹೋಗಬೇಕಾಗಿತ್ತು. ಹೀಗೆ ಸಾವಕಾಶವಾಗಿ ಹೋಗುವಾಗ ಆತನ ಮನಸಿನಲ್ಲಿ ಹಲವು ವಿಚಾರಗಳು ಉತ್ಪನ್ನವಾದವು. ಆ ತರುಣಿಯ ರೂಪಕ್ಕೆ ರಣಮಸ್ತಖಾನನು ಮೋಹಿತನಾಗಿದ್ದನು. ರಾಮರಾಜನು ಈ ತರುಣಿಯ ಬುರುಕಿಯನ್ನು ತೆಗೆಸಿ